ಭಾರತೀಯ ಷೇರುಪೇಟೆ ಸೋಮವಾರ ಭರ್ಜರಿ ಏರಿಕೆ ದಾಖಲಿಸುವುದರೊಂದಿಗೆ ಸಕಾರಾತ್ಮಕವಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 848 ಪಾಯಿಂಟ್ಸ್ ಏರಿಕೆಗೊಂಡರೆ, ನಿಫ್ಟಿ 245 ಪಾಯಿಂಟ್ಸ್ ಜಿಗಿದಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 1.74ರಷ್ಟು ಅಥವಾ 848 ಪಾಯಿಂಟ್ಸ್ ಹೆಚ್ಚಳಗೊಂಡು 49580 ಪಾಯಿಂಟ್ಸ್ ತಲುಪಿದರೆ, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 1.67ರಷ್ಟು ಅಥವಾ 245.35 ಪಾಯಿಂಟ್ಸ್ ಹೆಚ್ಚಳಗೊಂಡು 14923.15 ಪಾಯಿಂಟ್ಸ್ ಮುಟ್ಟಿದೆ.

ದಿನದ ವಹಿವಾಟು ಅಂತ್ಯಕ್ಕೆ ಇಂದು ಸುಮಾರು 2047 ಷೇರುಗಳು ಏರಿಕೆ ಸಾಧಿಸಿವೆ, 1024 ಷೇರುಗಳು ಕುಸಿದಿವೆ ಮತ್ತು 215 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಇಂಡಸ್ಇಂಡ್ ಬ್ಯಾಂಕ್, ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಯುಪಿಎಲ್ ನಿಫ್ಟಿಯಲ್ಲಿ ಹೆಚ್ಚು ಲಾಭ ಗಳಿಸಿವೆ. ಸಿಪ್ಲಾ, ಭಾರ್ತಿ ಏರ್‌ಟೆಲ್, ಲಾರ್ಸೆನ್ ಮತ್ತು ಟೌಬ್ರೊ, ಎಸ್‌ಬಿಐ ಲೈಫ್ ಇನ್ಶುರೆನ್ಸ್ ಮತ್ತು ನೆಸ್ಲೆ ಇಂಡಿಯಾ ಏರಿಕೆಗೊಂಡ ಷೇರುಗಳಾಗಿವೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ತಲಾ ಶೇಕಡಾ 1.6ರಷ್ಟು ಹೆಚ್ಚಾಗಿವೆ.
ಇನ್ನು ದೇಶೀಯ ಇಕ್ವಿಟಿ ಮಾರುಕಟ್ಟೆಯ ಖರೀದಿಯ ಮಧ್ಯೆ ಭಾರತೀಯ ರೂಪಾಯಿ 7 ಪೈಸೆ ಏರಿಕೆಯಾಗಿ ಪ್ರತಿ ಡಾಲರ್‌ಗೆ 73.22 ಕ್ಕೆ ತಲುಪಿದೆ.


Click it and Unblock the Notifications