ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳಲ್ಲಿ ಟಿಸಿಎಸ್, ಇನ್ಫೋಸಿಸ್ ಹಾಗೂ ಐಸಿಐಸಿಐ ಬ್ಯಾಂಕ್ ಮಾತ್ರ ಕಳೆದ ವಾರದಲ್ಲಿ ಮೌಲ್ಯ ಕುಸಿತ ಕಂಡಿದೆ. ರಿಲಯನ್ಸ್ ಅತ್ಯಧಿಕ ಮೌಲ್ಯ ಹೆಚ್ಚಿಸಿಕೊಂಡಿದೆ.
ಮಿಕ್ಕ 7ಕಂಪನಿಗಳು ಮಾರುಕಟ್ಟೆ ಮೌಲ್ಯ ಕಳೆದ ವಾರ ಏರಿಕೆ ಕಂಡು ಒಟ್ಟಾರೆ, 1,15,898.82 ಕೋಟಿ ರು ಮೌಲ್ಯ ಏರಿಕೆಯಾಗಿದೆ.
ಕುಸಿತ ಕಂಡ ಕಂಪನಿ: ಇನ್ಫೋಸಿಸ್ 8,351.83 ಕೋಟಿ ರು ಕಳೆದುಕೊಂಡು 5,90,252.27 ಕೋಟಿ ರುಗೆ ಕುಸಿದಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ 351.41ಕೋಟಿ ರು ಕಳೆದುಕೊಂಡು 11,62,667.33 ಕೋಟಿ ರು ಆಗಿದೆ. ಐಸಿಐಸಿಸಿ ಬ್ಯಾಂಕ್ ಮೌಲ್ಯ 208.16 ಕೋಟಿ ರು ಕುಸಿತವಾಗಿ 4,44,963.18 ಕೋಟಿ ರು ಆಗಿದೆ.

ಏರಿಕೆ ಕಂಡ ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್ 60, 668.47 ಕೋಟಿ ರು ಏರಿಕೆ ಕಂಡು 13,88,718.41 ಕೋಟಿ ರು ಗೇರಿದೆ. ಬಜಾಬ್ ಫೈನಾನ್ಸ್ 23,178.02 ಕೋಟಿ ರು ಮೇಲಕ್ಕೇರಿ 3,61,767.29 ಕೋಟಿ ರು ಆಗಿದೆ. ಎಚ್ ಡಿ ಎಫ್ ಸಿ 14, 521.98 ಕೋಟಿ ರು ಏರಿಕೆಯಾಗಿ 4,72,940.60 ಕೋಟಿ ರು ಮುಟ್ಟಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 10,307.93ಕೋಟಿ ರು ಏರಿಕೆಯಾಗಿ 3,86,971.16 ಕೋಟಿ ರು ಆಗಿದೆ.
ಹಿಂದೂಸ್ತಾನ್ ಯೂನಿಲಿವರ್ ಲಿ 4,428.97 ಕೋಟಿ ರು ಏರಿಕೆಯಾಗಿ 5,50,191.47 ಕೋಟಿ ರು ಆಗಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್ ಮೌಲ್ಯ 2,002.21ಕೋಟಿ ರು ಏರಿಕೆ ಕಂಡು 3, 58, 851.88 ಕೋಟಿ ರು ಆಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಮೌಲ್ಯ 791.24 ಕೋಟಿ ರು ಏರಿಕೆ ಕಂಡು 8,28,341.24 ಕೋಟಿ ರು ಆಗಿದೆ.
ಒಟ್ಟಾರೆ, ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್ ಲಿ, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬಜಾಜ್ ಫೈನಾನ್ಸ್ ಹಾಗೂ ಕೋಟಕ್ ಮಹೀಂದ್ರಾ ಬ್ಯಾಂಕ್.


Click it and Unblock the Notifications