Closing Bell: ಸೆನ್ಸೆಕ್ಸ್ 789 ಪಾಯಿಂಟ್ಸ್‌ ಜಿಗಿತ, ನಿಫ್ಟಿ 211 ಪಾಯಿಂಟ್ಸ್‌ ಏರಿಕೆ

ಕೋವಿಡ್-19 ಸಾಂಕ್ರಾಮಿಕದ ದಾಖಲೆಯ ಏರಿಕೆಯ ನಡುವೆ ಬುಧವಾರ ಭಾರತೀಯ ಷೇರುಪೇಟೆ ಮತ್ತಷ್ಟು ಎತ್ತರಕ್ಕೆ ಜಿಗಿದಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 789 ಪಾಯಿಂಟ್ಸ್‌ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 211 ಪಾಯಿಂಟ್ಸ್‌ ಹೆಚ್ಚಳಗೊಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 789.70 ಪಾಯಿಂಟ್ಸ್‌ ಅಥವಾ ಶೇಕಡಾ 1.61ರಷ್ಟು ಹೆಚ್ಚಾಗಿ 49733.84 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 211.50 ಪಾಯಿಂಟ್ಸ್‌ ಅಥವಾ ಶೇಕಡಾ 1.44ರಷ್ಟು ಹೆಚ್ಚಾಗಿ 14864.50 ಪಾಯಿಂಟ್ಸ್‌ ದಾಖಲಾಗಿದೆ.

ಸೆನ್ಸೆಕ್ಸ್ 789 ಪಾಯಿಂಟ್ಸ್‌ ಜಿಗಿತ, ನಿಫ್ಟಿ 211 ಪಾಯಿಂಟ್ಸ್‌ ಏರಿಕೆ

ದಿನದ ವಹಿವಾಟು ಅಂತ್ಯಕ್ಕೆ 1,730 ಷೇರುಗಳು ಏರಿಕೆಗೊಂಡರೆ, 1180 ಷೇರುಗಳು ಕುಸಿದಿವೆ ಮತ್ತು 170 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಎನ್‌ಎಸ್‌ಇನಲ್ಲಿ ಬಜಾಜ್ ಫೈನಾನ್ಸ್, ಇಂಡಸ್ಇಂಡ್ ಬ್ಯಾಂಕ್, ಈಚರ್ ಮೋಟಾರ್ಸ್, ಬಜಾಜ್ ಫಿನ್‌ಸರ್ವ್ ಮತ್ತು ಕೊಟಕ್ ಮಹೀಂದ್ರಾ ಬ್ಯಾಂಕ್ ಲಾಭಗಳಿಸಿದ್ದು, ಬ್ರಿಟಾನಿಯಾ ಇಂಡಸ್ಟ್ರೀಸ್, ಹಿಂಡಾಲ್ಕೊ ಇಂಡಸ್ಟ್ರೀಸ್, ನೆಸ್ಲೆ, ಡಿವಿಸ್ ಲ್ಯಾಬ್ಸ್ ಮತ್ತು ಎಚ್‌ಡಿಎಫ್‌ಸಿ ಲೈಫ್ ಇಳಿಕೆಗೊಂಡಿವೆ.

ವೈದ್ಯಕೀಯ ಅಗತ್ಯಗಳಿಗಾಗಿ ಆಮ್ಲಜನಕ ಲಭ್ಯವಾಗುವಂತೆ ಮಾಡಲು ಮಾರುತಿ ಸುಜುಕಿ ತನ್ನ ಹರಿಯಾಣದ ಕಾರ್ಖಾನೆಯನ್ನು ಮುಚ್ಚಿದ್ದು, ಸುಜುಕಿ ಮೋಟಾರ್ ತನ್ನ ಗುಜರಾತ್‌ ಘಟಕವನ್ನು ಮುಚ್ಚಿದೆ. ಮಾರುತಿ ಸುಜುಕಿ ಇಂಡಿಯಾ ಬಿಎಸ್ಇಯಲ್ಲಿ 5.05 ರೂ ಅಥವಾ 0.08 ರಷ್ಟು ಏರಿಕೆ ಕಂಡು 6,573.80 ರೂ. ತಲುಪಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+