For Quick Alerts
ALLOW NOTIFICATIONS  
For Daily Alerts

ಕೋವಿಶೀಲ್ಡ್‌ ಲಸಿಕೆ ಬೆಲೆ 100 ರೂ. ಇಳಿಕೆ: ಪ್ರತಿ ಡೋಸ್ 300 ರೂಪಾಯಿ

|

ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ರಾಜ್ಯಗಳಿಗೆ ಕೋವಿಶೀಲ್ಡ್ ಲಸಿಕೆ ಬೆಲೆಯನ್ನು ಶೇಕಡಾ 25ರಷ್ಟು ಕಡಿತಗೊಳಿಸಿದೆ. ಈ ಮೂಲಕ ಲಸಿಕೆಯ ಬೆಲೆ 400 ರೂ.ಗಳಿಂದ 300 ರೂ.ಗೆ ತಗ್ಗಿದೆ.

ಎಸ್‌ಐಐನ ಸಿಇಒ ಆದರ್ ಪೂನವಾಲಾ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದು, ಜನರ ಹಿತದೃಷ್ಟಿಯಿಂದ, ನಾನು ರಾಜ್ಯಗಳಿಗೆ ಒಂದು ಡೋಸ್ ಬೆಲೆ 400 ರಿಂದ 300 ರೂಗಳಿಗೆ ಇಳಿಸುತ್ತೇನೆ ಎಂದು ಹೇಳಿದರು. ಅವರು ಟ್ವೀಟ್ ಮಾಡುವ ಮೂಲಕ ಈ ಮಹತ್ವದ ಮಾಹಿತಿಯನ್ನು ನೀಡಿದ್ದಾರೆ.

ಲಸಿಕೆ ದರದ ಕುರಿತು ಅನೇಕ ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ದರ ನಿಗದಿ ಬಗ್ಗೆ ದೇಶದಲ್ಲಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಸಿಐಐ ಈ ನಿರ್ಧಾರ ತೆಗೆದುಕೊಂಡಿದೆ. ಈ ಹಿಂದೆ ಭಾರತ್ ಬಯೋಟೆಕ್(ಕೊವ್ಯಾಕ್ಸಿನ್), ಎಸ್‌ಐಸಿಐ (ಕೋವಿಶೀಲ್ಡ್‌) ಲಸಿಕೆಗಳ ಬೆಲೆ ತಗ್ಗಿಸಲು ಕೇಂದ್ರ ಸರ್ಕಾರ ಕೇಳಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ಸೋಮವಾರ ಉಲ್ಲೇಖಿಸಿದೆ.

ಕೋವಿಶೀಲ್ಡ್‌ ಲಸಿಕೆ ಬೆಲೆ 100 ರೂ. ಇಳಿಕೆ: ಪ್ರತಿ ಡೋಸ್ 300 ರೂಪಾಯಿ

ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಕೋವಿಶೀಲ್ಡ್ ಅನ್ನು ಈ ಹಿಂದೆ ರಾಜ್ಯಗಳಿಗೆ 400 ರೂ.ಗೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ 600 ರೂ.ಗೆ ಮಾರಾಟ ಮಾಡುವುದಾಗಿ ತಿಳಿಸಿತ್ತು. ಜೊತೆಗೆ ಕೇಂದ್ರ ಸರ್ಕಾರಕ್ಕೆ ಪ್ರತಿ ಡೋಸ್‌ಗೆ 150 ರೂಪಾಯಿಗೆ ಮಾರಾಟ ಮಾಡುತ್ತಿದೆ.

English summary

Serum Institute Reduces Covishield Price For States Reduced Rs 300

Serum Institute of India's CEO Adar Poonawalla on Wednesday announced that its Covid-19 vaccine candidate Covishield's' price for states have been reduced from Rs 400 to Rs 300 with immediate effect
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X