ಷೇರು ಮಾರುಕಟ್ಟೆಯಲ್ಲಿ ಮತ್ತೆ ಗೂಳಿ ಓಟ: SENSEX 428 ಅಂಶಗಳ ಏರಿಕೆ

ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ಶುಕ್ರವಾರ ಶುಭ ತಂದಿದೆ. ಮುಂಬೈ ಷೇರು ಮಾರುಕಟ್ಟೆ (ಬಿಎಸ್ಐ) 428 ಅಂಶಗಳ ಏರಿಕೆಯೊಂದಿಗೆ ಮತ್ತೊಮ್ಮೆ 41,000 ಗಡಿದಾಟಿದೆ.

ಸೆನ್ಸೆಕ್ಸ್ ಆರಂಭದಿಂದಲೇ ಉತ್ತಮ ವಹಿವಾಟು ಕಾಣುವ ಮೂಲಕ ಶೇಕಡಾ 1.05 ರಷ್ಟು ಏರಿಕೆ ದಾಖಲಿಸಿದೆ. ರಾಷ್ಟ್ರೀಯ ಷೇರುಪೇಟೆ(ಎನ್‌ಎಸ್ಇ) ಸೂಚ್ಯಂಕ ನಿಫ್ಟಿ ಕೂಡ 115 ಪಾಯಿಂಟ್‌ಗಳ ಜಿಗಿತ ಕಂಡು 12,086 ಅಂಶಗಳಿಗೆ ತಲುಪಿದೆ. ಈ ಮೂಲಕ ಶುಕ್ರವಾರ 0.96 ಪರ್ಸೆಂಟ್ ಏರಿಕೆ ದಾಖಲಿಸಿದೆ.

ಷೇರು ಮಾರುಕಟ್ಟೆಯಲ್ಲಿ ಮತ್ತೆ ಗೂಳಿ ಓಟ: SENSEX 428 ಅಂಶಗಳ ಏರಿಕೆ

ಎಕ್ಸಿಸ್ ಬ್ಯಾಂಕ್, ವೇದಾಂತ, ಎಸ್‌ಬಿಐ, ಮಾರುತಿ ಸುಜುಕಿ ಮತ್ತು ಇಂಡಸ್‌ಲ್ಯಾಂಡ್ ಬ್ಯಾಂಕ್, 2 ಪರ್ಸೆಂಟ್‌ಗೂ ಹೆಚ್ಚಿನ ಏರಿಕೆ ಕಂಡಿದೆ. ಆದರೆ ಮತ್ತೊಂದೆಡೆ ಭಾರತಿ ಏರ್‌ಟೆಲ್, ಕೋಟಕ್ ಮಹೀಂದ್ರಾ ಬ್ಯಾಂಕ್, ಬಜಾಜ್ ಆಟೋ, ಏಷ್ಯನ್ ಪೇಂಟ್ಸ್, ಹೆಚ್‌ಡಿಎಫ್‌ಸಿ ಬ್ಯಾಂಕ್ 2 ಪರ್ಸೆಂಟ್ ಕುಸಿತ ಕಂಡಿವೆ.

ಅಮೆರಿಕಾ-ಚೀನಾ ವ್ಯಾಪಾರ ಒಪ್ಪಂದದ ಭರವಸೆಯ ಮಧ್ಯೆ, ಸೂಚ್ಯಂಕಗಳು ಉತ್ತಮ ವಹಿವಾಟು ನಡೆಸುತ್ತಿವೆ ಎಂದು ಷೇರುಪೇಟೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ವಾಷಿಂಗ್ಟನ್ ಮತ್ತು ಬೀಜಿಂಗ್ ನಡುವೆ ಮಧ್ಯಂತರ ವ್ಯಾಪಾರ ಒಪ್ಪಂದವಾಗುವ ವಾತಾವರಣವು ಸೃಷ್ಠಿಯಾಗಿದೆ. ಈ ಮೂಲಕ ಹೊಸ ಸುತ್ತಿನ ಮಾತುಕತೆಗೆ ಉಭಯ ರಾಷ್ಟ್ರಗಳು ಸಜ್ಜಾಗುತ್ತಿವೆ ಎಂದು ವರದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+