ಅಮೇರಿಕಾದ ಅತೀ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಸಿಲಿಕಾನ್ ವ್ಯಾಲಿ ಬ್ಯಾಂಕ್ ಬಂದ್ ಆಗಿದೆ. ಯುಎಸ್‌ನ ಅತೀ ದೊಡ್ಡ ಬ್ಯಾಂಕಿಂಗ್ ವೈಫಲ್ಯ ಇದಾಗಿದೆ. ಬ್ಯಾಂಕ್‌ನಲ್ಲಿನ 100 ಬಿಲಿಯನ್ ಡಾಲರ್ ಕೆಲವೇ ದಿನಗಳಲ್ಲಿ ನಷ್ಟವಾಗಿದೆ. ಈ ಹಿಂದೆ ಹಲವಾರು ಸ್ಟಾರ್ಟ್‌ಅಪ್ ಸಂಸ್ಥೆಗಳಿಗೆ ಈ ಬ್ಯಾಂಕ್ ಸಾಲ ಸೌಲಭ್ಯವನ್ನು ನೀಡುತ್ತಿತ್ತು. ಈ ಬ್ಯಾಂಕ್ ಬಂದ್ ಆದ ಕಾರಣದಿಂದಾಗಿ ಹಲವಾರು ಸ್ಟಾರ್ಟ್‌ಅಪ್ ಸಂಸ್ಥೆಗಳಿಗೆ ಮತ್ತು ಹೂಡಿಕೆದಾರರಿಗೆ ತಲೆಬಿಸಿಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ವೈ ಕಾಂಬಿನೇಟರ್, "ಸಿಲಿಕಾನ್ ವ್ಯಾಲಿ ಬ್ಯಾಂಕ್‌ನಲ್ಲಿ ಖಾತೆಗಳನ್ನು ಹೊಂದಿರುವ ಸುಮಾರು 10,000 ಸಣ್ಣ ಸಂಸ್ಥೆಗಳು, ಸ್ಟಾರ್ಟ್‌ಅಪ್‌ಗಳು ಯುಎಸ್ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದೆ, ಈ ಸ್ಟಾರ್ಟ್‌ಅಪ್‌ಗಳ ಮೇಲೆ ಪ್ರಭಾವ ಬೀರಬಹುದು. ಸಂಸ್ಥೆಯಲ್ಲಿ 1 ಲಕ್ಷ ಉದ್ಯೋಗ ನಷ್ಟ ಉಂಟಾಗಲಿದೆ, ನಿರುದ್ಯೋಗ ಅಧಿಕವಾಗಲು ಕಾರಣವಾಗಬಹುದು. ಇದು ಕೆಲವು ಭಾರತೀಯ ಸ್ಟಾರ್ಟ್‌ಅಪ್‌ಗಳ ಮೇಲೆ ಪ್ರಭಾವ ಬೀರಬಹುದು," ಎಂದಿದೆ.

ಯಾರಿಗೆಲ್ಲ ಏನು ಪ್ರಭಾವ ಉಂಟಾಗಲಿದೆ?
1 ಲಕ್ಷ ಮಂದಿಯು ಕೆಲಸವನ್ನು ಕಳೆದುಕೊಳ್ಳುವುದು ಮಾತ್ರವಲ್ಲದೆ, ಉದ್ಯೋಗಿಗಳ ಮಾಸಿಕ ವೇತನವು ಕೂಡಾ ಕಡಿತವಾಗಲಿದೆ. ಎಲ್ಲ ಮೊತ್ತವನ್ನು ಪಾವತಿಸಿದ ಬಳಿಕವೂ ಇಲ್ಲಿ ಬಿಕ್ಕಟ್ಟು ಇರುವ ಸಾಧ್ಯತೆಯಿದೆ. ವೈ ಕಾಂಬಿನೇಟರ್ ಪರಿಸರ ವ್ಯವಸ್ಥೆಯಲ್ಲಿನ ಮೂರನೇ ಒಂದು ಭಾಗದಷ್ಟು ಸಂಸ್ಥೆಗಳು ಸಿಲಿಕಾನ್ ವ್ಯಾಲಿ ಬ್ಯಾಂಕ್‌ನಲ್ಲಿ ಒಂದೇ ಖಾತೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ವರದಿಯಾಗಿದೆ.
ಸ್ಟಾಫ್‌ಗಳಿಗೆ ಕಳುಹಿಸಲಾದ ಇಮೇಲ್ ಪ್ರಕಾರ, ಫೆಡರಲ್ ಡೆಪಾಸಿಟ್ ಇನ್ಶೂರೆನ್ಸ್ ಕಾಪೋರೇಷನ್ ಸಿಲಿಕಾನ್ ವ್ಯಾಲಿ ಬ್ಯಾಂಕ್‌ನ ಸಂಪತ್ತನ್ನು ಶುಕ್ರವಾರ ವಶಕ್ಕೆ ಪಡೆದುಕೊಂಡಿದೆ. 2008ರ ಹಣಕಾಸು ಬಿಕ್ಕಟ್ಟಿನ ಬಳಿಕ ಯುಎಸ್‌ನಲ್ಲಿ ನಡೆದ ಅತೀ ದೊಡ್ಡ ಬ್ಯಾಂಕಿಂಗ್ ವೈಫಲ್ಯ ಇದಾಗಿದೆ. ಡೆಪಾಸಿಟ್‌ದಾರರು, ಮುಖ್ಯವಾಗಿ ತಾಂತ್ರಿಕ ಕೆಲಸಗಾರರು ಮತ್ತು ಬಂಡವಾಳ-ಬೆಂಬಲಿತ ಕಂಪನಿಗಳು ತಮ್ಮ ಡೆಪಾಸಿಟ್ ಮೊತ್ತವನ್ನು ವಿತ್‌ಡ್ರಾ ಮಾಡಲು ಆರಂಭ ಮಾಡಿದ ಬಳಿಕ ಬ್ಯಾಂಕ್‌ನಲ್ಲಿ ವೈಫಲ್ಯತೆ ಕಂಡುಬಂದಿದೆ.
ಇನ್ನು ಉದ್ಯೋಗಿಗಳ ವೇತನದ 1.5 ಪಟ್ಟು 45 ದಿನಗಳ ವೇತನವನ್ನು ನೀಡಿತ್ತು. ಅದೇ ಸಂದರ್ಭದಲ್ಲಿ ಸಣ್ಣ ಉದ್ಯಮಗಳ 3,500 ಸಿಇಒಗಳು ಮತ್ತು ಸಹ ಸಂಸ್ಥಾಪಕರು ಆತಂಕದಲ್ಲಿದ್ದಾರೆ. ಇದರಲ್ಲಿ ಭಾರತೀಯ ಸಂಸ್ಥೆಯೂ ಇದೆ. 250,000 ಯುಎಸ್ ಡಾಲರ್‌ನ 37,000 ಸಣ್ಣ ಉದ್ಯಮಗಳ ಮೇಲೆ ಪ್ರಭಾವ ಬೀರಲಿದೆ.


Click it and Unblock the Notifications