ಭಾರತೀಯ ಷೇರುಪೇಟೆಯು ಮಂಗಳವಾರ ಜಿಗಿತ ಸಾಧಿಸಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ 400 ಪಾಯಿಂಟ್ಸ್ ಏರಿಕೆಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 108 ಪಾಯಿಂಟ್ಸ್ ಹೆಚ್ಚಾಗಿದೆ.
ಸೋಮವಾರ ಸಾಕಷ್ಟು ಏರಿಳಿತಗಳ ನಡುವೆ ಷೇರುಪೇಟೆ ಮಂಗಳವಾರ ಜಿಗಿತ ಸಾಧಿಸಿತು. ಬಿಎಸ್ಇ ಸೆನ್ಸೆಕ್ಸ್ 50,714.16 ಮಟ್ಟದಲ್ಲಿ ಸುಮಾರು 273.09 ಅಂಕಗಳ ಲಾಭದೊಂದಿಗೆ ಪ್ರಾರಂಭವಾಯಿತು. ಅದೇ ಸಮಯದಲ್ಲಿ, ಎನ್‌ಎಸ್‌ಇ ನಿಫ್ಟಿ 15,054.60 ಮಟ್ಟದಲ್ಲಿ 98.40 ಪಾಯಿಂಟ್‌ಗಳ ಲಾಭದೊಂದಿಗೆ ತೆರೆಯಿತು.

ಇಂದು, ಬಿಎಸ್‌ಇಯಲ್ಲಿ ಒಟ್ಟು 1,187 ಕಂಪನಿಗಳಲ್ಲಿ ವಹಿವಾಟು ಪ್ರಾರಂಭವಾಗಿದ್ದು, ಈ ಪೈಕಿ ಸುಮಾರು 908 ಷೇರುಗಳು ಏರಿಕೆಗೊಂಡರೆ 223 ಇಳಿಕೆ ಸಾಧಿಸಿದವು. ಅದೇ ಸಮಯದಲ್ಲಿ, 56 ಕಂಪನಿಗಳ ಷೇರು ಬೆಲೆಗಳು ಕಡಿಮೆಯಾಗದೆ ಅಥವಾ ಹೆಚ್ಚಾಗದೆ ತೆರೆಯಲ್ಪಟ್ಟವು.
ಎನ್‌ಎಸ್‌ಇನಲ್ಲಿ ಎಸ್‌ಬಿಐ ಲೈಫ್ ಸ್ಟಾಕ್ ಸುಮಾರು 30 ರೂ.ಗಳ ಏರಿಕೆ ಕಂಡು 954.25 ರೂ. ತಲುಪಿದರೆ, ಗ್ರಾಸಿಮ್‌ನ ಷೇರು ಸುಮಾರು 36 ರೂ.ಗಳಿಂದ 1,380.30 ರೂ. ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ಸುಮಾರು 32 ರೂ.ಗಳಿಂದ 1,551.30 ರೂ., ಅಲ್ಟ್ರಾಟೆಕ್ ಸಿಮೆಂಟ್ ಷೇರುಗಳು ಸುಮಾರು 143 ರೂ.ಗಳಿಂದ 6,810.80 ರೂ., ಹಿಂಡಾಲ್ಕೊ ಷೇರು ಸುಮಾರು 7 ರೂ.ಗಳಿಂದ 343.60 ರೂ. ತಲುಪಿದೆ.
ಇದೇ ವೇಳೆ ಬಿಪಿಸಿಎಲ್ ಷೇರುಗಳು ಸುಮಾರು 20 ರೂ.ಗಳನ್ನು ಕಳೆದುಕೊಂಡು 446.70 ರೂ. , ಐಒಸಿ ಷೇರುಗಳು ಸುಮಾರು 2 ರೂಗಳನ್ನು ಕಳೆದುಕೊಂಡು 101.95 ರೂ., ಗೇಲ್‌ನ ಷೇರುಗಳು ಸುಮಾರು 2 ರೂ.ಗಳನ್ನು ಕಳೆದುಕೊಂಡು 152.45 ರೂ. ಇನ್ಫೋಸಿಸ್ ಷೇರುಗಳು ಸುಮಾರು 6 ರೂ. ಕುಸಿದು 1,329.40 ರೂ., ಯುಪಿಎಲ್‌ನ ಷೇರುಗಳು ಸುಮಾರು 3 ರೂ.ಗಳನ್ನು ಕಳೆದುಕೊಂಡು 627.00 ರೂ. ತಲುಪಿದೆ.


Click it and Unblock the Notifications