ಜಾಗತಿಕ ಮಟ್ಟದಲ್ಲಿ ಕಿಟಕಿಗಳು, ಬಾಗಿಲು ಮತ್ತು ಫೆಕೇಡ್ ಗಳನ್ನು ತಯಾರಿಸುವ, ಹಾಗೂ ವಿಶ್ವದಾದ್ಯಂತ ಎನ್ವಲಪ್ ಗಳನ್ನು ನಿರ್ಮಾಣ ಮಾಡುವಲ್ಲಿ ಹೆಸರುವಾಸಿಯಾಗಿರುವ ಶುಕೊ ಇಂಟರ್ ನ್ಯಾಷನಲ್, KG ಅಲುಫಿಟ್ ನ ಬಹುತೇಕ ಪಾಲುದಾರಿಕೆಯನ್ನು ಸ್ವಾಧೀನಪಡಿಸಿಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಘೋಷಣೆ ಮಾಡಿದೆ.
ಇದರ ಪರಿಣಾಮವಾಗಿ ಅಲುಫಿಟ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಒಂದು ಜಂಟಿ ಉದ್ಯಮವಾಗಲಿದ್ದು, ಭಾರತದಲ್ಲಿ ದೊಡ್ಡ ವಾಣಿಜ್ಯ ಮತ್ತು ಮೂಲಸೌಕರ್ಯಗಳ ಫೆಕೇಡ್ ಯೋಜನೆಗಳನ್ನು ಮುಂದುವರಿಸಲು ಶುಕೋಗೆ ಹೆಚ್ಚಿನ ಅವಕಾಶವನ್ನು ನೀಡಲಿದೆ. ಈ ಸಹಭಾಗಿತ್ವವು ವಿಶ್ವದ ಪ್ರಮುಖ ಅಲ್ಯೂಮಿನಿಯಂ ಫೆಕೇಡ್ ಫ್ಯಾಬ್ರಿಕೇಟರ್ ಗಳಲ್ಲಿ ಒಂದಾಗುವುದನ್ನು ಎದುರು ನೋಡುತ್ತದೆ.
ಪಂಕಜ್ ಕೇಸ್ವಾನಿ ಅವರು ಇನ್ನು ಮುಂದೆ ಅಲುಫಿಟ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಜಾಯಿಂಟ್ ವೆಂಚರ್ ನ ವ್ಯವಸ್ಥಾಪಕರಾಗಿ ಮುಂದುವರಿಯಲಿದ್ದಾರೆ ಮತ್ತು ಕಂಪನಿಯನ್ನು ಮುನ್ನಡೆಸಲಿದ್ದಾರೆ.

ಈ ಘೋಷಣೆ ಬಗ್ಗೆ ಮಾತನಾಡಿದ ಶುಕೊ ಇಂಟರ್ ನ್ಯಾಷನಲ್ KG ಯ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಆ್ಯಂಡ್ರಿಯಾಸ್ ಎಂಗೆಲ್ ಹಾರ್ಡ್ಟ್ ಅವರು, ವಿಶ್ವದಲ್ಲಿ ವಾಣಿಜ್ಯ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರದಲ್ಲಿ ಭಾರತದ ಅತ್ಯಂತ ಸಕ್ರಿಯ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಅದೇ ರೀತಿ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತನ್ನ ಅಸ್ತಿತ್ವವನ್ನು ಗಟ್ಟಿಪಡಿಸಿಕೊಳ್ಳಲು ಹೆಜ್ಜೆ ಇಟ್ಟಿರುವ ಶುಕೋಗೆ ಇದು ಪ್ರಮುಖ ಮಾರುಕಟ್ಟೆಯಾಗಿದೆ. ಅಲುಫಿಟ್ ನೊಂದಿಗಿನ ನಮ್ಮ ಜಾಯಿಂಟ್ ವೆಂಚರ್ ಭಾರತದಲ್ಲಿ ನಮ್ಮ ಬೆಳವಣಿಗೆ ಮಟ್ಟವನ್ನು ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ. ಗುಣಮಟ್ಟದ ಮೇಲೆ ಮತ್ತು ಸ್ಟೇಟ್ ಆಫ್ ದಿ ಆರ್ಟ್ ಉತ್ಪಾದನಾ ಸೌಲಭ್ಯಗಳ ಮೇಲೆ ಆದ್ಯತೆ ನೀಡುವುದರೊಂದಿಗೆ ಅಲುಫಿಟ್ ನಮಗೆ ಪರಿಪೂರ್ಣವಾದ ಪಾಲುದಾರನೆನಿಸಿದೆ. ಇದರ ಮೂಲಕ ನಾವು ಭಾರತದಲ್ಲಿ ದೊಡ್ಡ ಮಟ್ಟದ ಫೆಕೇಡ್ ಯೋಜನೆಗಳಿಗೆ ಸುಸ್ಥಿರವಾದ ಪರಿಹಾರಗಳನ್ನು ವಿತರಿಸಲಿದ್ದೇವೆ. ಭವಿಷ್ಯದಲ್ಲಿ ಸುಸ್ಥಿರವಾದ ಕಟ್ಟಡಗಳನ್ನು ಸಕ್ರಿಯಗೊಳಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ. ಅದು ತಂತ್ರಜ್ಞಾನಗಳು ಮತ್ತು ವ್ಯವಸ್ಥೆಗಳ ಬೆಂಬಲದೊಂದಿಗೆ ಜನರ ಮೇಲೆ ಕೇಂದ್ರೀಕೃತವಾಗಿರಿಸುತ್ತದೆ ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯವನ್ನು ಹೊಂದಿರುತ್ತದೆ. ಈ ಪಾಲುದಾರಿಕೆಯ ಮೇಲೆ ನಾವು ಅಲುಫಿಟ್ ಮತ್ತು ಶುಕೊದ ಎಲ್ಲಾ ನೌಕರರನ್ನು ಅಭಿನಂದಿಸಲು ಬಯಸುತ್ತೇವೆ. ಈ ಜಾಯಿಂಟ್ ವೆಂಚರ್ ಎರಡೂ ಕಂಪನಿಗಳಿಗೆ ಪರಸ್ಪರ ಪ್ರಯೋಜನವನ್ನು ನೀಡುತ್ತದೆ ಎಂಬ ವಿಶ್ವಾಸವನ್ನು ಹೊಂದಿದ್ದೇವೆ ಮತ್ತು ನಾವು ಒಟ್ಟಾಗಿ ಒಂದು ರೋಮಾಂಚಕಾರಿಯಾದ ಪ್ರಯಾಣವನ್ನು ಎದುರು ನೋಡುತ್ತಿದ್ದೇವೆ'' ಎಂದು ತಿಳಿಸಿದರು.
ಅಲುಫಿಟ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕೇಸ್ವಾನಿ ಅವರು ಮಾತನಾಡಿ, ಭಾರತದ ಅತ್ಯಂತ ಮಹತ್ವಪೂರ್ಣವಾದ ಮತ್ತು ಪ್ರಮುಖ ಫೆಕೇಡ್ ಫ್ಯಾಬ್ರಿಕೇಟರ್ ಅನ್ನಾಗಿ ಮಾಡಿರುವ ಇಡೀ ಅಲುಫಿಟ್ ಕುಟುಂಬಕ್ಕೆ ಈ ಸಹಭಾಗಿತ್ವ ಅತ್ಯಂತ ಮಹತ್ವವಾದ ಮೈಲಿಗಲ್ಲಾಗಿದೆ. ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಅಲುಫಿಟ್ ವಿವಿಧ ಗಾತ್ರ, ಮಟ್ಟದ ಮತ್ತು ಸಂಕೀರ್ಣತೆಯ 1000 ಕ್ಕೂ ಹೆಚ್ಚು ಯೋಜನೆಗಳಿಗೆ ತನ್ನ ವೃತ್ತಿಪರತೆ ಮತ್ತು ಗುಣಮಟ್ಟದ ಉತ್ಪನ್ನಗಳನ್ನು ಪೂರೈಸಿದೆ. ಡೆವಲಪರ್ ಗಳು ಮತ್ತು ಹೂಡಿಕೆದಾರರಿಗೆ ನಾವೀನ್ಯತೆ, ಸೇವೆಯ ಗಡಿಗಳನ್ನು ತಲುಪುವ ಮತ್ತು ಭಾರತದಲ್ಲಿ ಎನ್ವಲಪ್ ಗಳನ್ನು ನಿರ್ಮಾಣ ಮಾಡುವ ಮಟ್ಟವನ್ನು ಹೆಚ್ಚಿಸುವ ಪರಿಹಾರಗಳನ್ನು ನೀಡುವಲ್ಲಿ ನಾವು ಶುಕೊ ಜೊತೆ ಪಾಲುದಾರರಾಗಲು ಉತ್ಸುಕರಾಗಿದ್ದೇವೆ'' ಎಂದು ತಿಳಿಸಿದರು.
1984 ರಲ್ಲಿ ಆರಂಭವಾದ ಅಲುಫಿಟ್, ಭಾರತದ ಬೇಡಿಕೆಗಳನ್ನು ಈಡೇರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಕಂಪನಿಯು ಸುಸ್ಥಿರವಾಗಿ ಬೆಳವಣಿಗೆ ಕಂಡಿದೆ ಮತ್ತು ತನ್ನ ನೌಕರರು ಹಾಗೂ ಗ್ರಾಹಕರ ವಿಶ್ವಾಸವನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಕೇವಲ ಎಂಟು ಸದಸ್ಯರಿಂದ ಆರಂಭವಾದ ಕಂಪನಿಯು ಕಚೇರಿ ಸಂಕೀರ್ಣಗಳಿಂದ ಐಟಿ ಪಾರ್ಕುಗಳಿಂದ ವಿಮಾನನಿಲ್ದಾಣಗಳವರೆಗಿನ ಸವಾಲಿನಿಂದ ಕೂಡಿದ್ದ ಯೋಜನೆಗಳನ್ನು ಸಮರ್ಥವಾಗಿ ಪೂರ್ಣಗೊಳಿಸುವ ಮೂಲಕ ಮಹತ್ವದ ಬೆಳವಣಿಗೆ ಸಾಧಿಸಿದೆ. ಭಾರತದಲ್ಲಿ ಬೆಂಗಳೂರು, ಹೊಸೂರು ಮತ್ತು ಮುಂಬೈ ನಗರಗಳಲ್ಲಿ ತನ್ನದೇ ಆದ ಉತ್ಪಾದನಾ ಘಟಕಗಳನ್ನು ಹೊಂದಿದ್ದು, ಇವುಗಳ ಮೂಲಕ ಆತಿಥ್ಯ, ವರ್ಲ್ಡ್ ಟ್ರೇಡ್ ಸೆಂಟರ್ ಗಳು, ಐಟಿ ಪಾರ್ಕುಗಳು ಮತ್ತು ಐಟಿಇಎಸ್ ಕ್ಯಾಂಪಸ್ ಗಳಂತಹ ಯೋಜನೆಗಳನ್ನು ಪೂರ್ಣಗೊಳಿಸಿದೆ. ಇದರ ಮೂಲಕ ಕಂಪನಿಯು ದೇಶದ ಡೆವಲಪರ್ ಗಳು, ಕಾರ್ಪೊರೇಟ್ ಗಳು ಮತ್ತು ಹಣಕಾಸು ಸಂಸ್ಥೆಗಳ ನೆಚ್ಚಿನ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.


Click it and Unblock the Notifications