For Quick Alerts
ALLOW NOTIFICATIONS  
For Daily Alerts

Closing Bell: ಸೆನ್ಸೆಕ್ಸ್ 514 ಪಾಯಿಂಟ್ಸ್ ಏರಿಕೆ, ನಿಫ್ಟಿ 147 ಪಾಯಿಂಟ್ಸ್‌ ಹೆಚ್ಚಳ

|

ಭಾರತೀಯ ಷೇರುಪೇಟೆ ಸೋಮವಾರ ಭಾರೀ ಜಿಗಿತ ಕಂಡಿದ್ದು, ಸಕಾರಾತ್ಮಕವಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 514 ಪಾಯಿಂಟ್ಸ್‌ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 147 ಪಾಯಿಂಟ್ಸ್‌ ಹೆಚ್ಚಾಗಿದೆ.

 

ಬಿಟ್‌ಕಾಯಿನ್ ಸೇರಿದಂತೆ ಇತರೆ ಕ್ರಿಪ್ಟೋಕರೆನ್ಸಿಗಳ ಮೇ 31ರ ಬೆಲೆ ಇಲ್ಲಿದೆಬಿಟ್‌ಕಾಯಿನ್ ಸೇರಿದಂತೆ ಇತರೆ ಕ್ರಿಪ್ಟೋಕರೆನ್ಸಿಗಳ ಮೇ 31ರ ಬೆಲೆ ಇಲ್ಲಿದೆ

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ ಶೇಕಡಾ 1ರಷ್ಟು ಅಥವಾ 514.56 ಪಾಯಿಂಟ್ಸ್ ಏರಿಕೆಗೊಂಡು 51937.44 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 0.95ರಷ್ಟು ಅಥವಾ 147.10 ಪಾಯಿಂಟ್ಸ್ ಹೆಚ್ಚಾಗಿ 15582.80 ಪಾಯಿಂಟ್ಸ್‌ ಮುಟ್ಟಿದೆ.

 
ಸೆನ್ಸೆಕ್ಸ್ 514 ಪಾಯಿಂಟ್ಸ್ ಏರಿಕೆ, ನಿಫ್ಟಿ 147 ಪಾಯಿಂಟ್ಸ್‌ ಹೆಚ್ಚಳ

ದಿನದ ವಹಿವಾಟು ಅಂತ್ಯಕ್ಕೆ 1717 ಷೇರುಗಳು ಏರಿಕೆಗೊಂಡರೆ, 1449 ಷೇರುಗಳು ಕುಸಿದವು, ಮತ್ತು 187 ಷೇರುಗಳ ಮೌಲ್ಯದಲ್ಲಿ ಬದಲಾಗಿಲ್ಲ.

ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್, ಜೆಎಸ್‌ಡಬ್ಲ್ಯೂ ಸ್ಟೀಲ್, ಭಾರ್ತಿ ಏರ್‌ಟೆಲ್ ಮತ್ತು ಡಾ. ರೆಡ್ಡಿ ಲ್ಯಾಭ್ಸ್‌ ಹೆಚ್ಚು ಲಾಭ ಗಳಿಸಿದ ಷೇರುಗಳಾಗಿದ್ದು, ಎಂ & ಎಂ, ಅದಾನಿ ಪೋರ್ಟ್ಸ್, ಎಲ್ ಅಂಡ್ ಟಿ, ಇನ್ಫೋಸಿಸ್ ಮತ್ತು ಐಒಸಿ ನಷ್ಟ ಅನುಭವಿಸಿವೆ.

ಐಟಿ, ಆಟೋ ಮತ್ತು ಪಿಎಸ್‌ಯು ಬ್ಯಾಂಕ್ ಹೊರತುಪಡಿಸಿ ಇತರ ಎಲ್ಲ ವಲಯ ಸೂಚ್ಯಂಕಗಳು ಹಸಿರು ಬಣ್ಣದಲ್ಲಿ ಕೊನೆಗೊಂಡಿವೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಸಹ ಹೆಚ್ಚಿನ ಮಟ್ಟದಲ್ಲಿ ಕೊನೆಗೊಂಡಿವೆ.

ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಖರೀದಿಯ ಮಧ್ಯೆ ಡಾಲರ್ ಎದುರು ಭಾರತೀಯ ರೂಪಾಯಿ ದಿನದ ಕನಿಷ್ಠ 72.62 ಕ್ಕೆ ಕೊನೆಗೊಂಡಿತು.

English summary

Sensex Up 514 Points: Nifty Ends Above 15550

Sensex was up 514.56 points or 1% at 51937.44, and the Nifty was up 147.10 points or 0.95% at 15582.80.
Story first published: Monday, May 31, 2021, 16:28 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X