ಸೋಮವಾರ ಕುಸಿತಕ್ಕೆ ಸಾಕ್ಷಿಯಾಗಿದ್ದ, ಭಾರತೀಯ ಷೇರುಪೇಟೆ ಮಂಗಳವಾರ ಜಿಗಿತ ಕಂಡಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 660 ಪಾಯಿಂಟ್ಸ್ ಏರಿಕೆಗೊಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 194 ಪಾಯಿಂಟ್ಸ್ ಹೆಚ್ಚಳಗೊಂಡಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 1.38ರಷ್ಟು ಅಥವಾ 660.68 ಪಾಯಿಂಟ್ಸ್ ಹೆಚ್ಚಳಗೊಂಡು 48,544.06 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 1.36ರಷ್ಟು ಅಥವಾ 194 ಪಾಯಿಂಟ್ಸ್ ಏರಿಕೆಗೊಂಡು 14,504.80 ಪಾಯಿಂಟ್ಸ್‌ಗೆ ಮುಟ್ಟಿದೆ. ಇಂದು 1,900 ಷೇರುಗಳು ಏರಿಕೆಗೊಂಡರೆ, 915 ಷೇರುಗಳು ಕುಸಿತಗೊಂಡಿದ್ದು, 176 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಎನ್‌ಎಸ್‌ಇನಲ್ಲಿ ಎಂ & ಎಂ, ಬಜಾಜ್ ಫಿನ್‌ಸರ್ವ್, ಟಾಟಾ ಮೋಟಾರ್ಸ್, ಬಜಾಜ್ ಫೈನಾನ್ಸ್ ಮತ್ತು ಮಾರುತಿ ಸುಜುಕಿ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿದ್ದು, ಟಿಸಿಎಸ್, ಡಾ. ರೆಡ್ಡಿ ಲ್ಯಾಬೋರೇಟರಿಸ್, ಟೆಕ್ ಮಹೀಂದ್ರಾ, ವಿಪ್ರೋ ಮತ್ತು ಹೆಚ್‌ಸಿಎಲ್ ಟೆಕ್ನಾಲಜೀಸ್ ಹೆಚ್ಚು ನಷ್ಟಗೊಂಡಿವೆ.
ಆಟೊಮೊಬೈಲ್, ಪಿಎಸ್‌ಯು ಬ್ಯಾಂಕ್, ಮೆಟಲ್ ಮತ್ತು ಇಂಧನ ಸೂಚ್ಯಂಕಗಳು ಶೇಕಡಾ 2 ರಿಂದ 4ರಷ್ಟು ಏರಿಕೆಯಾದರೆ, ಐಟಿ ಸೂಚ್ಯಂಕವು 3 ಪ್ರತಿಶತದಷ್ಟು ಏರಿಕೆಯಾಗಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ತಲಾ 1 ಪ್ರತಿಶತದಷ್ಟು ಗಳಿಸಿವೆ.


Click it and Unblock the Notifications