ಶಕ್ತಿಕಾಂತ ದಾಸ್‌ರಿಂದ ರಘುರಾಮ್ ರಾಜನ್‌ವರೆಗೆ: ಮೋದಿ ಸರ್ಕಾರದ ಅವಧಿಯ ಆರ್‌ಬಿಐ ಗವರ್ನರ್‌ಗಳು

ರಿಸರ್ವ್‌ ಬ್ಯಾಂಕ್‌ ಇಂಡಿಯಾವು ಕೇವಲ ಒಂದು ಬ್ಯಾಂಕ್‌ ಅಲ್ಲದೆ ಭಾರತದ ಆರ್ಥಿಕತೆ ಸೇರಿದಂತೆ ಎಲ್ಲಾ ವಲಯಗಳ ಮೇಲೆ ಪ್ರಭಾವ ಬೀರುವ ಒಂದು ಸಂಸ್ಥೆ ಎಂದರೆ ತಪ್ಪಾಗಲಾರದು. ಆರ್ ಬಿಐ ತೆಗೆದುಕೊಳ್ಳುವ ನೀತಿಗಳೇ ಭಾರತದ ಅಭಿವೃದ್ದಿಗೆ ಹೊಸ ಆಯಾಮ ನೀಡಿದರೆ ತಪ್ಪಾಗಲಾರದು. ರೆಪೋ ದರ ವಿಚಾರದಲ್ಲಿ ಆರ್‌ಬಿಐ ಸಮಯೋಜಿತ ನಿರ್ಧಾರ ತೆಗೆದುಕೊಳ್ಳುವ ಮೂಲಕ ಇಡೀ ದೇಶದ ಬ್ಯಾಂಕ್‌ಗಳ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ಆರ್‌ಬಿಐ ಅನ್ನು ದೇಶದ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಬಹುದು.

ಇನ್ನು 2014ರಲ್ಲಿ ಭರ್ಜರಿ ಬಹುಮತದ ಮೂಲಕ ಅಧಿಕಾರಕ್ಕೆ ಬಂದಿರುವ ನರೇಂದ್ರ ಮೋದಿ ಸರ್ಕಾರ ಈಗಾಗಲೇ ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿದೆ. ಈಗಾಗಲೇ 11ನೇ ವರ್ಷಕ್ಕೆ ಕಾಲಿರಿಸಿದೆ. 2014 ರಿಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ ರಘುರಾಮ್ ರಾಜನ್, ಊರ್ಜಿತ್ ಆರ್ ಪಟೇಲ್ ಮತ್ತು ಶಕ್ತಿಕಾಂತ ದಾಸ್ ಅವರು ಮೂರು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್‌ಗಳಾಗಿ ಸೇವೆ ಸಲ್ಲಿಸಿದ್ದು, ದೇಶದ ಕೊಡುಗೆಯಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ಮೋದಿ ಆಡಳಿತದಲ್ಲಿ ಆರ್‌ಬಿಐ ಗವರ್ನರ್‌ಗಳ ಬಗ್ಗೆ ಮಾಹಿತಿ

ರಘುರಾಮ್‌ ರಾಜನ್‌, ಊರ್ಜಿತ್‌ ಪಟೇಲ್‌ ಹಾಗೂ ಸದ್ಯ ಶಕ್ತಿಕಾಂತ್‌ ದಾಸ್‌ ಗವರ್ನರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಸೋಮವಾರ ಕೇಂದ್ರ ಸರ್ಕಾರವು ಹಣಕಾಸು ಸಚಿವಾಲಯದ ಕಂದಾಯ ಕಾರ್ಯದರ್ಶಿಯಾಗಿರುವ ಸಂಜಯ್ ಮಲ್ಹೋತ್ರಾ ಅವರನ್ನು ಹೊಸ ಆರ್‌ಬಿಐ ಗವರ್ನರ್‌ ಆಗಿ ನೇಮಿಸಿದೆ. ಹಾಗಾಗಿ ಮುಂದಿನ ಅವಧಿಯಲ್ಲಿ ಸಂಜಯ್‌ ಅವರು ಆರ್‌ಬಿಐ ಚುಕ್ಕಾಣಿ ಹಿಡಿಯಲಿದ್ದಾರೆ. ಹಾಗಾಗಿ ಮೋದಿ ಆಡಳಿತಾವಧಿಯಲ್ಲಿದ್ದ ಈ ಮೂವರು ಗವರ್ನರ್‌ಗಳ ಬಗ್ಗೆ ಒಂದಿಷ್ಟು ತಿಳಿದುಕೊಳ್ಳುವ.

ರಘುರಾಮ್‌ ರಾಜನ್‌

ಸದ್ಯ ಹಣಕಾಸಿನ ವಿಚಾರದಲ್ಲಿ ನರೇಂದ್ರ ಮೋದಿ ತೆಗೆದುಕೊಳ್ಳುವ ನಿರ್ಧಾರಗಳನ್ನು ಟೀಕಿಸುವುದರಲ್ಲಿ ರಘುರಾಮ್‌ ರಾಜನ್‌ ಮುಂಚೂಣಿಯಲ್ಲಿರುತ್ತಾರೆ ಎಂದರೆ ತಪ್ಪಾಗಲಾರದು. ಪ್ರಜಾಪ್ರಭುತ್ವ ಸರ್ಕಾರದಲ್ಲಿ ಟೀಕೆ-ಟಿಪ್ಪಣಿಗಳು ಸಾಮಾನ್ಯವಾಗಿದ್ದು, ಪ್ರಜಾಪ್ರಭುತ್ವದ ಅಂಗವಾಗಿದೆ. ಒಂದು ಸರ್ಕಾರ ಕೆಟ್ಟ ನೀತಿ ತೆಗೆದುಕೊಂಡರೆ ಟೀಕಿಸುವುದರಲ್ಲಿ ತಪ್ಪಿಲ್ಲ, ಅದೇ ರೀತಿ ಒಂದು ಸರ್ಕಾರ ತೆಗೆದುಕೊಂಡ ಉತ್ತಮ ನಿರ್ಧಾರವನ್ನು ಪ್ರಶಂಸಿಸುವುದರಲ್ಲಿ ಕೂಡ ತಪ್ಪಿಲ್ಲ.

ಹಾಗಾಗಿ ಇವುಗಳನ್ನು ಇಟ್ಟುಕೊಂಡು ಬೇರೆ ರೀತಿಯಲ್ಲಿ ಅರ್ಥದಲ್ಲಿ ವಿಶ್ಲೇಷಣೆ ಮಾಡುವುದು ಬಹುಷಃ ತಪ್ಪಾಗಬಹುದು. ಇನ್ನು ರಘುರಾಮ್‌ ರಾಜನ್‌ ಅವರ ವಿಚಾರಕ್ಕೆ ಬಂದರೆ 2013ರ ಸೆಪ್ಟೆಂಬರ್‌ 4ರಂದು ರಾಜನ್‌ ಅವರು ಭಾರತೀಯ ರಿಸರ್ವ್ ಬ್ಯಾಂಕ್‌ನ 23 ನೇ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದ್ದರು. ಇನ್ನು ಗವರ್ನರ್‌ ಹುದ್ದೆಯನ್ನು ಅಲಂಕರಿಸುವ ಮುನ್ನ ರಾಜನ್‌ ಅವರು ಹಣಕಾಸು ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದರು.

ರಾಜನ್ ಅವರು ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಮುಖ್ಯ ಅರ್ಥಶಾಸ್ತ್ರಜ್ಞ ಮತ್ತು ಸಂಶೋಧನಾ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. 2011 ರಲ್ಲಿ, ರಾಜನ್ ಅಮೆರಿಕನ್ ಫೈನಾನ್ಸ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿದ್ದರು ಮತ್ತು ಅಮೇರಿಕನ್ ಅಕಾಡೆಮಿ ಆಫ್ ಆರ್ಟ್ಸ್‌ನ ಸದಸ್ಯರಾಗಿದ್ದರು. 2003 ರಲ್ಲಿ ರಾಜನ್‌ ಅವರಿಗೆ ಅಮೆರಿಕನ್ ಫೈನಾನ್ಸ್ ಅಸೋಸಿಯೇಷನ್ ಅತ್ಯುತ್ತಮ ಹಣಕಾಸು ಸಂಶೋಧಕರಿಗೆ ನೀಡಲಾಗುವ ಫಿಶರ್ ಬ್ಲ್ಯಾಕ್ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

ಈ ಅವಧಿಯಲ್ಲಿ ರಘುರಾಮ್‌ ಅವರು ಕೇವಲ 40ರ ಹರೆಯದಲ್ಲಿದ್ದು, ಅತ್ಯಂತ ಕಡಿಮೆ ಅವಧಿಯಲ್ಲಿಯೇ ಅವರು ದೊಡ್ಡ ಸಾಧನೆ ಮಾಡಿದಂತಾಗಿತ್ತು. ಅವರು ಜಾಗತಿಕ ಭಾರತೀಯ ವರ್ಷದ ಪ್ರಶಸ್ತಿ, ಆರ್ಥಿಕ ವಿಜ್ಞಾನಕ್ಕಾಗಿ ಇನ್ಫೋಸಿಸ್ ಬಹುಮಾನ ಮತ್ತು ಹಣಕಾಸು ಅಧ್ಯಯನ ಕೇಂದ್ರ-ಆರ್ಥಿಕ ಅರ್ಥಶಾಸ್ತ್ರಕ್ಕಾಗಿ ಡಾಯ್ಚ ಬ್ಯಾಂಕ್ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದರು. ಆದರೆ ರಘುರಾಮ್‌ ಅವರು ಹೆಚ್ಚಿನ ಅವಧಿಗೆ ಆರ್‌ಬಿಐ ಗವರ್ನರ್‌ ಹುದ್ದೆ ಮುಂದುವರೆಸಲು ಅವಕಾಶ ಸಿಗಲಿಲ್ಲ ಎಂಬ ಹೇಳಿಕೆ ಕೂಡ ಇದೆ. ಒಟ್ಟಿನಲ್ಲಿ ತನಗೆ ಸಿಕ್ಕಿದ ಕಡಿಮೆ ಅವಧಿಯಲ್ಲಿ ರಘುರಾಮ್‌ ಅವರು ಉತ್ತಮ ಪರಿಣಾಮಕಾರಿ ನಿರ್ಧಾರಗಳನ್ನು ತೆಗೆದುಕೊಂಡಿದ್ದರು ಎಂಬುದು ಹಲವು ಆರ್ಥಿಕ ತಜ್ಞರ ಅಭಿಮತವಾಗಿದೆ.

ಊರ್ಜಿತ್‌ ಪಟೇಲ್‌

ಜನವರಿ 2013 ರಿಂದ ಉಪ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದ ಊರ್ಜಿತ್‌ ಪಟೇಲ್‌ ಅವರನ್ನು 2016ರಲ್ಲಿ ಆರ್‌ಬಿಐ ಹುದ್ದೆಗೆ ಗವರ್ನರ್‌ ಆಗಿ ನೇಮಕ ಮಾಡಲಾಗಿತ್ತು. ಈ ಮೂಲಕ ಅವರು ಭಾರತೀಯ ರಿಸರ್ವ್ ಬ್ಯಾಂಕ್‌ನ 24 ನೇ ಗವರ್ನರ್ ಎಂಬ ಹೆಗ್ಗಲಿಕೆಗೆ ಪಾತ್ರರಾಗಿದ್ದರು. ಊರ್ಜಿತ್ ಪಟೇಲ್ ಅವರು ನೇರ ತೆರಿಗೆಗಳ ಕಾರ್ಯಪಡೆ, ನಾಗರಿಕ ಮತ್ತು ರಕ್ಷಣಾ ಸೇವೆಗಳ ಪಿಂಚಣಿ ವ್ಯವಸ್ಥೆಯನ್ನು ಪರಿಶೀಲಿಸಲು ಉನ್ನತ ಮಟ್ಟದ ತಜ್ಞರ ಗುಂಪು, ಮೂಲಸೌಕರ್ಯ ಕುರಿತ ಪ್ರಧಾನ ಮಂತ್ರಿ ಕಾರ್ಯಪಡೆ, ಸಚಿವರ ಗುಂಪು ಸೇರಿದಂತೆ ಅನೇಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ಉನ್ನತ ಮಟ್ಟದ ಸಮಿತಿಗಳೊಂದಿಗೆ ಕೆಲಸ ಮಾಡಿದ್ದಾರೆ. ಇವುಗಳಲ್ಲಿ ಟೆಲಿಕಾಂ ಇಲಾಖೆಗಳು ಕೂಡ ಸೇರಿದೆ. ಹಾಗಾಗಿ ಒಟ್ಟಾರೆಯಾಗಿ ಹೇಳುವುದಾದರೆ ಊರ್ಜಿತ್‌ ಪಟೇಲ್‌ ಅವರು ಆರ್ಥಿಕ ಕ್ಷೇತ್ರದಲ್ಲಿ ಒಬ್ಬ ಅನುಭವಿ ವ್ಯಕ್ತಿ ಎಂದರೆ ತಪ್ಪಾಗಲಾರದು.

ಶಕ್ತಿಕಾಂತ್‌ ದಾಸ್‌

ಶಕ್ತಿಕಾಂತ ದಾಸ್ ಅವರು ನಿವೃತ್ತ ಭಾರತೀಯ ಆಡಳಿತ ಸೇವಾ (ಐಎಎಸ್)‌ ಅಧಿಕಾರಿಯಾಗಿದ್ದು, ಹಣಕಾಸು ಸಚಿವಾಲಯದ ಕಂದಾಯ ಇಲಾಖೆ ಮತ್ತು ಆರ್ಥಿಕ ವ್ಯವಹಾರಗಳ ಇಲಾಖೆಯ ಮಾಜಿ ಕಾರ್ಯದರ್ಶಿ ಕೂಡ ಆಗಿದ್ದರು. ಡಿಸೆಂಬರ್ 12, 2018 ರಂದು ಶಕ್ತಿಕಾಂತ್ ದಾಸ್ ಅವರು ಭಾರತೀಯ ರಿಸರ್ವ್ ಬ್ಯಾಂಕ್‌ನ 25 ನೇ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದರು. ಇದಕ್ಕೂ ಮುನ್ನ ಅವರು 15 ನೇ ಹಣಕಾಸು ಆಯೋಗ ಮತ್ತು ಭಾರತದ G20 ಶೆರ್ಪಾ ಸದಸ್ಯರಾಗಿದ್ದರು. ಅಲ್ಲದೆ ದಾಸ್ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಹಣಕಾಸು, ತೆರಿಗೆ, ಕೈಗಾರಿಕೆಗಳು ಮತ್ತು ಮೂಲಸೌಕರ್ಯ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುವ ಪ್ರಮುಖ ಸ್ಥಾನಗಳನ್ನು ವಹಿಸಿಕೊಂಡಿದ್ದರು.

ಸಂಜಯ್‌ ಮಲ್ಹೋತ್ರಾ

ಪ್ರಸ್ತುತ ಹಣಕಾಸು ಸಚಿವಾಲಯದಲ್ಲಿ ಕಂದಾಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಸಂಜಯ್ ಮಲ್ಹೋತ್ರಾ ಅವರು ರಾಜಸ್ಥಾನ ಕೇಡರ್‌ನ 1990-ಬ್ಯಾಚ್‌ನ ಭಾರತೀಯ ಆಡಳಿತ ಸೇವಾ ಅಧಿಕಾರಿಯಾಗಿದ್ದಾರೆ. ನವೆಂಬರ್ 2022 ರಲ್ಲಿ ಕಂದಾಯ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸುವ ಮುನ್ನ ಮಲ್ಹೋತ್ರಾ ಅವರು ಫೆಬ್ರವರಿ 2022 ರಿಂದ ಸುಮಾರು ಒಂಬತ್ತು ತಿಂಗಳ ಕಾಲ ಹಣಕಾಸು ಸೇವೆಗಳ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಮಲ್ಹೋತ್ರಾ ಅವರು ಮೂರು ದಶಕಗಳಿಂದ ಅಧಿಕಾರಶಾಹಿ ವೃತ್ತಿಜೀವನವನ್ನು ಹೊಂದಿದ್ದು, ಅಪಾರ ಅನುಭವ ಹೊಂದಿದ್ದಾರೆ. ಹಣಕಾಸು ಸೇವೆಗಳ ಕಾರ್ಯದರ್ಶಿಯ ಹುದ್ದೆ ಅಲಂಕರುಸವ ಮುನ್ನ ಅವರು ವಿದ್ಯುತ್ ಯೋಜನೆಗಳಿಗೆ ಸರ್ಕಾರಿ ಸ್ವಾಮ್ಯದ ಹಣಕಾಸುದಾರರಾದ REC ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+