ಕಡಿಮೆ ಹೂಡಿಕೆಯಿಂದ ಕೋಟಿ ಗಳಿಸಬೇಕೆಂಬ ಆಸೆ ಇದ್ಯಾ..? ಹಾಗಿದ್ದರೆ ತಪ್ಪದೇ ಈ ಸುದ್ದಿಯನ್ನು ನೀವು ಓದಲೇಬೇಕು.. ಹೌದು,ಆದಾಯವನ್ನು ಗಳಿಸಲು ಹಲವಾರು ಯೋಜನೆಗಲು ಇವೆ. ಆದರೆ ಕಡಿಮೆ ಆದಾಯದಿಂದ ಹೆಚ್ಚಿನ ಲಾಭವನ್ನು ಗಳಿಸಲು ಬೆಸ್ಟ್ ಆಯ್ಕೆ ಎಂದರೆ ಎಸ್‌ಐಪಿ (SIP) ಈ ಯೋಜನೆಯ ನಿಧಿಯಲ್ಲಿ ಉದ್ಯೋಗಿಗಳು, ವ್ಯಾಪಾರಿಗಳು ಮತ್ತು ಪ್ರತಿಯೊಬ್ಬ ವ್ಯಕ್ತಿಯೂ ಇದರಲ್ಲಿ ಹೂಡಿಕೆ ಮಾಡುವ ಮೂಲಕ ನಿಶ್ಚಿಂತೆಯಿಂದ ನಿವೃತ್ತಿ ಜೀವನವನ್ನು ಸಾಗಿಸಬಹುದು. ಹಾಗಿದ್ದರೆ ಕೇವಲ 1,500 ಹೂಡಿಕೆ ಮಾಡಿ 1 ಕೋಟಿಯನ್ನು ಹೇಗೆ ಗಳಿಸಬಹುದು ಎಂಬ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ..

SIP ಎಂದರೇನು?
SIP ಎಂದರೆ ಮ್ಯೂಚುವಲ್ ಫಂಡ್‌ಗಳು ನೀಡುವ ಹೂಡಿಕೆಯ ವಿಧಾನ. ಇದು ಒಟ್ಟು ಮೊತ್ತಕ್ಕಿಂತ ನಿಗದಿತ ಮೊತ್ತವನ್ನು ಹೂಡಿಕೆ ಮಾಡಲು ಅನುವು ಮಾಡಿಕೊಡುತ್ತದೆ. ಇದರಲ್ಲಿ ಕನಿಷ್ಠ ಕಂತು 500 ರೂ.ಗಳಿಂದ ಆರಂಭವಾಗುತ್ತದೆ. ಈ ಸ್ಥಿರ ಹೂಡಿಕೆಗಳ ಮೇಲೆ ಹೆಚ್ಚಿನ ಬಡ್ಡಿದರಗಳನ್ನು ಸಹ ಪಡೆಯಬಹುದು. ಇವು ನಿಯಮಿತವಾಗಿ ಹೂಡಿಕೆ ಮಾಡಲು ಮತ್ತು ಉಳಿತಾಯ ಮಾಡಲು ಸಹಾಯ ಮಾಡುತ್ತವೆ. ಜೊತೆಗೆ ನಿಮ್ಮ ಹಣಕಾಸಿನ ಗುರಿಗಳಿಗೆ ಬದ್ಧರಾಗಿರಲು ಸಹಕಾರಿಯಾಗಿದೆ.
SIPಗಳಲ್ಲಿ ಹೂಡಿಕೆ ಮಾಡಲು ದೊಡ್ಡ ಮೊತ್ತದ ಅವಶ್ಯಕತೆ ಇಲ್ಲ. ಕೇವಲ 500 ರೂ.ಗಳ ಮೂಲಕ ನಿಮ್ಮ ಹೂಡಿಕೆಯನ್ನು ಆರಂಭಿಸಬಹುದು. ಇದರಿಂದ ನಿಮ್ಮ ನಿವೃತ್ತಿ ಸಮಯವನ್ನು ಚಿಂತೆಯಿಲ್ಲದೆ ಕಳೆಯಬಹುದು. ಒಂದು ವೇಳೆ ನೀವು SIP ಗಳಲ್ಲಿ ಮಾಸಿಕ 1,500 ರೂ. ಹೂಡಿಕೆ ಮಾಡಿದರೆ, ನಿಮ್ಮ ನಿವೃತ್ತಿಯ ಹೊತ್ತಿಗೆ ಒಂದು ಕೋಟಿ ರೂ. ಗಳಿಸಬಹುದು.
1 ಕೋಟಿ ರೂ. ಗುರಿಯನ್ನು ತಲುಪಲು ಎಷ್ಟು ವರ್ಷಗಳು ಬೇಕಾಗುತ್ತದೆ?
ನೀವು 1 ಕೋಟಿ ರೂ. ಕಾರ್ಪಸ್ ಅನ್ನು ನಿರ್ಮಿಸಲು SIPನಲ್ಲಿ ಕನಿಷ್ಠ 36 ವರ್ಷಗಳವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ಹೇಗೆ ಎಂಬುದನ್ನು ಇಲ್ಲಿ ತಿಳಿಯಿರಿ.
ನೀವು SIP ಮ್ಯೂಚುವಲ್ ಫಂಡ್‌ನಲ್ಲಿ ಪ್ರತಿ ತಿಂಗಳು 1,500 ರೂ. ಹೂಡಿಕೆ ಮಾಡುತ್ತಿದ್ದರೆ, 36 ವರ್ಷಗಳಲ್ಲಿ ನಿಮ್ಮ ಒಟ್ಟು ಹೂಡಿಕೆ 6,48,000 ರೂ. ಆಗಿರುತ್ತದೆ. ಇದರ ಮೇಲೆ ನೀವು ಶೇಕಡಾ 12ರಷ್ಟು ವಾರ್ಷಿಕ ಆದಾಯವನ್ನು ಗಳಿಸುತ್ತಿದ್ದೀರಿ ಎಂದಾದರೆ, ನಿಮ್ಮ ಬಂಡವಾಳದ ಲಾಭವು 1,03,49,762 ರೂ. ಆಗಿರುತ್ತದೆ. ಇದರಿಂದ 36 ವರ್ಷಗಳಲ್ಲಿ ನಿಮ್ಮ ಕಾರ್ಪಸ್ 1,09,97,762 ರೂ.ಗಳಷ್ಟು ಆದಾಯ ಬೇಳೆಯುತ್ತದೆ.
ಲೆಕ್ಕಾಚಾರ ಮಾಡುವುದು ಹೇಗೆ?
ನಿಮ್ಮ ಹೂಡಿಕೆ ಮೊತ್ತ: 6,48,000 ರೂ., ನೀವು ಪಡೆದ ಬಂಡವಾಳ ಲಾಭ: 1,03,49,762 ರೂ., ಒಟ್ಟು ನೀವು ಗಳಿಸಿದ ಮೌಲ್ಯ: 1,09,97,762 ರೂ. SIPಯಲ್ಲಿ ಹೂಡಿಕೆ ಮಾಡುವಾಗ ಈ ವಿಷಯಗಳನ್ನು ನೆನಪಿಡಬೇಕು. SIP ಒಂದು ಮಾರುಕಟ್ಟೆ ಸಂಯೋಜಿತ ಯೋಜನೆಯಾಗಿದೆ. ಅಲ್ಲದೆ ಇದು ಸ್ಥಿರತೆಯ ಮೇಲೆ ಅವಲಂಬಿತವಾಗಿದೆ. ಇದರಲ್ಲಿ ಮೊತ್ತವನ್ನು ನಿಯಮಿತವಾಗಿ ಹೂಡಿಕೆ ಮಾಡಿ. ಮಾರುಕಟ್ಟೆ ಪರಿಸ್ಥಿತಿಯ ಆಧಾರದ ಮೇಲೆ ಇದರ ನಿಜವಾದ ಆದಾಯ ಬದಲಾಗಬಹುದು. ನಿಮ್ಮ ವಾರ್ಷಿಕ ಆದಾಯವು ಶೇಕಡಾ 13ರಷ್ಟಿದ್ದರೆ, 36 ವರ್ಷಗಳಲ್ಲಿ ನೀವು 1,45,68,810 ರೂ.ಗಳಷ್ಟು ಕಾರ್ಪಸ್ಅನ್ನು ನಿರ್ಮಿಸಬಹುದು. ಹಾಗೆಯೇ ನಿಮ್ಮ ವಾರ್ಷಿಕ ಆದಾಯವು ಶೇಕಡಾ 14ರಷ್ಟಿದ್ದರೆ, ನೀವು 36 ವರ್ಷಗಳಲ್ಲಿ 1,93,84,377 ರೂ.ಗಳಷ್ಟು ಕಾರ್ಪಸ್ ನಿರ್ಮಿಸಲು ಸಾಧ್ಯವಾಗುತ್ತದೆ.
ಒಟ್ಟಾರೆಯಾಗಿ, SIP ಒಂದು ವ್ಯವಸ್ಥಿತ ಹೂಡಿಕೆಯ ಯೋಜನೆಯಾಗಿದೆ, ಇದು ದೀರ್ಘಾವಧಿಯಲ್ಲಿ ಸಂಪತ್ತನ್ನು ಕ್ರೋಢೀಕರಿಸಲು ಸಹಾಯ ಮಾಡುತ್ತದೆ.


Click it and Unblock the Notifications