ಕೇರಳದ ಮಸೀದಿಯಲ್ಲಿ ಪ್ರಾರ್ಥನೆಗೆ ಸ್ಮಾರ್ಟ್ ಕಾರ್ಡ್, ಸಾಮಾಜಿಕ ಅಂತರ

ಕೇರಳದ ಕೋಳಿಕ್ಕೋಡ್ ನಲ್ಲಿನ ಕುಟ್ಟಿಚಿರದಲ್ಲಿ ಇರುವ ಮಸೀದಿಯಲ್ಲಿ ಜನಜಂಗುಳಿಯನ್ನು ತಡೆಯುವ ಉದ್ದೇಶಕ್ಕೆ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಿದ್ದು, ಪ್ರಾರ್ಥನೆ ಸಲ್ಲಿಸುವವರು ಇದನ್ನು ಬಳಸಬಹುದು. ಇದೇ ವೇಳೆ ಕೊರೊನಾ ವ್ಯಾಪಿಸಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರವನ್ನು ಸಹ ಉತ್ತೇಜಿಸುವ ಉದ್ದೇಶ ಹೊಂದಲಾಗಿದೆ.

ಮಸೀದಿ ಸುತ್ತಮುತ್ತ ಇರುವವರಿಗೆ ಸಂಖ್ಯೆಗಳನ್ನು ಒಳಗೊಂಡ ಸ್ಮಾರ್ಟ್ ಕಾರ್ಡ್ ನೀಡಲಾಗಿದೆ. ಮಸೀದಿ ಪ್ರವೇಶಿಸುವವರು ಕೈಗೆ ಸ್ಯಾನಿಟೈಸರ್ ಹಾಕಿಕೊಳ್ಳಬೇಕು. ಜತೆಗೆ ತಮ್ಮ ಗುರುತನ್ನು ಕ್ಯಾಮೆರಾ ಮುಂದೆ ಹೇಳಬೇಕು. ಆಟೋಮೆಟಿಕ್ ಸಿಸ್ಟಮ್ ವೊಂದು ಅವರ ವಿಳಾಸ ಹಾಗೂ ಫೋನ್ ನಂಬರ್ ಸೇವ್ ಮಾಡುತ್ತದೆ.

ಅಲ್ಲಿಂದ ಮುಂದಕ್ಕೆ ಸ್ಮಾರ್ಟ್ ಕಾರ್ಡ್ ನಂಬರ್ ಹೇಳಿದರೆ ಸಾಕು, ಉಳಿದ ಮಾಹಿತಿ ತಾನಾಗಿಯೇ ತುಂಬಿಕೊಳ್ಳುತ್ತದೆ ಎಂದು ಮಸೀದಿಯ ಸಮಿತಿಯಲ್ಲಿನ ಸದಸ್ಯರು ಹೇಳಿದ್ದಾರೆ. ಕಾರ್ಡ್ ಸ್ವೈಪ್ ಮಾಡಿದರೆ ಮಸೀದಿಯ ಬಾಗಿಲು ತಾನಾಗಿಯೇ ತೆರೆದುಕೊಳ್ಳುತ್ತದೆ. ಬಾಗಿಲಿಗೆ ಸೆನ್ಸರ್ ಅಳವಡಿಸಲಾಗಿದೆ. ಇನ್ನು ಮಸೀದಿಯೊಳಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಪ್ರಾರ್ಥನೆಗೆ ಸ್ಥಳಗಳನ್ನು ಗುರುತು ಮಾಡಲಾಗಿದೆ.

ಕೇರಳದ ಮಸೀದಿಯಲ್ಲಿ ಪ್ರಾರ್ಥನೆಗೆ ಸ್ಮಾರ್ಟ್ ಕಾರ್ಡ್, ಸಾಮಾಜಿಕ ಅಂತರ

ಜೂನ್ 9ನೇ ತಾರೀಕಿನಿಂದ ಅನ್ವಯ ಆಗುವಂತೆ ಕೇರಳ ಸರ್ಕಾರವು ಧಾರ್ಮಿಕ ಸ್ಥಳಗಳು, ಮಾಲ್ ಗಳು ಹಾಗೂ ರೆಸ್ಟೋರೆಂಟ್ ಗಳಿಗೆ ಪ್ರವೇಶ ಅವಕಾಶ ಕಲ್ಪಿಸಿದೆ ಅದಕ್ಕಾಗಿ ಕೆಲ ನಿಯಮಗಳನ್ನು ರೂಪಿಸಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+