ಹಣ ಗಳಿಕೆ ಮತ್ತು ಉಳಿಕೆ..ಇವೆರಡು ಈಗಿನ ಜನರ ಆದ್ಯತೆ. ಬದಕು ಸರಾಗವಾಗಿ ಸಾಗಬೇಕೆಂದರೆ ಹಣದ ಗಳಿಕೆಯೂ ಇರಬೇಕು. ಜೀವನದಲ್ಲಿ ಮುಂದೆ ಯಾವತ್ತೂ ಆರ್ಥಿಕ ಕೊರತೆ ಆಗಬಾರದೆಂದರೆ ಹಣದ ಉಳಿಕೆಯೂ ಇರಬೇಕು. ಹೀಗಾಗಿ ಜನ ಹೇಗೋ ಪರದಾಡಿ ಒಂದಷ್ಟು ಹಣ ಗಳಿಸಿ ತಮ್ಮ ಅಗತ್ಯತೆಗಳಿಗೆ ಖರ್ಚು ಮಾಡುತ್ತಾರೆ. ಹಾಗೆಯೇ ಇಂತಿಷ್ಟು ಉಳಿಸಿ ಭವಿಷ್ಯಕ್ಕಾಗಿ ಸಂಗ್ರಹಿಸುತ್ತಾರೆ. ಈ ಆದಾಯ ಸಂಗ್ರಹಣೆಯ ಮೂಲ ಯಾವಾಗಲೂ ನಿಯಮಿತ ಹೂಡಿಕೆ ಯೋಜನೆ (ಎಸ್‌ಐಪಿ), ಸ್ಥಿರ ಠೇವಣಿ (ಎಫ್‌ಡಿ)ಗಳಂತಹವುಗಲ್ಲಿ ಹೂಡಿಕೆಯಾಗಿರುತ್ತವೆ.

ಆದರೆ ಇತ್ತೀಚಿನ ಜನರು ತಮ್ಮ ಹೂಡಿಕೆಯ ಶೈಲಿಯನ್ನು ಕೂಡ ಬದಲಿಸುತ್ತಿದ್ದಾರೆ. ಅಂದರೆ ನಿಯಮಿತ ಹೂಡಿಕೆ ಯೋಜನೆಗಳು (SIP) ಇಂದ ಹಣವನ್ನು ಹಿಂತೆಗೆದು, ಸ್ಥಿರ ಠೇವಣಿ (FD) ಗಳಂತಹ ಭದ್ರ ಹೂಡಿಕೆಗಳಿಗೆ ಬದಲಾಗುತ್ತಿದ್ದಾರೆ. ಅದರಲ್ಲೂ ನಿವ್ವಳ ಮೌಲ್ಯ ಹೊಂದಿರುವ ಜನರು ಈ ದಾರಿಯನ್ನು ಆಯ್ಕೆ ಮಾಡುತ್ತಿದ್ದಾರೆ. ಈ ಬದಲಾವಣೆಯ ಹಿಂದಿನ ಪ್ರಮುಖ ಕಾರಣಗಳು ಮಾರುಕಟ್ಟೆಯ ಅಸ್ಥಿರತೆ, ಅಪಾಯ ನಿರ್ವಹಣೆ, ಮತ್ತು ಹಣಕಾಸಿನ ಭದ್ರತೆ ಆಗಿವೆ.
SIP ಬಿಟ್ಟು FD ಆಯ್ಕೆ ಮಾಡುತ್ತಿರುವುದಕ್ಕೆ ಕಾರಣ:
1. ಮಾರುಕಟ್ಟೆಯ ಅಸ್ಥಿರತೆ:
ಇತ್ತೀಚೆಗೆ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳು ದುಬಾರಿಯಾಗುತ್ತಿವೆ. ಕಳೆದ ಆರು ತಿಂಗಳಲ್ಲಿ ಮಾರುಕಟ್ಟೆ ತಿದ್ದುಪಡಿಯಾಗುತ್ತಿವೆ. ಹೀಗಾಗಿ ಹೂಡಿಕೆದಾರರು ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ತಯಾರಿಲ್ಲ. ಇದೇ ಕಾರಣದಿಂದ ಅವರು ತಮ್ಮ ಸ್ಥಿರ ಆದಾಯ ನೀಡುವ FD ಗಳನ್ನು ಆಯ್ಕೆ ಮಾಡುತ್ತಿದ್ದಾರೆ.
2. ಲಾಭ ಮತ್ತು ಅಪಾಯ ನಿಯಂತ್ರಣ:
ಸ್ಮಾಲ್ ಕ್ಯಾಪ್ ಷೇರುಗಳು ಹೆಚ್ಚು ಅಸ್ಥಿರವಾಗುತ್ತಿರುವುದು ಕೂಡ ಹೂಡಿಕೆ ಮೇಲೆ ಪ್ರಭಾವ ಬೀರಬಹುದು. ಇದು ನಿಫ್ಟಿ 50 ಮತ್ತು ಲಾರ್ಜ್-ಕ್ಯಾಪ್ ಷೇರುಗಳು ಹೆಚ್ಚಿನ ಭದ್ರತೆಯನ್ನು ನೀಡುತ್ತವೆ. ಹೀಗಾಗಿ ಹೂಡಿಕೆದಾರರು ಲಾಭದಾಯಕ ಆದಾಯಕ್ಕಾಗಿ ಲಾರ್ಜ್-ಕ್ಯಾಪ್ ಅಥವಾ ಫ್ಲೆಕ್ಸಿ-ಕ್ಯಾಪ್ ಫಂಡ್ಸ್ ಆಯ್ಕೆ ಮಾಡುತ್ತಿದ್ದಾರೆ.
3. ಬಡ್ಡಿದರ ನಿರೀಕ್ಷೆ:
ಇನ್ನು ಈ ವರ್ಷ ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರವನ್ನು ಕಡಿಮೆ ಮಾಡಬಹುದು ಎನ್ನಲಾಗುತ್ತಿದೆ. ಒಂದುವೇಳೆ ಬಡ್ಡಿದರ ಕಡಿಮೆಯಾದರೆ, FDಗಳು ಮತ್ತು ಬಾಂಡ್ ಹೂಡಿಕೆಗಳು ಹೆಚ್ಚು ಲಾಭ ತರುತ್ತವೆ. ಇದು ಕೂಡ ಹೂಡಿಕೆದಾರರು ಎಫ್‌ಡಿ ದಾರಿ ಹಿಡಿಯಲು ಒಂದು ಮಹತ್ವದ ಕಾರಣವಾಗಿದೆ.
ಎಸ್‌ಐಪಿ ಯೋಜನೆಯನ್ನು ಬಿಟ್ಟರೂ ನಷ್ಟ:
ಎಫ್‌ಡಿಯಲ್ಲಿ ಉತ್ತಮ ಬಡ್ಡಿ, ಸ್ಥಿರ ಆದಾಯ ಸಿಗುತ್ತದೆ ಎಂಬ ಕಾರಣಕ್ಕೆ ಎಸ್‌ಪಿಯನ್ನು ಬಿಟ್ಟರೂ ನಷ್ಟವಿದೆ. ಅಂದರೆ ಎಸ್‌ಐಪಿಯಲ್ಲಿ ದೀರ್ಘಕಾಲದ ಹೂಡಿಕೆ ಉತ್ತಮ ಲಾಭ ಇರುತ್ತದೆ. SIP ಹೂಡಿಕೆದಾರರಿಗೆ 10-15 ವರ್ಷಗಳಲ್ಲಿ ಉತ್ತಮ ಆದಾಯ ಹಿಂತಿರುಗುತ್ತದೆ. ಮಾರುಕಟ್ಟೆಯ ಏರುಪೇರಿಯಿಂದ SIP ಗಳು ದೀರ್ಘಕಾಲದಲ್ಲಿ ಪ್ರಭಾವಿತಗೊಳ್ಳುವುದಿಲ್ಲ. ಮಾರುಕಟ್ಟೆ ಕುಸಿತವಾದಷ್ಟು ಈ ಯೋಜನೆಯಲ್ಲಿ ಲಾಭ. ಅಂದರೆ ಮಾರುಕಟ್ಟೆ ಕುಸಿತದ ಸಮಯದಲ್ಲಿ SIP ನಿಂದ ಹೆಚ್ಚು ಘಟಕಗಳನ್ನು ಖರೀದಿಸಲು ಸಾಧ್ಯವಾಗುತ್ತದೆ. ಮೌಲ್ಯ ಹೆಚ್ಚಾದಾಗ, ಭವಿಷ್ಯದಲ್ಲಿ ಹೆಚ್ಚಿನ ಲಾಭ ಪಡೆಯಬಹುದು. ಇನ್ನು SIP ಹೂಡಿಕೆಗಳನ್ನು ನಿಯಮಿತವಾಗಿ ಮಾಡಿದರೆ, ಮಾರುಕಟ್ಟೆ ಏರುಪೇರಿಯ ಪರಿಣಾಮ ಕಡಿಮೆ ಮಾಡಬಹುದು.
ಅಂದರೆ ಮಾರುಕಟ್ಟೆ ಬೆಲೆ ಕುಸಿದಾಗ ಹೆಚ್ಚು ಘಟಕಗಳು ಸಿಗುತ್ತವೆ. ಹೊಸ ಹೂಡಿಕೆದಾರರಿಗೆ ಹೆಚ್ಚು ಲಾಭ ಪಡೆಯುವ ಅವಕಾಶ ಸಿಗುತ್ತದೆ. ಹೀಗಾಗಿ ದೀರ್ಘಕಾಲದ ಆದಾಯ ಬಯಸುವವರಿಗೆ SIP ಉತ್ತಮ. FD ಈಗ ಭದ್ರ ಮತ್ತು ಕಡಿಮೆ ಅಪಾಯವಿರುವ ಒಂದು ಆಯ್ಕೆಯಾಗಿದೆ. ಹಾಗೆಯೇ ಮಾರುಕಟ್ಟೆ ಕುಸಿತದಲ್ಲಿ SIP ಹೆಚ್ಚು ಲಾಭದಾಯಕವಾಗಿರುತ್ತದೆ. ಹೀಗಾಗಿ ತಜ್ಞರು ಕೂಡ ಏನು ಹೇಳುತ್ತಾರೆಂದರೆ, ಕಡಿಮೆ ಅಪಾಯ ಬೇಕೆಂದಾದರೆ FD ಆಯ್ಕೆ ಮಾಡಬಹುದು. ಹೆಚ್ಚು ಲಾಭ ಬೇಕೆಂದಾದರೆ SIPಯನ್ನು ಮುಂದುವರಿಸಿ ಎನ್ನುತ್ತಾರೆ.


Click it and Unblock the Notifications