ನಿಮ್ಮ ಮಕ್ಕಳ ಸುಂದರವಾದ ಭವಿಷ್ಯಕ್ಕಾಗಿ ಹಣ ಕೂಡಿಡಲು ಸರಿಯಾದ ಯೋಜನೆ ಆಯ್ಕೆಯನ್ನು ಹುಡುಕತ್ತಿದ್ದೀರಾ..? ಹಾಗಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ..
ಹೌದು, ಮಕ್ಕಳು ಬೆಳೆಯುತ್ತಿದ್ದಂತೆ ಖರ್ಚುಗಳು ಸಹ ಹೆಚ್ಚಾಗುತ್ತದೆ. ಅವರ ವಿದ್ಯಾಭ್ಯಾಸದ ಜೊತೆಗೆ ಮುಂದಿನ ಉಜ್ವಲ ಜೀವನವನ್ನು ರೂಪಿಸುವುದು ತಂದೆ-ತಾಯಿಯರ ಕರ್ತವ್ಯ.ಇದಕ್ಕಾಗಿನ ಹಣವನ್ನು ಉಳಿತಾಯ ಮಾಡುವುದು ತುಂಬಾನೇ ಮುಖ್ಯ. ನೀವು ಷೇರು ಮಾರುಕಟ್ಟೆ,ಮ್ಯೂಚುಯಲ್ ಫಂಡ್, ಉಳಿತಾಯ ಯೋಜನೆಗಳು, ಬ್ಯಾಂಕ್ ಯೋಜನೆಗಳು, ಸರ್ಕಾರಿ ಯೋಜನೆಗಳು ಯಾವುದರಲ್ಲಿ ಹೂಡಿಕೆ ಮಾಡಿದ್ದರೆ ನಿಮ್ಮ ಮಕ್ಕಳ ವಿದ್ಯಾಭ್ಯಾಸ ಮತ್ತು ಮದುವೆಯಂತಹ ಖರ್ಚು ಹೆಚ್ಚು ಸಹಾಯವಾಗುತ್ತದೆ. ಹಾಗಿದ್ದರೆ ಮಕ್ಕಳ ಹೆಸರಿಗೆ ಎಲ್ಲಿ ಹೂಡಿಕೆ ಮಾಡಿದ್ದರೆ ಅವರ ಜೀವನಕ್ಕೆ ಆರ್ಥಿಕ ಭದ್ರತೆ ಸಿಗುತ್ತದೆ ಎಂಬ ವಿವರವನ್ನು ತಿಳಿಯಲು ಮುಂದೆ ಓದಿ..ನೀವು ಕಷ್ಟಪಟ್ಟಿರುವ ಹಣವನ್ನುಸುರಕ್ಷಿತವಾಗಿ ನಿಮ್ಮ ಮಕ್ಕಳ ಹೆಸರಿನಲ್ಲಿಹೂಡಿಕೆ ಮಾಡಬಹುದು.

ಮ್ಯೂಚುವಲ್ ಫಂಡ್ ನ ವ್ಯವಸ್ಥಿತ ಹೂಡಿಕೆ ಯೋಜನೆ(SIP) ಹಾಗೂ ಸರ್ಕಾರಿ ಯೋಜನೆಯಾದಸುಕನ್ಯಾ ಸಮೃದ್ಧಿ ಯೋಜನೆ (SSY) ಉತ್ತಮ ಆಯ್ಕೆಗಳಾಗಿವೆ. ಈ ಎರಡೂ ಹೂಡಿಕೆಗಳು, ದೀರ್ಘಕಾಲಕಾಲವರಿಗೂ ಉತ್ತಮ ಆದಾಯವನ್ನು ನೀಡಬಹುದು. ಇದರಲ್ಲಿ ನೀವು ಅತಿ ಸಣ್ಣ ಹಣದಿಂದಲ್ಲೂ ಸಹ ಹೂಡಿಕೆಯನ್ನು ಆರಂಭಿಸಬಹುದು. ನೀವು ತಿಂಗಳಿಗೆ 5,000 ರೂಪಾಯಿಗಳಂತೆ 10 ವರ್ಷಗಳವರೆಗೆ ಹೂಡಿಕೆಯನ್ನು ಮಾಡಲು ಬಯಸಿದ್ದರೆ ಈ ಎರಡು ಯೋಜನೆಯಲ್ಲಿ ಯಾವುದು ಉತ್ತಮ?
ವ್ಯವಸ್ಥಿತ ಹೂಡಿಕೆ ಯೋಜನೆ (SIP)
ವ್ಯವಸ್ಥಿತ ಹೂಡಿಕೆ ಯೋಜನೆ (SIP) ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಶಿಸ್ತುಬದ್ಧ ಹೂಡಿಕೆಯ ವಿಧಾನವಾಗಿದೆ. SIP ಮೂಲಕ, ಹೂಡಿಕೆದಾರರು ತಮ್ಮ ಆಯ್ಕೆಯ ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಹೂಡಿಕೆ ಮಾಡಲು ನಿಯಮಿತ ಮಧ್ಯಂತರಗಳಲ್ಲಿ (ತಿಂಗಳು ಅಥವಾ ಮೂರುತಿಂಗಳಂತೆ) ನಿಗದಿತ ಮೊತ್ತದ ಹಣವನ್ನು ಕೊಡುಗೆ ನೀಡುತ್ತಾರೆ. ಈ ವಿಧಾನವು ಕಾಲಾನಂತರದಲ್ಲಿ ಹೂಡಿಕೆಯ ವೆಚ್ಚವನ್ನು ಸರಾಸರಿ ಮಾಡಲು ಸಹಾಯ ಮಾಡುತ್ತದೆ, ಮಾರುಕಟ್ಟೆಯ ಚಂಚಲತೆಯ ಪರಿಣಾಮವನ್ನು ಕಡಿಮೆ ಮಾಡುತ್ತದೆ ಮತ್ತು ತಪ್ಪಾದ ಸಮಯದಲ್ಲಿ ಒಂದು ದೊಡ್ಡ ಮೊತ್ತವನ್ನು ಹೂಡಿಕೆ ಮಾಡುವ ಅಪಾಯವನ್ನು ತಗ್ಗಿಸುತ್ತದೆ.ದೀರ್ಘಾವಧಿಯವರೆಗೂ ಹೆಚ್ಚು ಆದಾಯ ಗಳಿಸುವ ಅವಕಾಶ ಇರುತ್ತದೆ ಜೊತೆಗೆ ಅಪಾಯ ಕೂಡ ಇರುತ್ತದೆ. ನೀವು SIP ಮೂಲಕ ಷೇರುಗಳು, ಬಾಂಡ್‌ಗಳು, ಚಿನ್ನ ಮತ್ತು ಇತರ ಆಸ್ತಿಗಳಲ್ಲಿ ಹಣ ಹೂಡಿಕೆ ಮಾಡಬಹುದು. SIP ನಲ್ಲಿ ಹೂಡಿಕೆ ಮಾಡಲು ಯಾವುದೇ ಮಿತಿಗಳಿಲ್ಲ. ಕೇವಲ 100 ರೂಪಾಯಿಗಳಿಂದಲೂ ಹೂಡಿಕೆಯನ್ನು ಮಾಡಬಹುದು. ಯಾವಾಗ ಬೇಕಾದರೂ ನೀವು ಇಲ್ಲಿ ಹಣವನ್ನು ಪಡೆದುಕೊಳ್ಳಬಹುದು.
ಸುಕನ್ಯಾ ಸಮೃದ್ಧಿ ಯೋಜನೆ
ಸುಕನ್ಯಾ ಸಮೃದ್ಧಿ ಯೋಜನೆ (SSY) ಭಾರತದಲ್ಲಿ ಹೆಣ್ಣು ಮಗುವಿನ ಆರ್ಥಿಕ ಭವಿಷ್ಯವನ್ನು ಭದ್ರಪಡಿಸುವ ಗುರಿಯನ್ನು ಹೊಂದಿರುವ ಸರ್ಕಾರಿ ಬೆಂಬಲಿತ ಉಳಿತಾಯ ಯೋಜನೆಯಾಗಿದೆ. ಬೇಟಿ ಬಚಾವೋ ಬೇಟಿ ಪಢಾವೋ ಉಪಕ್ರಮದ ಭಾಗವಾಗಿ ಈ ಯೋಜನೆಯನ್ನ ಪ್ರಾರಂಭಿಸಲಾಗಿದೆ. ತಮ್ಮ ಮಗಳ ಶಿಕ್ಷಣ ಮತ್ತು ಮದುವೆಗಾಗಿ ಹಣವನ್ನ ಉಳಿಸಲು ಪೋಷಕರನ್ನು ಪ್ರೋತ್ಸಾಹಿಸುತ್ತದೆ. ತೆರಿಗೆ ವಿನಾಯಿತಿ ಇರುವ ಆದಾಯಯವನ್ನು ನಿಮ್ಮಗೆ ನೀಡುತ್ತದೆ. ಆದ್ರೆ SSY ಖಾತೆ ತೆರೆದ ದಿನಾಂಕದಿಂದ 21 ವರ್ಷಗಳವರೆಗೂ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.18 ವರ್ಷ ಆದ್ಮೇಲೆ ಮಗಳ ಮದುವೆಗೋಸ್ಕರ ಹಣವನ್ನು ತೆಗೆದುಕೊಳ್ಳಬಹುದು. ಜೊತೆಗೆ ಸ್ವಲ್ಪ ಹಣವನ್ನು ಪಡೆದುಕೊಳ್ಳಬಹುದು.
10 ವರ್ಷದಲ್ಲಿ ತಿಂಗಳಿಗೆ 5,000 ರೂ.ಗಳ ಹೂಡಿಕೆಗೆ SIP, ಸುಕನ್ಯಾ ಸಮೃದ್ಧಿ ಯೋಜನೆಗಳ ಲೆಕ್ಕಾಚಾರ ಮಾಡುವುದು ಹೇಗೆ?
SIP ಹೂಡಿಕೆ
ನೀವು SIPಯಲ್ಲಿ ತಿಂಗಳಿಗೆ 5,000 ರೂ ಹಣವನ್ನು ಹೂಡಿಕೆ ಮಾಡಿದ್ದರೆ 10 ವರ್ಷಗಳಿಗೆ ಹೂಡಿಕೆಯ ಹಣ 6 ಲಕ್ಷ ರೂ. ಆಗುತ್ತದೆ. ಆದಾಯ ಬಡ್ಡಿ ವರ್ಷಕ್ಕೆ ಶೇ.12 ಮೆಚ್ಯೂರಿಟಿ ಮೊತ್ತ: 11.61 ಲಕ್ಷ ರೂ. ಆಗುತ್ತದೆ.
ಸುಕನ್ಯಾ ಸಮೃದ್ಧಿ (SSY)
ಸುಕನ್ಯಾ ಸಮೃದ್ಧಿ ಈ ಯೋಜನೆಯಲ್ಲಿ 15 ವರ್ಷಗಳವರೆಗೆ ತಿಂಗಳಿಗೆ 5,000 ರೂಪಾಯಿಗಳಂತೆ ಹೂಡಿಕೆ ಮಾಡಿದರೆ ನಿಮ್ಮ ಒಟ್ಟು ಹೂಡಿಕೆ 9 ಲಕ್ಷ ಆಗುತ್ತದೆ. ನಿಮ್ಮ ವರ್ಷಕ್ಕೆ ಶೇ.8.2 ರಷ್ಟು ಬಡ್ಡಿ ಸಿಗುತ್ತೆ. ಸುಮಾರು 18.73 ಲಕ್ಷ ರೂ ಆದಾಯ ನಿಮ್ಮ ಕೈ ಸೇರುತ್ತದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications