ಯುಪಿಐ ಮೂಲಕ ಎಫ್‌ಡಿ ಖಾತೆ: ಗ್ರಾಹಕರಿಗೆ ಸುಲಭವಾದ ಎಫ್‌ಡಿ ಸಿಸ್ಟಮ್ ಪರಿಚಯಿಸಿದ ಎಸ್‌ಐಬಿ ಬ್ಯಾಂಕ್..!

SIB (ಸೌತ್ ಇಂಡಿಯನ್ ಬ್ಯಾಂಕ್) ತಮ್ಮ ಗ್ರಾಹಕರಿಗಾಗಿ ಹೊಸದೊಂದು ಎಫ್‌ಡಿ ಸಿಸ್ಟಮ್‌ನ ಪರಿಚಯಿಸಿದೆ. ಇದೊಂದು ತಡೆರಹಿತ ಎಫ್‌ಡಿ ಬುಕಿಂಗ್ ಆಗಿದ್ದು, ಹೂಡಿಕೆ ಮಾಡುವ ಗ್ರಾಹಕರಿಗೆ ಅತಿಹೆಚ್ಚು ಸಹಾಯಕರವಾಗಲಿದೆ. ಹೊಸದಾಗಿ ಪರಿಚಯಿಸಿರಲಾಗಿರುವ 'SIB ಕ್ವಿಕ್ ಎಫ್‌ಡಿ'ಯ ಅಡಿ, ಗ್ರಾಹಕರು ತಮ್ಮ ಬೇರೆ ಬೇರೆ ಬ್ಯಾಂಕ್‌ ಖಾತೆಗಳಿಂದ ಹಣ ಬಳಸಿಕೊಂಡು, ಎಫ್‌ಡಿ ತೆರೆಯಲು ಸಹಾಯಕರವಾಗಿದೆ. ಅಲ್ಲದೇ UPIನ ಬಳಸಿಕೊಂಡು ಸಹ ಎಫ್‌ಡಿಯಲ್ಲಿ ಹೂಡಿಕೆ ಮಾಡಲು ಗ್ರಾಹಕರಿಗೆ ಅನುವಾಗಿದೆ.

ಯುಪಿಐ ಮೂಲಕವೂ ನೀವು ಎಫ್‌ಡಿ ಖಾತೆ ತೆರೆಯಬಹುದು

ಎಫ್‌ಡಿ ಹೂಡಿಕೆಗೆ ಸರಳ ವಿಧಾನವನ್ನು ಪರಿಚಯಿಸಿರುವ ಸೌತ್ ಇಂಡಿಯನ್ ಬ್ಯಾಂಕ್, ಈ ಮೂಲಕ ಗ್ರಾಹಕರಿಗೆ ಹೂಡಿಕೆ ಮಾಡಲು ಉತ್ತೇಜನ ನೀಡುತ್ತಿದೆ. ಹೇಗೆಂದರೆ ಅತೀ ನಾವಿನ್ಯವಾಗಿ ಪರಿಚಿತವಾಗಿರುವ ಈ ಸಿಸ್ಟಮ್‌ ಗ್ರಾಹಕರನ್ನು ಹೂಡಿಕೆಗೆ ಆಕರ್ಷಿಸುತ್ತಿದೆ. SIB ಕ್ವಿಕ್ ಎಫ್‌ಡಿಯ ಅನುಸಾರ ಹೂಡಿಕೆಯೂ ಸುಲಭ ಹಾಗೂ ಸುವ್ಯವಸ್ಥಿತವಾಗಿದೆ. ಕೆವೈಸಿ ಹೊಂದಿರುವ ಯಾವುದೇ ಗ್ರಾಹಕರು ಈಗ ಯುಪಿಐ ಬಳಸಿಕೊಂಡು ಎಫ್‌ಡಿ ಖಾತೆ ತೆರೆಯಬಹುದು. ಇನ್ನುಮುಂದೆ ಸುರಕ್ಷಿತವಾಗಿ ಹೂಡಿಕೆ ಮಾಡಿ ತಮ್ಮ ತಡೆರಹಿತ ಠೇವಣಿಯನ್ನು ಕಾಪಾಡಿಕೊಳ್ಳಬಹುದು.

ಉಳಿತಾಯ ಖಾತೆ ಅಗತ್ಯವಿಲ್ಲ: ಎಸ್‌ಐಬಿ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಇಲ್ಲದೆಯೇ ಗ್ರಾಹಕರು ಎಫ್‌ಡಿ ಖಾತೆಯನ್ನಯ ತೆರೆಯಬಹುದು.

ಕಾಗದ ರಹಿತ ಪ್ರಕ್ರಿಯೆ: ಎಫ್‌ಡಿ ಬುಕಿಂಗ್ ಪ್ರಕ್ರಿಯೆ ಸಂಪೂರ್ಣ ಡಿಜಿಟಲ್ ಆಗಿರುತ್ತದೆ. ಹಾಗೂ ಕೇವಲ 5 ನಿಮಿಷದಲ್ಲಿ ತ್ವರಿತವಾಗಿ ಹೂಡಿಕೆ ಮಾಡುವ ವಿಧಾನ ಇದಾಗಿದೆ.

ಯುಪಿಐ ಮೂಲಕ ಎಫ್‌ಡಿ ಸಂಗ್ರಹ: ಯುಪಿಐ ಮೂಲಕವೇ ತಮ್ಮ ಎಫ್‌ಡಿ ಖಾತೆಗೆ ಹಣ ಹೂಡಿಕೆ ಮಾಡಲು ಅನುಕೂಲಕರವಾಗಿದೆ.

ಅಗತ್ಯವಿರುವ ಪ್ರಮುಖ ದಾಖಲಾತಿ: ಡಿಜಿಟಲ್ ಮೂಲಕ ಎಫ್‌ಡಿ ತೆರೆಯಲು ಕೇವಲ ಆಧಾರ್ ವಿವರ ಹಾಗೂ PAN ಮಾತ್ರ ಬೇಕಿರುತ್ತದೆ.

ಖಾತೆ ತೆರೆಯಲು ನಿಗದಿತ ಸಮಯ ಇಲ್ಲ: ಎಸ್‌ಐಬಿ ಬ್ಯಾಂಕ್‌ನಲ್ಲಿ ಎಫ್‌ಡಿ ಖಾತೆಯನ್ನು ತೆರೆಯಬೇಕಿರುವ ಗ್ರಾಹಕರು ಯಾವುದೇ ಸಮಯದಲ್ಲಿ, ಖಾತೆ ತೆರೆಯಬಹುದು. ಯಾವುದೇ ರಜೆ ಹಾಗೂ ನಿಗದಿತ ಸಮಯ ಕಾಯ್ದಿರಿಸಿರುವುದಿಲ್ಲ. ಇದು 24*7 ಲಭ್ಯವಿರುತ್ತದೆ.

ಅತೀ ಕಡಿಮೆ ಹೂಡಿಕೆಯಲ್ಲಿ ಪ್ರವೇಶ: ಎಫ್‌ಡಿ ಖಾತೆಯಲ್ಲಿ ಹೂಡಿಕೆಯು1000 ರೂ. ಇಂದ ಆರಂಭವಾಗುತ್ತದೆ.

ಉತ್ತಮ ಆದಾಯ: ಅಕಾಲಿಕ ಆದಾಯ ವಾಪಸಾತಿ ಹಾಗೂ ಉತ್ತಮ ಬಡ್ಡಿ ದರಗಳು ಸಿಗುತ್ತದೆ.

ಅತ್ಯಂತ ಸುರಕ್ಷಿತ: ಈ ಕ್ವಿಕ್ ಎಫ್‌ಡಿಯು DICGC ವಿಮೆಯ ಅಡಿಯಲ್ಲಿ 5 ಲಕ್ಷ ರೂ.ವರೆಗೂ ಒಳಗೊಂಡಿರುತ್ತದೆ.

ಡಿಜಿಟಲ್ ಮಯವಾಗುತ್ತಿರುವ ಜಗತ್ತಿಗೆ ಎಸ್‌ಐಬಿ ಬ್ಯಾಂಕ್ ಈ ಹೊಸದೊಂದು ಎಫ್‌ಡಿ ಸಿಸ್ಟಮ್ ಪರಿಚಯಿಸಿರುವುದು, ನಿಜಕ್ಕೂ ಬೆಳವಣಿಗೆಕಾರಿಯಾಗಿರುವ ಸಂಗತಿ. ಯುಪಿಐ ಮೂಲಕ ಹಣ ಪಾವತಿ ಮಾಡುತ್ತಿದ್ದ ಜನರು, ಈಗ ಖಾತೆ ಕೂಡ ತೆರೆಯಲು ಅನುಕೂಲವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+