ಷೇರು ಮಾರುಕಟ್ಟೆಯು ಕಳೆದ ಒಂದೆರಡು ವಾರಗಳಲ್ಲಿ ಏರುಗತಿಯಲ್ಲಿ ಸಾಗುತ್ತಿದೆ. ಸೆನ್ಸೆಕ್ಸ್ ಹಾಗೂ ನಿಫ್ಟಿ ದಾಖಲೆಯ ಹಂತಕ್ಕೆ ತಲುಪುತ್ತಿದೆ. ಈ ನಡುವೆ ಷೇರುಪೇಟೆಯಲ್ಲಿ ಸತತ ನಾಲ್ಕನೇ ಸೆಷನ್‌ನಲ್ಲಿ ಏರಿಕೆಯನ್ನು ಕಂಡಿರುವ ಜೆನಸ್ ಪವರ್ ಇನ್‌ಫ್ರಾಸ್ಕ್ರಕ್ಚರ್ ಬುಧವಾರ ಶೇಕಡ 20ರಷ್ಟು ಜಿಗಿತ ಕಂಡಿದೆ. ಈ ಮೂಲಕ ಈ ಸ್ಮಾಲ್ ಕ್ಯಾಪ್ ಸಂಸ್ಥೆಯು ನಾಲ್ಕು ದಿನದಲ್ಲೇ ಶೇಕಡ 46ರಷ್ಟು ಏರಿಕೆ ಹಾಗೂ ಒಂದು ತಿಂಗಳ ಅವಧಿಯಲ್ಲೇ ಶೇಕಡ 66ರಷ್ಟು ರಿಟರ್ನ್ ಅನ್ನು ಕಂಡಿದೆ.
ಬುಧವಾರ ಮಧ್ಯಾಹ್ನ ಸುಮಾರು 12:52 ಗಂಟೆಗೆ ಈ ಜೈಪುರ ಮೂಲದ ಜೆನಸ್ ಪವರ್ ಇನ್‌ಫ್ರಾಸ್ಕ್ರಕ್ಚರ್ ಷೇರುಗಳು ಬಿಎಸ್‌ಇಯಲ್ಲಿ ಶೇಕಡ 19.04ರಷ್ಟು ಅಥವಾ 26.80 ರೂಪಾಯಿ ಏರಿಕೆ ಕಂಡು 167.90 ರೂಪಾಯಿಗೆ ತಲುಪಿದೆ. ಬುಧವಾರ 9:46 ಗಂಟೆಗೆ ಜೆನಸ್ ಪವರ್ ಇನ್‌ಫ್ರಾ ಸ್ಟಾಕ್ ಶೇಕಡ 20ರಷ್ಟು ಏರಿಕೆಯಾಗಿದೆ. 10:20ಕ್ಕೆ ಕೊಂಚ ಇಳಿಕೆ ಕಂಡಿದೆ. 1:23ರ ಸುಮಾರಿಗೆ ಶೇಕಡ 19ರಷ್ಟು ಹೆಚ್ಚಳ ಕಂಡಿದೆ. ಇನ್ನು ಜುಲೈ 6ರಂದು ಈ ಸಮಯಕ್ಕೆ ಶೇಕಡ 1.09ರಷ್ಟು ಜಿಗಿದು, 170.90 ರೂಪಾಯಿಗೆ ತಲುಪಿದೆ.

ಬುಧವಾರ ವಹಿವಾಟಿನ ನಡುವಿನಲ್ಲಿ ಬಿಎಸ್‌ಇಯಲ್ಲಿ ಜೆನಸ್ ಪವರ್ ಇನ್‌ಫ್ರಾಸ್ಕ್ರಕ್ಚರ್ ಷೇರು 168.90 ರೂಪಾಯಿಯ ಗರಿಷ್ಠ ಮಟ್ಟಕ್ಕೆ ತಲುಪಿದೆ. ಇಂದು 170.90 ರೂಪಾಯಿಗೆ ಹೊಸ ಗರಿಷ್ಠ ಮಟ್ಟಕ್ಕೆ ತಲುಪಿದೆ. ಬುಧವಾರ ಆರಂಭಿಕ ವಹಿವಾಟಿನಲ್ಲಿ ಜೆನಸ್ ಪವರ್ ಇನ್‌ಫ್ರಾ ಷೇರು 154 ರೂಪಾಯಿಗೆ ವಹಿವಾಟಿಗೆ ಇಳಿದಿದೆ. ಇನ್ನು ಸಂಸ್ಥೆಯ 12,49,477 ಷೇರುಗಳು ಟ್ರೇಡಿಂಗ್ ನಡೆಸಿದೆ. ಒಂದು ತಿಂಗಳ ಹಿಂದೆ ಜೂನ್ 5, 2023ರಂದು ಜೆನಸ್ ಪವರ್ ಇನ್‌ಫ್ರಾ ಷೇರು ಮೌಲ್ಯ ಬಿಎಸ್‌ಇಯಲ್ಲಿ 98.26 ರೂಪಾಯಿ ಆಗಿತ್ತು.
ಜೆನಸ್ ಪವರ್ ಇನ್‌ಫ್ರಾಸ್ಕ್ರಕ್ಚರ್ ಷೇರು ಜಿಗಿತ
ಕಳೆದ ಎರಡು ಟ್ರೇಡಿಂಗ್ ಸೆಷನ್‌ನಲ್ಲಿ ಕಂಪನಿಯ ಷೇರು ಸುಮಾರು ಶೇಕಡ 30ರಷ್ಟು ಏರಿಕೆ ಕಂಡಿದೆ. ಸಿಂಗಾಪುರದ ಜಿಐಸಿಯ ಅಂಗಸಂಸ್ಥೆ ಜೆಮ್ ವೀವ್ ಇನ್‌ವೆಸ್ಟ್‌ಮೆಂಟ್‌ನೊಂದಿಗೆ ನಿರ್ಣಾಯಕವಾದ ಒಪ್ಪಂದಕ್ಕೆ ಜೆನಸ್ ಪವರ್ ಇನ್‌ಫ್ರಾಸ್ಕ್ರಕ್ಚರ್ ಸಹಿಯನ್ನು ಹಾಕಿದ ಬಳಿಕ ಸಂಸ್ಥೆಯ ಷೇರುಗಳು ಭಾರೀ ಪ್ರಮಾಣದಲ್ಲಿ ಜಿಗಿತವನ್ನು ಕಂಡಿದೆ.
ಸುಧಾರಿತ ಮೀಟರಿಂಗ್ ಮೂಲಸೌಕರ್ಯ ಸೇವಾ ಪೂರೈಕೆದಾರರಿಗಾಗಿ ಪ್ಲಾಟ್‌ಫಾರ್ಮ್ ಅನ್ನು ಸ್ಥಾಪಿಸುವುದು ಈ ಒಪ್ಪಂದವಾಗಿದೆ. ಬಿಎಸ್‌ಇ ಫೈಲಿಂಗ್ ಪ್ರಕಾರ ಈ ಪ್ಲಾಟ್‌ಫಾರ್ಮ್‌ನಲ್ಲಿ ಜಿಐಟಿ ಶೇಕಡ 74ರಷ್ಟು ಷೇರು ಹೊಂದಲಿದೆ, ಇನ್ನೊಂದೆಡೆ ಜೆನಸ್ ಪವರ್ ಇನ್‌ಫ್ರಾಸ್ಕ್ರಕ್ಚರ್ ಶೇಕಡ 26ರಷ್ಟು ಷೇರನ್ನು ಹೊಂದರಲಿದೆ. ಕಂಪನಿಯು 2 ಬಿಲಿಯನ್ ಡಾಲರ್ ವೆಚ್ಚದೊಂದಿಗೆ ಆರಂಭಿಕ ಹೂಡಿಕೆಗೆ ಬದ್ಧವಾಗಿದೆ. ಸ್ಮಾರ್ಟ್ ಮೀಟರ್‌ಗಳು ಮತ್ತು ಸಂಬಂಧಿತ ಸೇವೆಗಳಿಗಾಗಿ ಜೆನಸ್ ಜನಪ್ರಿಯವಾಗಿದೆ.
ಇದು ಮಾತ್ರವಲ್ಲದೆ ಜೆನಸ್ ಪವರ್‌ಗೆ ಪ್ರಶಸ್ತಿ ಪತ್ರ (LOA) ಲಭ್ಯವಾಗಿದೆ. 27.69 ಲಕ್ಷ ಸ್ಮಾರ್ಟ್ ಪ್ರಿಪೇಯ್ಡ್ ಮೀಟರ್‌ಗಳು, ಫೀಡರ್‌ನ ಪೂರೈಕೆ, ಸ್ಥಾಪನೆ ಮತ್ತು ಕಾರ್ಯಾರಂಭದೊಂದಿಗೆ ಎಎಂಐ ಸಿಸ್ಟಮ್‌ನ ವಿನ್ಯಾಸ ಸೇರಿದಂತೆ ಸುಧಾರಿತ ಮೀಟರಿಂಗ್ ಇನ್ಫ್ರಾಸ್ಟ್ರಕ್ಚರ್ ಸರ್ವಿಸ್ ಪ್ರೊವೈಡರ್ (ಎಎಂಐಎಸ್‌ಪಿ) ನೇಮಕಾತಿಗಾಗಿ ಜೆನಸ್ ಪವರ್‌ಗೆ 2,207.53 ಕೋಟಿ ರೂಪಾಯಿಯ ಪ್ರಶಸ್ತಿ ಲಭ್ಯವಾಗಿದೆ.
ಜೆನಸ್ ಪವರ್ ಮೂಲ ಮಾಹಿತಿ
ಜೆನಸ್ ಪವರ್ ಇನ್‌ಫ್ರಾಸ್ಕ್ರಕ್ಚರ್‌ನ ಮಾರುಕಟ್ಟೆ ಮೌಲ್ಯವು ಪ್ರಸ್ತುತ 3,630 ಕೋಟಿ ರೂಪಯಿ ಆಗಿದೆ. ಮಾರ್ಚ್ 2023ರ ತ್ರೈಮಾಸಿಕದಲ್ಲಿ ಜೆನಸ್ ಪವರ್ ಇನ್‌ಫ್ರಾಸ್ಕ್ರಕ್ಚರ್‌ಗೆ ಸುಮಾರು 11 ಕೋಟಿ ರೂಪಾಯಿ ನಷ್ಟ ಉಂಟಾಗಿದೆ. ಆದರೆ ಹಣಕಾಸು ವರ್ಷ 2022-23ರಲ್ಲಿ ಜೆನಸ್ ಪವರ್ ಸುಮಾರು 29 ಕೋಟಿ ರೂಪಾಯಿ ಲಾಭವನ್ನು ಕಂಡಿದೆ.
ಇಲ್ಲಿ ಗಮನಿಸಿ
ಷೇರು ಮಾರುಕಟ್ಟೆ ಹೂಡಿಕೆ ಮಾಡುವುದು ರಿಸ್ಕ್ ಅನ್ನು ಒಳಗೊಂಡಿರುತ್ತದೆ. ಹೂಡಿಕೆ ಮಾಡುವುದಕ್ಕೂ ಮುನ್ನ ವೃತ್ತಿಪರರ ಸಲಹೆಯನ್ನು ನೀವು ಪಡೆಯುವುದು ಮುಖ್ಯವಾಗುತ್ತದೆ. ನೀವು ಈ ಲೇಖನವನ್ನು ಓದಿ ಇದರ ಆಧಾರದಲ್ಲಿ ಹೂಡಿಕೆಯನ್ನು ಮಾಡಿ ಅದರಿಂದ ಯಾವುದೇ ನಷ್ಟಕ್ಕೆ ಗ್ರೇನಿಯಂ ಇನ್ಫಾರ್‌ಮೇಷನ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಆಗಲಿ ಅಥವಾ ಲೇಖಕರು ಆಗಲಿ ಜವಾಬ್ದಾರಿಯಲ್ಲ.


Click it and Unblock the Notifications