For Quick Alerts
ALLOW NOTIFICATIONS  
For Daily Alerts

Closing Bell: ಸೆನ್ಸೆಕ್ಸ್ 508 ಪಾಯಿಂಟ್ಸ್‌ ಚೇತರಿಕೆ, ನಿಫ್ಟಿ 14,500 ಪಾಯಿಂಟ್ಸ್‌ ಸಮೀಪ

|

ಕೋವಿಡ್‌-19 ಸಾಂಕ್ರಾಮಿಕ ಹೊರತಾಗಿಯೂ ಭಾರತೀಯ ಷೇರುಪೇಟೆ ಸೋಮವಾರ ಭಾರೀ ಚೇತರಿಕೆಗೊಂಡಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ 508 ಪಾಯಿಂಟ್ಸ್‌ ಹೆಚ್ಚಳಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 14,500 ಪಾಯಿಂಟ್ಸ್‌ ಗಡಿ ಸಮೀಪಿಸಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 508.06 ಪಾಯಿಂಟ್ಸ್‌ ಅಥವಾ ಶೇಕಡಾ 1.06ರಷ್ಟು ಏರಿಕೆಗೊಂಡು 48,386.51 ಪಾಯಿಂಟ್ಸ್‌ ಮುಟ್ಟಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 143.60 ಪಾಯಿಂಟ್ಸ್ ಅಥವಾ ಶೇಕಡಾ 1ರಷ್ಟು ಏರಿಕೆಗೊಂಡು 14,485 ಪಾಯಿಂಟ್ಸ್ ತಲುಪಿದೆ.

ಸೆನ್ಸೆಕ್ಸ್ 508 ಪಾಯಿಂಟ್ಸ್‌ ಏರಿಕೆ, ನಿಫ್ಟಿ ಕೂಡ ಹೆಚ್ಚಳ

ದಿನದ ವಹಿವಾಟು ಅಂತ್ಯದಲ್ಲಿ ಇಂದು ಸುಮಾರು 1,841 ಷೇರುಗಳು ಏರಿಕೆಗೊಂಡರೆ, 1,094 ಷೇರುಗಳು ಇಳಿಕೆಗೊಂಡಿವೆ ಮತ್ತು 216 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಆಕ್ಸಿಸ್ ಬ್ಯಾಂಕ್, ಅಲ್ಟ್ರಾಟೆಕ್ ಸಿಮೆಂಟ್, ಐಸಿಐಸಿಐ ಬ್ಯಾಂಕ್, ಜೆಎಸ್‌ಡಬ್ಲ್ಯೂ ಸ್ಟೀಲ್ ಮತ್ತು ಗ್ರಾಸಿಮ್ ಇಂಡಸ್ಟ್ರೀಸ್ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿದ್ದು, ಸಿಪ್ಲಾ, ಬ್ರಿಟಾನಿಯಾ ಇಂಡಸ್ಟ್ರೀಸ್, ಎಚ್‌ಸಿಎಲ್ ಟೆಕ್ನಾಲಜೀಸ್, ಬಿಪಿಸಿಎಲ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಕುಸಿತಗೊಂಡ ಷೇರುಗಳಾಗಿವೆ.

ಫಾರ್ಮಾ ಹೊರತುಪಡಿಸಿ, ಇತರ ವಲಯ ಸೂಚ್ಯಂಕಗಳು ಹಸಿರು ಬಣ್ಣದಲ್ಲಿ ಕೊನೆಗೊಂಡಿವೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಶೇಕಡಾ 0.6 ರಿಂದ 0.9 ರಷ್ಟು ಏರಿಕೆಯಾಗಿದೆ.

ಇನ್ನು ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಖರೀದಿಯ ಮಧ್ಯೆ ಭಾರತೀಯ ರೂಪಾಯಿ ಮೌಲ್ಯವು ಪ್ರತಿ ಡಾಲರ್‌ಗೆ 74.72 ರೂಪಾಯಿಗೆ ತಲುಪಿದೆ.

English summary

Sensex Up 508 Points: Nifty Ends Near 14,500

Sensex was up 508.06 points or 1.06% at 48386.51, and the Nifty was up 143.60 points or 1.00% at 14485.
Story first published: Monday, April 26, 2021, 16:01 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X