ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿರುವ ಪೆಟ್ರೋಲ್, ಡೀಸೆಲ್ ದರದ ನಡುವೆ ವಾಹನ ಸವಾರರು ಎಲೆಕ್ಟ್ರಿಕ್ ಸ್ಕೂಟರ್ ಕಡೆಗೆ ಗಮನ ಹರಿಸುತ್ತಿದ್ದಾರೆ. ಹೀಗಾಗಿ ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಅದೇ ರೀತಿಯಲ್ಲಿ ದ್ವಿಚಕ್ರ ವಾಹನ ತಯಾರಕರು ಆಕರ್ಷಕ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ ಕಡೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ.
ಇದರ ನಡುವೆ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಭಾರತದ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದು, 99,999 ರೂ.ಗೆ ದೇಶದ ಮಾರುಕಟ್ಟೆಯನ್ನ ಪ್ರವೇಶಿಸಿದೆ. ಆಗಸ್ಟ್ 15ರಂದು ಬಿಡುಗಡೆಗೊಂಡ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಬುಕಿಂಗ್ ಇಂದಿನಿಂದ ಆರಂಭಗೊಂಡಿದೆ.
ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಆನ್‌ರೋಡ್ ಬೆಲೆ 1.09 ಲಕ್ಷ ರೂ. ಆಗಿದ್ದರೂ, ಎಲೆಕ್ಟ್ರಿಕ್ ಸಬ್ಸಿಡಿ ನೀಡುತ್ತಿರುವ ರಾಜ್ಯಗಳಲ್ಲಿ, ಅದರ ಬೆಲೆ ಮತ್ತಷ್ಟು ಕಡಿಮೆಯಾಗಬಹುದು.
ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ರೇಂಜ್, ಚಾರ್ಜಿಂಗ್ ಸಮಯ
ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಇಕೋ ಮೋಡ್‌ನಲ್ಲಿ 236 ಕಿಮೀ ಮೈಲೇಜ್ ನೀಡುತ್ತದೆ. 100 ಕಿಮೀ/ಗಂ ಗರಿಷ್ಠ ವೇಗ ಮತ್ತು 0 ರಿಂದ 50 ಕಿಮೀ/ಗಂ ಗರಿಷ್ಠ ವೇಗವನ್ನು ಕೇವಲ 3.6 ಸೆಕೆಂಡುಗಳಲ್ಲಿ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದು ಇಕೋ ಮೋಡ್‌ನಲ್ಲಿ 203 ಕಿಮೀ ಮೈಲೇಜ್ ನೀಡುತ್ತದೆ.
ಚಾರ್ಜಿಂಗ್ ಕೂಡ ಸುಲಭ
ಅದರ ಚಾರ್ಜರ್ ಸಿಂಪಲ್ ಲೂಪ್ ಸಹಾಯದಿಂದ, ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಕೇವಲ 60 ಸೆಕೆಂಡುಗಳಲ್ಲಿ 2.5 ಕಿಮೀ ವ್ಯಾಪ್ತಿಯವರೆಗೆ ಚಾರ್ಜ್ ಆಗುತ್ತದೆ. ಇದು ಮನೆಯಲ್ಲಿ 2.75 ಗಂಟೆಗಳಲ್ಲಿ ಶೇಕಡಾ 0 ರಿಂದ 80ರಷ್ಟು ಬ್ಯಾಟರಿ ಚಾರ್ಜ್ ಆಗುತ್ತದೆ. ಮುಂಬರುವ ತಿಂಗಳುಗಳಲ್ಲಿ ಕಂಪನಿಯು ದೇಶಾದ್ಯಂತ 300 ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಿದ್ದು, ಗ್ರಾಹಕರು ವೇಗದ ಚಾರ್ಜಿಂಗ್‌ನ ಲಾಭವನ್ನು ಪಡೆಯಬಹುದು.
0 ರಿಂದ 40 ಕಿಮೀ/ಗಂ : 2.95 ಸೆಕೆಂಡುಗಳಲ್ಲಿ ತಲುಪಿದೆ
ಗರಿಷ್ಠ ವೇಗ: 105 ಕಿಮೀ/ಗಂ
ರೈಡ್ ಮೋಡ್: ಇಕೋ, ರೈಡ್, ಡ್ಯಾಶ್, ಸೋನಿಕ್
ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ
ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ 4.8 kWh ಲಿಥಿಯಂ-ಐಯಾನ್ ಬ್ಯಾಟರಿಯನ್ನು ಬಳಸುತ್ತದೆ, 6 ಕೆಜಿಗಿಂತ ಹೆಚ್ಚು ತೂಕವಿದೆ. ಈ ಬ್ಯಾಟರಿ ಪ್ಯಾಕ್ ಅನ್ನು ಭಾರತೀಯ ಬಳಕೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದು ತೆಗೆಯಬಹುದಾದ ಬ್ಯಾಟರಿಯಾಗಿದ್ದು ಅದನ್ನು ಮನೆಯಲ್ಲಿಯೇ ಸುಲಭವಾಗಿ ತೆಗೆಯಬಹುದು ಮತ್ತು ಚಾರ್ಜ್ ಮಾಡಬಹುದು.
ಇನ್ನು ಈ ಸ್ಕೂಟರ್ ನಾಲ್ಕು ಬಣ್ಣಗಳ ಆಯ್ಕೆಯನ್ನ ಹೊಂದಿದ್ದು, ಕೆಂಪು, ಬಿಳಿ, ನೀಲಿ ಮತ್ತು ಕಪ್ಪು ಬಣ್ಣಗಳ ಆಯ್ಕೆಯನ್ನ ಹೊಂದಿದೆ.
ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ವೈಶಿಷ್ಟ್ಯಗಳು ಮತ್ತು ತಂತ್ರಜ್ಞಾನ
7 ಇಂಚಿನ ಟಚ್‌ಸ್ಕ್ರೀನ್ ಡಿಸ್‌ಪ್ಲೇ ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್ ಹಲವು ರೀತಿಯ ವೈಶಿಷ್ಟ್ಯಗಳನ್ನು ಹೊಂದಿದೆ. ಬೋರ್ಡ್ ನ್ಯಾವಿಗೇಷನ್, ಬ್ಲೂಟೂತ್ ಜಿಯೋ ಫೆನ್ಸಿಂಗ್ 4G LTE, ವೇಗದ ಚಾರ್ಜಿಂಗ್ ಪಾಯಿಂಟ್, ಕರೆ ಮಾಡುವುದು, ಮ್ಯೂಸಿಕ್ ಕಂಟ್ರೋಲ್ ಹಾಗೂ ವಾಹನ ಟ್ರ್ಯಾಕಿಂಗ್ ಅನ್ನು ಹೊಂದಿದೆ.
ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳು
ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಹೊಂದಿರುವ ಈ ಸ್ಕೂಟರ್‌ನಲ್ಲಿ ಮುಂಭಾಗ ಮತ್ತು ಹಿಂಭಾಗದಲ್ಲಿ 90 ಎಂಎಂ ಡ್ರಮ್ ಬ್ರೇಕ್ ಹೊಂದಿದೆ. 12 ಇಂಚಿನ ಟೈರ್ ಗಾತ್ರ ಹೊಂದಿದ್ದು, 30 ಲೀಟರ್ ಬೂಟ್ ಸ್ಪೇಸ್ ಹೊಂದಿದೆ. ಹಾಗೂ ಸ್ಕೂಟರ್ ತೂಕ 110 ಕೆಜಿಯಷ್ಟಿದೆ.
ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಬುಕಿಂಗ್, ವಿತರಣೆ
ಕಂಪನಿಯು ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮೊದಲ ಹಂತದಲ್ಲಿ 75 ನಗರಗಳಲ್ಲಿ ಮತ್ತು ಬೆಂಗಳೂರು, ಚೆನ್ನೈ, ಹೈದರಾಬಾದ್ ನಂತಹ 13 ರಾಜ್ಯಗಳಲ್ಲಿ ಬಿಡುಗಡೆ ಮಾಡಲಿದ್ದು, ಮುಂಬರುವ ತಿಂಗಳುಗಳಲ್ಲಿ ಹೆಚ್ಚಿನ ನಗರಗಳಲ್ಲಿ ಬಿಡುಗಡೆಯಾಗಲಿದೆ. ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ರೂ. 1947 ಪಾವತಿಸುವ ಮೂಲಕ ಬುಕ್ ಮಾಡಬಹುದು, ಕಂಪನಿಯು ಶೀಘ್ರದಲ್ಲೇ ತನ್ನ ವಿತರಣೆಯನ್ನು ಆರಂಭಿಸಲಿದೆ.
ತಮಿಳುನಾಡಿನ ಹೊಸೂರಿನಲ್ಲಿರುವ ಉತ್ಪಾದನಾ ಕೇಂದ್ರದಲ್ಲಿ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ತಯಾರಿಸಲಾಗುವುದು. ಈ ಕಾರ್ಖಾನೆಯಲ್ಲಿ ಪ್ರತಿ ವರ್ಷ 1 ಮಿಲಿಯನ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ತಯಾರಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ.


Click it and Unblock the Notifications