ಕಳೆದ ಒಂದು ವಾರದಿಂದ ಕೇವಲ ಇಳಿಕೆಯತ್ತಲೇ ಸಾಗಿದ್ದ ಭಾರತದ ಷೇರುಪೇಟೆ ಶುಕ್ರವಾರ ಸ್ವಲ್ಪ ಚೇತರಿಕೆ ಕಂಡಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 500ಕ್ಕೂ ಅಧಿಕ ಪಾಯಿಂಟ್ಸ್ ಏರಿಕೆಗೊಂಡು 28,840 ಪಾಯಿಂಟ್ಸ್ ಇಳಿಕೆಯಾಗಿದೆ. ನಿಫ್ಟಿ 170 ಪಾಯಿಂಟ್ಸ್ ಹೆಚ್ಚಾಗಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಗುರುವಾರ ಇಳಿಕೆಯತ್ತ ಮುಖ ಮಾಡಿತ್ತು. ಆದರೆ ಶುಕ್ರವಾರ ಮಾರುಕಟ್ಟೆ ವಹಿವಾಟು ಚೇತರಿಸಿಕೊಂಡಿದ್ದು ಸೆನ್ಸೆಕ್ಸ್ 28,840ರ ಗಡಿ ದಾಟಿದೆ. ಗುರುವಾರ ಸೆನ್ಸೆಕ್ಸ್ 28,288.23ಕ್ಕೆ ಕೊನೆಗೊಂಡಿತು. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 170 ಪಾಯಿಂಟ್ಸ್ ಅಧಿಕಗೊಂಡು 8,460 ಪಾಯಿಂಟ್ಸ್ ತಲುಪಿದೆ.

ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ಅಂಬಾನಿ ಕುಟುಂಬದ ಪಾಲು ಹೆಚ್ಚುತ್ತಿದ್ದಂತೆ ಇಳಿಕೆ ಕಂಡಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಏರಿಕೆ ದಾಖಲಿಸಿವೆ. ಗುರುವಾರ ವಹಿವಾಟು ಕೊನೆಗೊಂಡಾಗ 917.10 ರುಪಾಯಿಗೆ ಕೊನೆಗೊಂಡಿದ್ದ ಆರ್‌ಐಎಲ್ ಷೇರು 4.7 ಪರ್ಸೆಂಟ್ ಏರಿಕೆ ಕಂಡಿದ್ದು 960 ರುಪಾಯಿ ದಾಟಿದೆ.
ರಿಲಯನ್ಸ ಜೊತೆಗೆ ಒಎನ್‌ಜಿಸಿ, ಗೇಲ್, ಭಾರ್ತಿ ಇನ್ಫಾರ್ಟೆಲ್, ಟೆಕ್ ಮಹಿಂದ್ರಾ, ಹೆಚ್‌ಸಿಎಲ್ ಟೆಕ್, ಇನ್ಫೋಸಿಸ್, ಪವರ್‌ಗ್ರಿಡ್ ಕಾರ್ಪ್, ವಿಪ್ರೋ, ಐಟಿಸಿ ಕಂಪನಿಯ ಷೇರುಗಳು 5 ಪರ್ಸೆಂಟ್‌ಗೂ ಅಧಿಕ ಏರಿಕೆ ದಾಖಲಿಸಿವೆ.
ಷೇರುಪೇಟೆ ಇಳಿಕೆಯ ವಹಿವಾಟುಗಳ ನಡುವೆ ಏರಿಕೆ ಕಂಡಿದ್ದ ಯೆಸ್ ಬ್ಯಾಂಕ್ ಷೇರುಗಳು 5 ಪರ್ಸೆಂಟ್ ಇಳಿಕೆ ದಾಖಲಿಸದೆ. ಜೊತೆಗೆ ಹೆಚ್‌ಡಿಎಫ್‌ಸಿ ಬ್ಯಾಂಕ್, ಇಂಡಸ್‌ಲ್ಯಾಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಟೈಟಾನ್ ಕಂಪನಿ, ಅದಾನಿ ಪೋರ್ಟ್ಸ್, ಎನ್‌ಟಿಪಿಸಿ ಕಂಪನಿಯ ಷೇರುಗಳು ನಷ್ಟ ಅನುಭವಿಸಿವೆ.


Click it and Unblock the Notifications