ಜಾಗತಿಕ ಮಟ್ಟದಲ್ಲಿ ಸಕಾರಾತ್ಮಕ ಸೂಚನೆಯ ಹಿನ್ನೆಲೆಯಲ್ಲಿ ಭಾರತೀಯ ಷೇರುಪೇಟೆ ಮಂಗಳವಾರ ಮತ್ತಷ್ಟು ಏರಿಕೆ ದಾಖಲಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 600 ಪಾಯಿಂಟ್ಸ್ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 200ಕ್ಕೂ ಅಧಿಕ ಪಾಯಿಂಟ್ಸ್ ಹೆಚ್ಚಳಗೊಂಡಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಬೆಳಿಗ್ಗೆ 11 ಗಂಟೆ ಸುಮಾರಿಗೆ 692 ಪಾಯಿಂಟ್ಸ್ ಅಥವಾ ಶೇಕಡಾ 1.40ರಷ್ಟು ಏರಿಕೆಗೊಂಡು 50272 ಪಾಯಿಂಟ್ಸ್ ತಲುಪಿದರೆ, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 203 ಪಾಯಿಂಟ್ಸ್ ಅಥವಾ ಶೇಕಡಾ 1.36 ರಷ್ಟು ಹೆಚ್ಚಾಗಿ 15126.30 ಪಾಯಿಂಟ್ಸ್ ಮುಟ್ಟಿದೆ.

ಏರಿಕೆಗೊಂಡ ಷೇರುಗಳು:
ವಹಿವಾಟು ಆರಂಭಗೊಂಡಾಗ ಹಿಂಡಾಲ್ಕೊ ಷೇರು ಸುಮಾರು 12 ರೂ.ಗಳಿಂದ 404.75 ರೂ., ಟಾಟಾ ಸ್ಟೀಲ್ ಷೇರುಗಳು ಸುಮಾರು 30 ರಿಂದ 1,181.20 ರೂ., ಇಂಡಸ್ಇಂಡ್ ಬ್ಯಾಂಕಿನ ಷೇರು ಸುಮಾರು 27 ರೂ.ಗಳ ಏರಿಕೆ ಕಂಡು 983.75 ರೂ., ಎಸ್‌ಬಿಐ ಷೇರು ಸುಮಾರು 9 ರೂ.ಗಳ ಲಾಭದೊಂದಿಗೆ 391.90 ರೂ., ಆಕ್ಸಿಸ್ ಬ್ಯಾಂಕ್ ಷೇರುಗಳು ಸುಮಾರು 16 ರಿಂದ 725.35 ರೂ. ತಲುಪಿದೆ. ಇನ್ನು ಇಂದು ಟಾಟಾ ಮೋಟಾರ್ಸ್ ನಾಲ್ಕನೇ ತ್ರೈಮಾಸಿಕ ವರದಿ ಪ್ರಕಟಗೊಳ್ಳುವ ಹಿನ್ನೆಲೆಯಲ್ಲಿ ಶೇಕಡಾ 2ರಷ್ಟು ಜಿಗಿತಗೊಂಡಿದೆ.
ಇಳಿಕೆಗೊಂಡ ಷೇರುಗಳು:
ಭಾರ್ತಿ ಏರ್‌ಟೆಲ್ ಷೇರುಗಳು ಸುಮಾರು 5 ರೂ.ಗಳ ಕುಸಿತ ಕಂಡು 544.30 ರೂ., ಬ್ರಿಟಾನಿಯದ ಷೇರುಗಳು ಸುಮಾರು 12 ರೂ.ಗಳಷ್ಟು ಇಳಿಕೆಯಾಗಿ 3,495.00 ರೂ.ಗೆ ಪ್ರಾರಂಭವಾಯಿತು. ಯುಪಿಎಲ್ ಷೇರು ಸುಮಾರು 1 ರೂ.ಗೆ ಇಳಿದು 769.90 ರೂ,. ಟಾಟಾ ಕನ್ಸೂಮರ್ ಷೇರುಗಳು ಸುಮಾರು 1 ರೂ. ಕುಸಿದು 652.40 ರೂ., ಶ್ರೀ ಸಿಮೆಂಟ್ ಷೇರುಗಳು 8 ರೂ.ಗಳಿಂದ 27,320.00 ರೂ.ಗೆ ಇಳಿದವು.


Click it and Unblock the Notifications