ಫೆಡರಲ್ ಡೆಪಾಸಿಟ್ ಇನ್ಶೂರೆನ್ಸ್ ಕಾಪೋರೇಷನ್ ಸಿಲಿಕಾನ್ ವ್ಯಾಲಿ ಬ್ಯಾಂಕ್‌ನ ಸಂಪತ್ತನ್ನು ಶುಕ್ರವಾರ ವಶಕ್ಕೆ ಪಡೆದುಕೊಂಡಿದೆ. 2008ರ ಹಣಕಾಸು ಬಿಕ್ಕಟ್ಟಿನ ಬಳಿಕ ಯುಎಸ್‌ನಲ್ಲಿ ನಡೆದ ಅತೀ ದೊಡ್ಡ ಬ್ಯಾಂಕಿಂಗ್ ವೈಫಲ್ಯ ಇದಾಗಿದೆ. ಡೆಪಾಸಿಟ್‌ದಾರರು, ಮುಖ್ಯವಾಗಿ ತಾಂತ್ರಿಕ ಕೆಲಸಗಾರರು ಮತ್ತು ಬಂಡವಾಳ-ಬೆಂಬಲಿತ ಕಂಪನಿಗಳು ತಮ್ಮ ಡೆಪಾಸಿಟ್ ಮೊತ್ತವನ್ನು ವಿತ್‌ಡ್ರಾ ಮಾಡಲು ಆರಂಭ ಮಾಡಿದ ಬಳಿಕ ಬ್ಯಾಂಕ್‌ನಲ್ಲಿ ವೈಫಲ್ಯತೆ ಕಂಡುಬಂದಿದೆ.
ಟೆಕ್ ಇಂಡಸ್ಟ್ರೀಗೆ ಅಧಿಕವಾಗಿ ಈ ಬ್ಯಾಂಕ್ ಸಾಲ ಸೌಲಭ್ಯವನ್ನು ಒದಗಿಸಿದೆ. ಒಂದು ದಶಕಕ್ಕೂ ಹಿಂದೆ ಆರಂಭವಾದ ಯುಎಸ್‌ನ ಅತೀ ದೊಡ್ಡ ಆರ್ಥಿಕ ಹಿಂಜರಿತದ (2008 ಹಣಕಾಸು ಬಿಕ್ಕಟ್ಟು) ಬಳಿಕ ಬ್ಯಾಂಕಿಂಗ್ ವಲಯದಲ್ಲಿ ಹಲವಾರು ಆತಂಕಗಳು ಸೃಷ್ಟಿಯಾಗಿದೆ. ಇನ್ನು ಇದೇ ರೀತಿಯ ಪರಿಸ್ಥಿತಿಯಿಂದ ಹೊರಬರುವ ಸಾಮರ್ಥ್ಯವನ್ನು ಇತರೆ ಪ್ರಮುಖ ಬ್ಯಾಂಕುಗಳು ಹೊಂದಿದೆ ಎಂದು ವರದಿಯು ಉಲ್ಲೇಖಿಸಿದೆ.

ಬ್ಯಾಂಕ್‌ನಲ್ಲಿದ್ದ ಡೆಪಾಸಿಟ್ ಎಷ್ಟು ನೋಡಿ
ಈ ಎಲ್ಲ ಬೆಳವಣಿಗೆಯ ಬಳಿಕ ಫೆಡರಲ್ ಡೆಪಾಸಿಟ್ ಇನ್ಶೂರೆನ್ಸ್ ಕಾಪೋರೇಷನ್ ಅಥವಾ ಎಫ್‌ಡಿಐಸಿ ಸಿಲಿಕಾನ್ ವ್ಯಾಲಿ ಬ್ಯಾಂಕ್ ಅನ್ನು ಬಂದ್ ಮಾಡುವಂತೆ ಸೂಚನೆ ನೀಡಿದೆ. ಹಾಗೆಯೇ ಬ್ಯಾಂಕ್‌ನ ಎಲ್ಲ ಡೆಪಾಸಿಟ್‌ಗಳನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಬ್ಯಾಂಕ್ ವೈಫಲ್ಯ ಕಂಡ ಸಂದರ್ಭದಲ್ಲಿ ಆಸ್ತಿ ರೂಪದಲ್ಲಿ ಬ್ಯಾಂಕ್‌ನಲ್ಲಿ 209 ಬಿಲಿಯನ್ ಯುಎಸ್ ಡಾಲರ್ ಇದ್ದರೆ, ಡೆಪಾಸಿಟ್ ರೂಪದಲ್ಲಿ 175.4 ಬಿಲಿಯನ್ ಯುಎಸ್ ಡಾಲರ್ ಇತ್ತು ಎಂದು ಎಫ್‌ಡಿಐಸಿ ಮಾಹಿತಿ ನೀಡಿದೆ.
250,000 ಯುಎಸ್ ಡಾಲರ್ ವಿಮಾ ಮಿತಿಗಿಂತ ಡೆಪಾಸಿಟ್ ಎಷ್ಟು ಅಧಿಕವಾಗಿದೆ ಎಂಬ ಬಗ್ಗೆ ಸದ್ಯಕ್ಕೆ ಮಾಹಿತಿ ಲಭ್ಯವಾಗಿಲ್ಲ. ಇನ್ನು ಎಫ್‌ಡಿಐಸಿ ಸಿಲಿಕಾನ್ ವ್ಯಾಲಿ ಆಸ್ತಿಯನ್ನು ಖರೀದಿ ಮಾಡುವ ಬಗ್ಗೆ ಘೋಷಣೆ ಮಾಡಿಲ್ಲ. ದಿನದ ಮಧ್ಯದಲ್ಲಿ ಎಫ್‌ಡಿಐಸಿ ಬ್ಯಾಂಕ್‌ನ ಆಸ್ತಿಯನ್ನು ವಶಕ್ಕೆ ಪಡೆದಿದೆ. ಇದು ಸಿಲಿಕಾನ್ ವ್ಯಾಲಿ ಬ್ಯಾಂಕ್‌ನ ಆರ್ಥಿಕ ಸ್ಥಿತಿ ಎಷ್ಟು ಅಪಾಯಕಾರಿಯಾಗಿತ್ತು ಎಂಬುವುದರ ಸೂಚಕವಾಗಿದೆ ಎಂದರೆ ತಪ್ಪಾಗಲಾರದು.
ತನ್ನ ಬ್ಯಾಂಕ್‌ನ ಹಣಕಾಸು ಸ್ಥಿತಿಯನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಬ್ಯಾಂಕ್ 1.75 ಬಿಲಿಯನ್ ಯುಎಸ್ ಡಾಲರ್ ರೈಸ್ ಮಾಡುವ ನಿರ್ಧಾರ ಮಾಡಿತ್ತು. ಇದಾದ ಬಳಿಕ ಈ ಬೆಳವಣಿಗೆ ಕಂಡು ಬಂದಿದೆ. ಇನ್ನು ಸಿಲಿಕಾನ್ ವ್ಯಾಲಿ ಬ್ಯಾಂಕ್‌ನ ಪೋಷಕ ಸಂಸ್ಥೆಯಾದ ಎಸ್‌ವಿಬಿ ಫಿನಾನ್ಶಿಯಲ್ ಗ್ರೂಪ್ ಷೇರುಗಳು ಶೇಕಡ 70ರಷ್ಟು ಇಳಿಕೆಯಾಗಿದೆ. ವಹಿವಾಟಿನ ಆರಂಭದಲ್ಲೇ ನಾದ್‌ದಕ್‌ನಲ್ಲಿ ಟ್ರೇಡಿಂಗ್ ಅನ್ನು ಸ್ಥಗಿತಗೊಳಿಸಲಾಗಿದೆ.


Click it and Unblock the Notifications