ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ ಆರು ಕಂಪನಿಗಳು 92,147.28 ಕೋಟಿ ರು ಮಾರುಕಟ್ಟೆ ಮೌಲ್ಯ ಹೆಚ್ಚಿಸಿವೆ. ಕಳೆದ ವಾರದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಹೆಚ್ಚು ಕಳೆದುಕೊಂಡಿವೆ.
ಹೆಚ್ಚು ಮೌಲ್ಯ ಕಳೆದಕೊಂಡ ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್, ಐಸಿಐಸಿಐ ಬ್ಯಾಂಕ್ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ.
ಹೆಚ್ಚು ಗಳಿಸಿದ ಕಂಪನಿಗಳು: ಎಚ್‌ಡಿಎಫ್‌ಸಿ ಬ್ಯಾಂಕ್, ಎಚ್‌ಡಿಎಫ್‌ಸಿ, ಕೋಟಕ್ ಮಹೀಂದ್ರ ಬ್ಯಾಂಕ್.

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ 43,574.83 ಕೋಟಿ ರು ಕಳೆದುಕೊಂಡು 11,86,563.20 ಕೋಟಿ ರು ಆಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಮೌಲ್ಯ 35,500.88 ಕೋಟಿ ರು ಕಳೆದುಕೊಂಡು 13,14,293.35 ಕೋಟಿ ರು ಆಗಿದೆ. ಹಿಂದೂಸ್ತಾನ್ ಯೂನಿಲಿವರ್ ಮೌಲ್ಯ 9,139.9 ಕೋಟಿ ರು ತಗ್ಗಿ 5,75,555.28 ರು ಆಗಿದೆ. ಇನ್ಫೋಸಿಸ್ ಮೌಲ್ಯ 1,981.5 ಕೋಟಿ ರು ನಷ್ಟವಾಗಿ 6,65,930.24 ರು ಆಗಿದೆ. ಐಸಿಐಸಿಸಿ ಬ್ಯಾಂಕ್ ಮೌಲ್ಯ 1,102.33 ಕೋಟಿ ರು ಕುಸಿತವಾಗಿ 4,42,302.42 ಕೋಟಿ ರು ಆಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 847.84 ಕೋಟಿ ರು ಇಳಿಕೆಯಾಗಿ 3,78,046.54 ಕೋಟಿ ರು ಆಗಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್ ಮೌಲ್ಯ 11,689.01 ಕೋಟಿ ರು ಏರಿಕೆ ಕಂಡು 8,30,002.67 ಕೋಟಿ ರು ಆಗಿದೆ.
ಬಜಾಜ್ ಫೈನಾನ್ಸ್ 8,332.62 ಕೋಟಿ ರು ಮೇಲಕ್ಕೇರಿ 4,50,850.54ಕೋಟಿ ರು ಆಗಿದೆ.
ಕೋಟಕ್ ಮಹೀಂದ್ರಾ ಬ್ಯಾಂಕ್ ಮೌಲ್ಯ 763.21 ಕೋಟಿ ರು ಏರಿಕೆ ಕಂಡು 3,41,000.47ಕೋಟಿ ರು ಆಗಿದೆ.
ಒಟ್ಟಾರೆ, ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್ ಲಿ, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬಜಾಜ್ ಫೈನಾನ್ಸ್ ಹಾಗೂ ಕೋಟಕ್ ಮಹೀಂದ್ರಾ ಬ್ಯಾಂಕ್.


Click it and Unblock the Notifications