For Quick Alerts
ALLOW NOTIFICATIONS  
For Daily Alerts

ಕುಸಿದಿದ್ದ ಸೆನ್ಸೆಕ್ಸ್ 500 ಪಾಯಿಂಟ್ಸ್‌ ಜಿಗಿತ: ನಿಫ್ಟಿ 1% ಏರಿಕೆ

|

ಸತತ ಕುಸಿತಕ್ಕೆ ಸಾಕ್ಷಿಯಾಗಿದ್ದ ಭಾರತೀಯ ಷೇರುಪೇಟೆ ಶುಕ್ರವಾರ ಜಿಗಿತ ಕಂಡಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 500 ಪಾಯಿಂಟ್ಸ್‌ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಶೇಕಡಾ 1ರಷ್ಟು ಜಿಗಿತಗೊಂಡಿದೆ.

ಭಾರತೀಯ ಕಾಲಮಾನ 9.16ರ ಸಮಯಕ್ಕೆ ಸೆನ್ಸೆಕ್ಸ್ 487.40 ಪಾಯಿಂಟ್ ಅಥವಾ ಶೇಕಡಾ 1.01ರಷ್ಟು ಏರಿಕೆಗೊಂಡು 48,927.52 ಕ್ಕೆ ತಲುಪಿದೆ. ನಿಫ್ಟಿ 152.90 ಪಾಯಿಂಟ್ ಅಥವಾ ಶೇಕಡ 1.07ರಷ್ಟು ಏರಿಕೆಗೊಂಡು 14,477.80 ಪಾಯಿಂಟ್ಸ್‌ಗೆ ತಲುಪಿದೆ.

ಕುಸಿದಿದ್ದ ಸೆನ್ಸೆಕ್ಸ್ 500 ಪಾಯಿಂಟ್ಸ್‌ ಜಿಗಿತ: ನಿಫ್ಟಿ 1% ಏರಿಕೆ

ಆರಂಭಿಕ ವಹಿವಾಟಿನಲ್ಲಿ ಸುಮಾರು 1036 ಷೇರುಗಳು ಏರಿಕೆಗೊಂಡರೆ, 222 ಷೇರುಗಳು ಕುಸಿದವು, ಮತ್ತು 48 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಗೇಲ್ ಷೇರು ಸುಮಾರು 4 ರೂ.ಗಳಿಂದ 131.60 ರೂ., ಟಾಟಾ ಮೋಟಾರ್ಸ್ ಷೇರುಗಳು ಸುಮಾರು 8 ರೂ.ಗಳ ಏರಿಕೆ ಕಂಡು 293.30 ರೂ., ಮಹೀಂದ್ರಾ ಮತ್ತು ಮಹೀಂದ್ರಾ ಷೇರುಗಳು ಸುಮಾರು 20 ರೂ.ಗಳಷ್ಟು ಏರಿಕೆಯಾಗಿ 811.55 ರೂ., ಹಿಂಡಾಲ್ಕೊ ಷೇರು ಸುಮಾರು 8 ರೂ.ಗಳಿಂದ 321.75 ರೂ., ಅದಾನಿ ಪೋರ್ಟ್ಸ್ ಷೇರು ಸುಮಾರು 16 ರೂ.ಗಳ ಏರಿಕೆ ಕಂಡು 703.85 ರೂ. ತಲುಪಿದೆ.

English summary

Sensex Up 500 Points: Nifty Jumps 1 Percent

Sensex was up 487.40 points or 1.01% at 48,927.52, and the Nifty was up 152.90 points or 1.07% at 14,477.80.
Story first published: Friday, March 26, 2021, 10:06 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X