ಕೊರೊನಾವೈರಸ್ ಭೀತಿಯು ಹೂಡಿಕೆದಾರರಲ್ಲಿ ಮುಂದುವರಿದಿದ್ದು, ಷೇರುಪೇಟೆಯು ಬುಧವಾರವೂ(ಮಾರ್ಚ್ 18) ಕುಸಿತ ಮುಂದುವರಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಬಹಳ ದಿನಗಳ ವಹಿವಾಟಿನ ಬಳಿಕ 30,000ಕ್ಕಿಂತ ಕೆಳಗಿಳಿದೆ.
ಹೂಡಿಕೆದಾರರಲ್ಲಿ ಭೀತಿಯ ವಾತಾವರಣವಿದ್ದು, ಷೇರು ಮಾರಾಟಕ್ಕೆ ಹೆಚ್ಚು ಮುಂದಾಗುತ್ತಿದ್ದಾರೆ. ಕಚ್ಛಾ ತೈಲ ದರವು ಕುಸಿದಿದ್ದು ಮಾರುಕಟ್ಟೆ ಮೇಲೆ ಪ್ರಭಾವ ಬೀರುತ್ತಿದೆ. ಸೆನ್ಸೆಕ್ಸ್ 1000ಕ್ಕೂ ಅಧಿಕ ಪಾಯಿಂಟ್ಸ್‌ಗಳು ಕುಸಿದು 29,518 ಅಂಶಗಳನ್ನು ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 3.5 ಪರ್ಸೆಂಟ್ ಕುಸಿದಿದ್ದು 312.4 ಅಂಶಗಳನ್ನು ಕಳೆದುಕೊಂಡಿದೆ.

ಮಾರುಕಟ್ಟೆ ಕುಸಿತದ ನಡುವೆಯು ಯೆಸ್ ಬ್ಯಾಂಕ್ ಷೇರು 58.65 ರುಪಾಯಿಯಿಂದ ವಹಿವಾಟು ಆರಂಭವಾದಾಗ 87.95 ರುಪಾಯಿವರೆಗೂ ತಲುಪಿತ್ತು. ಆದರೆ ಷೇರು ಮಾರಾಟ ಹೆಚ್ಚಾದಾಗ 60 ರುಪಾಯಿಗೆ ಬಂದು ತಲುಪಿದೆ.
ಬುಧವಾರು ಬ್ಯಾಂಕ್‌ನ ಷೇರುಗಳು ಮತ್ತಷ್ಟು ನಷ್ಟ ಅನುಭವಿಸಿದವು. ಇಂಡಸ್‌ಲ್ಯಾಂಡ್ ಬ್ಯಾಂಕ್, ಭಾರ್ತಿ ಇನ್ಫಾಟ್ರೆಲ್, ಬಜಾಜ್ ಫಿನಾನ್ಸ್, ಎಕ್ಸಿಸ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಎಸ್‌ಬಿಐ, ಬಿಪಿಸಿಎಲ್ ಷೇರುಗಳು 6 ಪರ್ಸೆಂಟ್‌ನಿಂದ 18 ಪರ್ಸೆಂಟ್‌ವರೆಗೆ ಇಳಿಕೆ ಕಂಡಿವೆ.
ಆದಾಗ್ಯೂ, ಜೀ ಎಂಟರ್‌ಟ್ಐನ್‌ಮೆಂಟ್ , ಯೆಸ್ ಬ್ಯಾಂಕ್, ಇನ್ಫೋಸಿಸ್, ಟಿಸಿಎಸ್ ಏರಿಕೆ ಕಂಡಿದೆ.


Click it and Unblock the Notifications