ದೇಶದ ಷೇರುಪೇಟೆಯಲ್ಲಿ ಹಿಂದೆದೂ ಕಾಣಿರದ ಕುಸಿತ ಕಂಡಿದೆ. ಗುರುವಾರ ಮುಂಬೈ ಷೇರುಪೇಟೆ ಆರಂಭದಲ್ಲೇ 1800 ಪಾಯಿಂಟ್ಸ್ ಕುಸಿದು ದಿನದ ವಹಿವಾಟಿನ ಕೊನೆಯಲ್ಲಿ 2,919.26 ಪಾಯಿಂಟ್ಸ್ ಕುಸಿತ ಕಂಡಿದೆ. ಸೆನ್ಸೆಕ್ಸ್ ಇತಿಹಾಸದಲ್ಲಿ ದಿನವೊಂದರಲ್ಲಿ ಕುಸಿದ ಭಾರೀ ಇಳಿಕೆ ಇದಾಗಿದೆ.
ಮುಂಬೈ ಷೇರುಪೇಟೆ ಸೆನ್ಸೆಕ್ಸ್ 8.18 ಪರ್ಸೆಂಟ್ ಇಳಿಕೆಗೊಂಡು 2,919.26 ಪಾಯಿಂಟ್ಸ್ ಇಳಿಕೆಗೊಂಡಿತು. ಇನ್ನು ರಾಷ್ಟ್ರೀಯ ಷೇರುಪೇಟೆ ಎನ್‌ಎಸ್ಇ ಸೂಚ್ಯಂಕ ನಿಫ್ಟಿ ಕೂಡ 8.30 ಪರ್ಸೆಂಟ್ ಇಳಿದು 9,590.15 ಪಾಯಿಂಟ್‌ಗಳನ್ನು ತಲುಪಿದೆ. ನಿಫ್ಟಿ 2018 ಮಾರ್ಚ್ ಬಳಿಕ ಮೊದಲ ಬಾರಿಗೆ 10 ಸಾವಿರ ಗಡಿಯಿಂದ ಕೆಳಗಿಳಿದಿದೆ.

ಜಾಗತಿಕ ಮಟ್ಟದಲ್ಲಿ ಕೊರೋನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವುದು, ತೈಲ ಬೆಲೆ ಕುಸಿತ ಮತ್ತು ಅಮೆರಿಕ ಯುರೋಪ್ ನಿಂದ ತಾತ್ಕಾಲಿಕವಾಗಿ ಪ್ರಯಾಣ ನಿರ್ಬಂಧವನ್ನು ಹೇರಿರುವುದರ ನಡುವೆ ಭಾರತದ ಷೇರು ಮಾರುಕಟ್ಟೆ ತೀವ್ರ ಕುಸಿತ ಕಂಡುಬಂದಿದೆ.
ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್, ರಿಲಯನ್ಸ್ ಇಂಡಸ್ಟ್ರೀಸ್, ಟಿಸಿಎಸ್, ಇನ್ಪೋಸಿಸ್, ಎಸ್‌ಬಿಐ, ಟೈಟಾನ್, ಆ್ಯಕ್ಸಿಸ್ ಬ್ಯಾಂಕ್ ಹಾಗೂ ಎಲ್ ಅಂಡ್ ಟಿ, ಐಟಿಸಿ ಒನ್‌ಜಿಸಿ ಸೇರಿದಂತೆ ಬಹುತೇಕ ಕಂಪನಿಗಳ ಷೇರುಗಳು 4 ಪರ್ಸೆಂಟ್‌ನಿಂದ 11 ಪರ್ಸೆಂಟ್‌ರಷ್ಟು ಇಳಿಕೆಯಾಗಿದೆ.


Click it and Unblock the Notifications