ಬೆಂಗಳೂರು: ಕಾಂಗ್ರೆಸ್ ಸರ್ಕಾರ (Congress Govt) ವಿಧಾನ ಸಭೆ ಚುನಾವಣೆಯಲ್ಲಿ ತನ್ನ ಗೆಲುವಿಗಾಗಿ ಬಳಸಿದ ಪ್ರಮುಖ ಅಸ್ತ್ರವೇ "ಗ್ಯಾರಂಟಿ ಯೋಜನೆ" (Guarantee Scheme). ಅದರಲ್ಲೂ ಮಹಿಳೆಯರಿಗಾಗಿ ಜಾರಿಗೆ ತಂದ ಶಕ್ತಿ ಯೋಜನೆ ಮತ್ತು ಗೃಹಲಕ್ಷ್ಮಿ ಯೋಜನೆ (Shakti Scheme-Gruhalakshmi Scheme) ಭಾರೀ ಪ್ರಯೋಜನವನ್ನು ಕೊಟ್ಟಿದೆ. ಇದೀಗ ಶಕ್ತಿ ಯೋಜನೆ ಸಂಬಂಧಿಸಿ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಳ್ಳಲು ಮುಂದಾಗಿದೆ.

ಹೌದು, ಕರ್ನಾಟಕ ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಯಾದ "ಶಕ್ತಿ ಯೋಜನೆಗೆ" ಸಂಬಂಧಿಸಿ ಮಹತ್ವದ ಅಪ್ಡೇಟ್ ಒಂದು ಕಾದಿದೆ. ಮಹಿಳೆಯರಿಗೆ ರಾಜ್ಯದ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಅವಕಾಶ ನೀಡಲಾಗಿದೆ. ಈ ಸೌಲಭ್ಯ ಬಳಸಬೇಕೆಂದರೆ, ಬಸ್‌ನಲ್ಲಿ ಆಧಾರ್ ಕಾರ್ಡ್ ಅಥವಾ ಯಾವುದಾದರೂ ಗುರುತಿನ ಚೀಟಿ ತೋರಿಸಬೇಕು. ಆದರೆ ಇದೀಗ ಆಧಾರ್ ಆಧಾರಿತ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಸಜ್ಜಾಗಿದೆ.
ಶಕ್ತಿ ಯೋಜನೆಯ ಬಿಗ್ ಅಪ್ಡೇಟ್!
ಶಕ್ತಿ ಯೋಜನೆಯ ದುರ್ಬಳಕೆ ತಡೆದು ಪಾರದರ್ಶಕತೆ ಹೆಚ್ಚಿಸಲು, ಕರ್ನಾಟಕ ಸರ್ಕಾರ ಉಚಿತ ಬಸ್ ಪ್ರಯಾಣಕ್ಕೆ ಕಡ್ಡಾಯ ಸ್ಮಾರ್ಟ್ ಕಾರ್ಡ್ ಪರಿಚಯಿಸಲು ನಿರ್ಧರಿಸಿದೆ. ಜೂನ್ 2026ರೊಳಗೆ ಈ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ವರದಿಯಾಗಿದೆ.
ರಾಜ್ಯ ಸಚಿವ ಸಂಪುಟ ಈ ಸ್ಮಾರ್ಟ್ ಕಾರ್ಡ್ ಯೋಜನೆಗೆ ಅನುಮೋದನೆ ನೀಡಿದ್ದು, ಮುಂದಿನ ತಿಂಗಳಲ್ಲಿ ಸ್ಮಾರ್ಟ್‌ಕಾರ್ಡ್ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಲಾಗಿದೆ. ಹೊಸ ವ್ಯವಸ್ಥೆಯಡಿ ಆಧಾರ್ ಆಧಾರಿತ ಸ್ಮಾರ್ಟ್ ಕಾರ್ಡ್ ಇನ್ಮುಂದೆ ಚಲಾವಣೆಯಲ್ಲಿರಲಿದೆ. ಇದರಿಂದ ಅನಧಿಕೃತ ಹಾಗೂ ಮೋಸದ ಪ್ರಯಾಣಕ್ಕೆ ಕಡಿವಾಣ ಬೀಳಲಿದೆ ಎಂಬುದು ಸರ್ಕಾರದ ಅಭಿಪ್ರಾಯ.
ಶಕ್ತಿ ಯೋಜನೆ ಆರಂಭದ ಪಯಣ!
ಕಾಂಗ್ರೆಸ್ ಸರ್ಕಾರ ವಿಧಾನ ಸಭೆಗೂ ಮುನ್ನ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿತ್ತು. ಅದೇ ರೀತಿ ಚುನಾವಣೆ ಗೆದ್ದ ನಂತರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒದಗಿಸುವ ಶಕ್ತಿ ಯೋಜನೆಯು 2023ರ ಜೂನ್ 11ರಂದು ರಾಜ್ಯಾದ್ಯಂತ ಆರಂಭವಾಯಿತು. 2026ರ ಜೂನ್ 11ಕ್ಕೆ ಈ ಯೋಜನೆ ಆರಂಭವಾಗಿ ಬರೋಬ್ಬರಿ 3 ವರ್ಷ ಸಂಪೂರ್ಣವಾಗಲಿದೆ. ಇದೀಗ ಈ ಸಂಭ್ರಮದ ಹೊಸ್ತಿಲಲ್ಲಿ ಸರ್ಕಾರ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ.
ಈ ಯೋಜನೆಯ ಅನುಷ್ಠಾನಕ್ಕಾಗಿ, ಸ್ಮಾರ್ಟ್ ಕಾರ್ಡ್ ಉತ್ಪಾದನೆ ಮತ್ತು ವಿತರಣೆಗಾಗಿ ಸರ್ಕಾರ ಈಗಾಗಲೇ ಟೆಂಡರ್ ಆಹ್ವಾನಿಸಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಮೂರು ತಿಂಗಳೊಳಗೆ ಸಂಪೂರ್ಣ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಕಾರ್ಯರೂಪಕ್ಕೆ ಬರಲಿದೆ ಎನ್ನಲಾಗಿದೆ.
ಆಧಾರ್ ಕಾರ್ಡ್ ಬದಲು ಸ್ಮಾರ್ಟ್ ಕಾರ್ಡ್ ಕಡ್ಡಾಯ: ಇನ್ಮುಂದೆ ಆಧಾರ್ ತೋರಿಸಿ ಪ್ರಯಾಣಿಸುವಂತಿಲ್ಲ. ಅಂದರೆ ಸ್ಮಾರ್ಟ್ ಕಾರ್ಡ್ ತೋರಿಸಿಯೇ ಪ್ರಯಾಣಿಸಬೇಕು. ಇದರಿಂದ ನಕಲಿ ಆಧಾರ್‌ಗಳಿಂದ ಮುಕ್ತಿ ಸಿಗಲಿದೆ.
ಉಚಿತ ವಿತರಣೆ: ಅರ್ಹ ಮಹಿಳೆಯರಿಗೆ ಈ ಸ್ಮಾರ್ಟ್‌ಕಾರ್ಡ್ ಅನ್ನು ಉಚಿತವಾಗಿ ವಿತರಿಸಲಾಗುತ್ತದೆ. ಟೆಂಡರ್ ಪ್ರಕ್ರಿಯೆ ನಂತರ ಜೂನ್ 2026ರಿಂದ ವಿತರಣೆ ಆರಂಭವಾಗಲಿದೆ. ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಶಕ್ತಿ ಸ್ಮಾರ್ಟ್ ಕಾರ್ಡ್ ಯೋಜನೆ ಜಾರಿಗೆ ಅನುಮೋದನೆ ನೀಡಲಾಗಿದೆ.


Click it and Unblock the Notifications