ಭಾರತೀಯ ಷೇರುಪೇಟೆ ಮಂಗಳವಾರ ಸಕಾರಾತ್ಮಕ ಆರಂಭದೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 557 ಪಾಯಿಂಟ್ಸ್ ಏರಿಕೆಗೊಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 168 ಪಾಯಿಂಟ್ಸ್ ಹೆಚ್ಚಳಗೊಂಡಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 557.63 ಪಾಯಿಂಟ್ ಅಥವಾ ಶೇಕಡಾ 1.15ರಷ್ಟು ಏರಿಕೆಗೊಂಡು 48,944.14 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 1.16ರಷ್ಟು ಅಥವಾ 168 ಪಾಯಿಂಟ್ ಏರಿಕೆಗೊಂಡು 14,653 ಪಾಯಿಂಟ್ಸ್ ಏರಿಕೆಗೊಂಡಿದೆ.

ದಿನದ ವಹಿವಾಟು ಅಂತ್ಯಕ್ಕೆ ಸುಮಾರು 1,915 ಷೇರುಗಳು ಪ್ರಗತಿ ಸಾಧಿಸಿದ್ದು, 984 ಷೇರುಗಳು ಕುಸಿದಿವೆ ಮತ್ತು 158 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಎನ್‌ಎಸ್‌ಇನಲ್ಲಿ ಹಿಂಡಾಲ್ಕೊ ಇಂಡಸ್ಟ್ರೀಸ್, ಟಾಟಾ ಸ್ಟೀಲ್, ಲಾರ್ಸೆನ್ ಮತ್ತು ಟೌಬ್ರೊ, ಡಿವಿಸ್ ಲ್ಯಾಬ್ಸ್ ಮತ್ತು ಬಜಾಜ್ ಫೈನಾನ್ಸ್ ನಿಫ್ಟಿಯಲ್ಲಿ ಹೆಚ್ಚು ಲಾಭ ಗಳಿಸಿದ ಷೇರುಗಳಾಗಿದ್ದು, ಎಚ್‌ಡಿಎಫ್‌ಸಿ ಲೈಫ್, ಎಸ್‌ಬಿಐ ಲೈಫ್ ಇನ್ಶುರೆನ್ಸ್, ಮಾರುತಿ ಸುಜುಕಿ, ನೆಸ್ಲೆ ಮತ್ತು ಕೊಟಕ್ ಮಹೀಂದ್ರಾ ಬ್ಯಾಂಕ್ ನಷ್ಟ ಅನುಭವಿಸಿವೆ.


Click it and Unblock the Notifications