For Quick Alerts
ALLOW NOTIFICATIONS  
For Daily Alerts

ಕೊನೆಗೂ ಚೇತರಿಕೆ ಕಂಡ ಷೇರುಪೇಟೆ: ಸೆನ್ಸೆಕ್ಸ್ 693 ಪಾಯಿಂಟ್ಸ್ ಏರಿಕೆ

|

ಕೊರೊನಾವೈರಸ್ ಭೀತಿ ಹಾಗೂ ಹರಡುವಿಕೆಯಿಂದ ನಲುಗಿ ಹೋಗಿರುವ ಭಾರತದ ಷೇರು ಮಾರುಕಟ್ಟೆ ಮಂಗಳವಾರ ಚೇತರಿಕೆ ಕಂಡು ಕುಸಿತ ಕಂಡಿತ್ತು. ಬಳಿಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿಶೇಷ ಪ್ಯಾಕೇಜ್ ಘೋಷಣೆಯಿಂದಾಗಿ ಏರಿಕೆ ದಾಖಲಿಸಿದ ಮುಂಬೈ ಷೇರುಪೇಟೆ ಸೆನ್ಸೆಕ್ಸ್ 693 ಪಾಯಿಂಟ್ಸ್‌ ಏರಿಕೆ ದಾಖಲಿಸಿದೆ.

ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಬಹಳ ದಿನಗಳ ವಹಿವಾಟಿನ ಬಳಿಕ ಏರಿಕೆ ಕಂಡಿದೆ. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 693 ಪಾಯಿಂಟ್ಸ್‌ ಏರಿಕೆಯೊಂದಿಗೆ 26,674.03 ಪಾಯಿಂಟ್ಸ್‌ ತಲುಪಿದೆ. ಇನ್ನು ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 2.5 ಪರ್ಸೆಂಟ್ ಏರಿಕೆಯಾಗಿದ್ದು 190.8 ಪಾಯಿಂಟ್ಸ್ ಏರಿಕೆಗೊಂಡು 7,801.05 ಅಂಶಗಳಿಗೆ ಮುಟ್ಟಿದೆ.

ಕೊನೆಗೂ ಚೇತರಿಕೆ ಕಂಡ ಷೇರುಪೇಟೆ: ಸೆನ್ಸೆಕ್ಸ್ 693 ಪಾಯಿಂಟ್ಸ್ ಏರಿಕೆ

ಷೇರುಪೇಟೆ ಏರಿಕೆಯೊಂದಿಗೆ, ಚಿನ್ನ, ಬೆಳ್ಳಿ, ಕಚ್ಛಾ ತೈಲವು ಕೂಡ ಕೊಂಚ ಏರಿಕೆ ಕಂಡಿದೆ. ಇನ್ಪೋಸಿಸ್, ಅದಾನಿ ಪೋರ್ಟ್ಸ ಹಾಗೂ ಬ್ರಿಟಾನಿಯಾ 12 ಪರ್ಸೆಂಟ್‌ಗೂ ಅಧಿಕ ಮೌಲ್ಯ ಸಂಪಾದಿಸಿವೆ. ಜೊತೆಗೆ ಬಜಾಜ್ ಫಿನ್ಸರ್ವ್, ಹೆಚ್‌ಯುಎಲ್, ರಿಲಯನ್ಸ್‌, ಮಾರುತಿ ಸುಜುಕಿ, ಹೆಚ್‌ಸಿಎಲ್ ಟೆಕ್, ಕೋಟಕ್ ಮಹೀಂದ್ರಾ ಷೇರುಗಳು ಏರಿಕೆ ದಾಖಲಿಸಿವೆ.

ನಷ್ಟ ಅನುಭವಿಸಿದ ಷೇರುಗಳು:

ಯೆಸ್ ಬ್ಯಾಂಕ್, ಎಂ ಅಂಡ್ ಎಂ, ಗ್ರಾಸಿಮ್ ಇಂಡಸ್‌ಲ್ಯಾಂಡ್ ಬ್ಯಾಂಕ್, ಪವರ್‌ಗ್ರಿಡ್ ಕಾರ್ಪ್, ಐಟಿಸಿ, ಬಜಾಜ್ ಫಿನ್ಸರ್ವ್, ಬಿಪಿಸಿಎಲ್, ಜೀ ಎಂಟರ್‌ಟೈನ್‌ಮೆಂಟ್ ಷೇರುಗಳು ಲಾಭ ದಾಖಲಿಸಿವೆ.

English summary

Sensex Up 693 Points Nifty Settles At 7801

On tuesday BSE sensex up 693 Points and Nifty Settles At 7801
Story first published: Tuesday, March 24, 2020, 16:35 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X