Closing Bell: ಸೆನ್ಸೆಕ್ಸ್ 53 ಪಾಯಿಂಟ್ಸ್‌ ಕುಸಿತ, ನಿಫ್ಟಿ 15,750 ಮಟ್ಟಕ್ಕಿಂತ ಇಳಿಕೆ

ಭಾರತೀಯ ಷೇರುಪೇಟೆ ಮಂಗಳವಾರ ನಕಾರಾತ್ಮಕವಾಗಿ ವಹಿವಾಟು ಕೊನೆಗೊಳಿಸಿದೆ. ಬೃಹತ್ ಬ್ಯಾಂಕುಗಳಾದ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಎಕ್ಸಿಸ್‌ ಬ್ಯಾಂಕ್‌ಗಳು ಕುಸಿತವು ಬ್ಯಾಂಕ್‌ ನಿಫ್ಟಿ ಇಳಿಕೆಗೆ ಕಾರಣವಾಗಿವೆ.

ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 53 ಪಾಯಿಂಟ್ಸ್‌ ಅಥವಾ ಶೇಕಡಾ 0.10ರಷ್ಟು ಕುಸಿದು 52,275.57 ಪಾಯಿಂಟ್ಸ್‌ ತಲುಪಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 12 ಪಾಯಿಂಟ್ಸ್‌ ಅಥವಾ ಶೇಕಡಾ 0.07ರಷ್ಟು ಇಳಿಕೆಗೊಂಡು 15740.10 ಪಾಯಿಂಟ್ಸ್‌ ಮುಟ್ಟಿದೆ.

ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕವು ಶೇಕಡಾ 0.38 ರಷ್ಟು ಲಾಭದೊಂದಿಗೆ ಕೊನೆಗೊಂಡರೆ, ಸ್ಮಾಲ್‌ಕ್ಯಾಪ್ ಸೂಚ್ಯಂಕವು ಶೇಕಡಾ 0.93ರಷ್ಟು ಹೆಚ್ಚಾಗಿದೆ.

ಏರಿಕೆಗೊಂಡ ಷೇರುಗಳು:

ಏರಿಕೆಗೊಂಡ ಷೇರುಗಳು:

ಟೆಕ್ ಮಹೀಂದ್ರಾ ಷೇರು 23 ರೂ.ಗಳ ಏರಿಕೆ ಕಂಡು 1,057.75 ರೂ., ಟಾಟಾ ಮೋಟಾರ್ಸ್‌ನ ಷೇರುಗಳು 7 ರೂ.ಗಳ ಲಾಭದೊಂದಿಗೆ 352.75 ರೂ., ಭಾರ್ತಿ ಏರ್‌ಟೆಲ್‌ನ ಷೇರುಗಳು 10 ರೂ.ಗಳ ಏರಿಕೆ ಕಂಡು 546.80 ರೂ., ಎಚ್‌ಸಿಎಲ್ ಟೆಕ್ ಷೇರುಗಳು 18 ರೂ.ಗಳ ಏರಿಕೆ ಕಂಡು 967.20 ರೂ., ಐಒಸಿಯ ಷೇರು ಸುಮಾರು 2 ರೂ.ಗಳ ಲಾಭದೊಂದಿಗೆ 116.70 ರೂ. ಲಾಭಗಳಿಸಿದೆ.

ಇಳಿಕೆಗೊಂಡ ಷೇರುಗಳು:

ಇಳಿಕೆಗೊಂಡ ಷೇರುಗಳು:

ಹಿಂಡಾಲ್ಕೊ ಷೇರು ಸುಮಾರು 7 ರೂ. ಇಳಿಕೆಗೊಂಡು 387.75 ರೂ.ಗೆ ತಲುಪಿದ್ದು, ಟಾಟಾ ಸ್ಟೀಲ್ ಷೇರುಗಳು ಸುಮಾರು 18 ರೂ.ಗಳಷ್ಟು ಇಳಿಕೆಯಾಗಿ 1,111.10 ರೂ. ಮುಟ್ಟಿದೆ. ಎಚ್‌ಡಿಎಫ್‌ಸಿಯ ಷೇರು ಸುಮಾರು 31 ರೂ. ಕುಸಿದು 2,554.50 ರೂ.ಗೆ ತಲುಪಿದ್ದು, ಕೋಟಕ್ ಮಹೀಂದ್ರಾ ಷೇರುಗಳು 21 ರೂ.ಗಳಷ್ಟು ಇಳಿಕೆಯಾಗಿ 1,793.55 ರೂ., ಎಸ್‌ಬಿಐನ ಷೇರುಗಳು ಸುಮಾರು 5 ರೂ.ಗಳಷ್ಟು ಇಳಿಕೆಯಾಗಿ 427.20 ರೂ. ಮುಟ್ಟಿದೆ.

ಡಾಲರ್ ಎದುರು ರೂಪಾಯಿ ವಹಿವಾಟು

ಡಾಲರ್ ಎದುರು ರೂಪಾಯಿ ವಹಿವಾಟು

ಇನ್ನು ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಖರೀದಿ ಮಧ್ಯೆ ಭಾರತದ ರೂಪಾಯಿ ಮೌಲ್ಯ 72.88 ಕ್ಕೆ ತಲುಪಿದೆ. ಇದು ಹಿಂದಿನ 72.81 ರ ವಿರುದ್ಧ ಪ್ರತಿ ಡಾಲರ್‌ಗೆ 72.78 ಕ್ಕೆ ಸ್ವಲ್ಪ ಹೆಚ್ಚಾಗಿದೆ ಮತ್ತು 72.76 ರಿಂದ 72.91 ರ ವ್ಯಾಪ್ತಿಯಲ್ಲಿ ವಹಿವಾಟು ನಡೆಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+