ಭಾರತೀಯ ಷೇರುಪೇಟೆ ಶುಕ್ರವಾರ ಹೂಡಿಕೆದಾರರಿಗೆ ಶುಭ ತಂದಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ 975 ಪಾಯಿಂಟ್ಸ್ ಜಿಗಿತಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 15500 ಮಟ್ಟಕ್ಕಿಂತ ಹೆಚ್ಚಾಗಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 2ರಷ್ಟು ಅಥವಾ 975,62 ಪಾಯಿಂಟ್ಸ್ ಏರಿಕೆಗೊಂಡು 50,540.48 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 1.18ರಷ್ಟು ಅಥವಾ 269.30 ಪಾಯಿಂಟ್ಸ್ ಏರಿಕೆಗೊಂಡು 15,175.30 ಪಾಯಿಂಟ್ಸ್ ಮುಟ್ಟಿದೆ.
ಇಂದು ದಿನದ ವಹಿವಾಟು ಅಂತ್ಯಕ್ಕೆ 1909 ಷೇರುಗಳು ಏರಿಕೆಗೊಂಡರೆ, 1140 ಷೇರುಗಳು ಕುಸಿದಿವೆ ಮತ್ತು 157 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಎಚ್‌ಡಿಎಫ್‌ಸಿ ಬ್ಯಾಂಕ್, ಎಸ್‌ಬಿಐ, ಇಂಡಸ್‌ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ನಿಫ್ಟಿಯಲ್ಲಿ ಹೆಚ್ಚು ಲಾಭ ಗಳಿಸಿದ ಷೇರುಗಳಾಗಿದ್ದು, ಗ್ರ್ಯಾಸಿಮ್ ಇಂಡಸ್ಟ್ರೀಸ್, ಪವರ್ ಗ್ರಿಡ್ ಕಾರ್ಪ್, ಡಾ. ರೆಡ್ಡಿ ಲ್ಯಾಬ್ಸ್, ಐಒಸಿ ಮತ್ತು ಈಚರ್ ಮೋಟಾರ್ಸ್ ನಷ್ಟಗೊಂಡಿವೆ.
ನಿಫ್ಟಿ ಬ್ಯಾಂಕ್ ಮತ್ತು ನಿಫ್ಟಿ ಪಿಎಸ್‌ಯು ಬ್ಯಾಂಕ್ ಸೂಚ್ಯಂಕಗಳು ತಲಾ 3 ಪ್ರತಿಶತದಷ್ಟು ಏರಿಕೆಗೊಂಡಿವೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ತಲಾ 0.5 ಪ್ರತಿಶತವನ್ನು ಹೆಚ್ಚಾಗಿದೆ.
ಇನ್ನು ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಖರೀದಿಯ ಮಧ್ಯೆ ಭಾರತೀಯ ರೂಪಾಯಿ ಪ್ರತಿ ಡಾಲರ್‌ಗೆ 72.83 ಕ್ಕೆ ತಲುಪಿದೆ.


Click it and Unblock the Notifications