ಭಾರತೀಯ ಷೇರುಪೇಟೆ ಸತತ ಏರುಮುಖವಾಗಿ ಸಾಗುತ್ತಿದ್ದು, ಗುರುವಾರ ಮುಂಬೈ ಷೇರುಪೇಟೆ ಸೆನ್ಸೆಕ್ಸ್ 97 ಪಾಯಿಂಟ್ಸ್ ಏರಿಕೆಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 36 ಪಾಯಿಂಟ್ಸ್ ಹೆಚ್ಚಾಗಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.19ರಷ್ಟು ಅಥವಾ 97.70 ಪಾಯಿಂಟ್ಸ್ ಏರಿಕೆಗೊಂಡು 51115.22 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 0.24 ರಷ್ಟು ಅಥವಾ 36,40 ಪಾಯಿಂಟ್ಸ್ ಏರಿಕೆಗೊಂಡು 15337.90 ಪಾಯಿಂಟ್ಸ್ ಮುಟ್ಟಿದೆ. ನಿಫ್ಟಿ ಬ್ಯಾಂಕ್ ಶೇಕಡಾ 1.18ರಷ್ಟು ಅಥವಾ 410.85 ಪಾಯಿಂಟ್ಸ್ ಹೆಚ್ಚಾಗಿ 35095.05 ಪಾಯಿಂಟ್ಸ್ ತಲುಪಿದೆ.

ಶ್ರೀ ಸಿಮೆಂಟ್ಸ್, ಎಸ್‌ಬಿಐ, ಆ್ಯಕ್ಸಿಸ್ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್ ಮತ್ತು ವಿಪ್ರೊ ನಿಫ್ಟಿಯಲ್ಲಿ ಹೆಚ್ಚು ಲಾಭ ಗಳಿಸಿದ ಷೇರುಗಳಾಗಿದ್ದು, ಎಚ್‌ಡಿಎಫ್‌ಸಿ, ಒಎನ್‌ಜಿಸಿ, ಐಒಸಿ, ಬಜಾಜ್ ಫೈನಾನ್ಸ್ ಮತ್ತು ಎಚ್‌ಯುಎಲ್ ನಷ್ಟ ಅನುಭವಿಸದ ಷೇರುಗಳಾಗಿವೆ.
ಫಾರ್ಮಾ ಮತ್ತು ಎನರ್ಜಿ ಹೊರತುಪಡಿಸಿ, ಇತರ ವಲಯ ಸೂಚ್ಯಂಕಗಳು ನಿಫ್ಟಿ ಬ್ಯಾಂಕ್, ಐಟಿ ಮತ್ತು ಪಿಎಸ್‌ಯು ಬ್ಯಾಂಕ್ ಸೂಚ್ಯಂಕಗಳು ಶೇಕಡಾ 1 ರಿಂದ 2ರಷ್ಟು ಹೆಚ್ಚಾಗಿವೆ.
ಇನ್ನು ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಚಂಚಲ ವಹಿವಾಟಿನ ಮಧ್ಯೆ ಭಾರತೀಯ ರೂಪಾಯಿ ಮೌಲ್ಯವು 19 ಪೈಸೆ ಏರಿಕೆಯಾಗಿ ಪ್ರತಿ ಡಾಲರ್‌ಗೆ 72.58 ಕ್ಕೆ ತಲುಪಿದೆ.


Click it and Unblock the Notifications