ಆಧುನಿಕೆ ಬೆಳೆಯುತ್ತಿದ್ದಂತೆ ತಂತ್ರಜ್ಞಾನವು ಬೆಳೆಯುತ್ತಲೇ ಇದೆ. ದಿನವೂ ಹೊಸ ಹೊಸ ತಂತ್ರಜ್ಞಾನದೊಂದಿಗೆ ಮೊಬೈಲ್‌ಗಳು ಗ್ರಾಹಕರ ಕೈ ಸೆರಲು ರೆಡಿಯಾಗಿವೆ. ಗ್ರಾಹರಕರನ್ನು ಸೆಳೆಯಲು ಮೊಬೈಲ್ ಕಂಪನಿಗಳು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತವೆ. ಹೇಗಾದರೂ ಮಾಡಿ ತಮ್ಮ ಮೊಬೈಲ್‌ಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಬೇಕು ಎಂಬ ಹಂಬಲದಿಂದ ಹೊಸ ಪ್ರಯೋಗಗಳು ನಡೆಯುತ್ತಲೆ ಇರುತ್ತವೆ.
ಫೆಬ್ರವರಿ 22 ರಂದು ಐಕ್ಯುಓ ನಿಯೋ ನೈನ್ ಪ್ರೋ (iQOO Neo 9 Pro)ಭಾರತದಲ್ಲಿ ಬಿಡುಗಡೆಯಾಗಲಿದೆ. iQoo ನ ಈ ಗೇಮಿಂಗ್ ಸ್ಮಾರ್ಟ್‌ಫೋನ್‌ನ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಈಗಾಗಲೇ ಕಂಪನಿ ತಿಳಿಸಿದೆ. ಈ ಗೇಮಿಂಗ್ ಸ್ಮಾರ್ಟ್‌ಫೋನ್‌ನ ಬೆಲೆ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಚೀನಾದಲ್ಲಿ ಬಿಡುಗಡೆಯಾಗಿರುವ ಈ ಫೋನ್ ಭಾರತದಲ್ಲಿ ವಿಭಿನ್ನ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರ್ಯಾಗನ್ (Qualcomm Snapdragon) 8 ಜನೆರಷನ್ 2 ಅನ್ನು ಇದರಲ್ಲಿದೆ. ಕಳೆದ ವರ್ಷ ಬಿಡುಗಡೆಯಾದ ಎಲ್ಲಾ ಪ್ರಮುಖ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಪ್ರೊಸೆಸರ್ ನೀಡಲಾಗಿದೆ.

ಐಕ್ಯುಓ ನಿಯೋ ನೈನ್ ಪ್ರೋ ಫೀಚರ್
ಐಕ್ಯುಓ ನಿಯೋ ನೈನ್ ಪ್ರೋ 6.78 ಇಂಚಿನ ಅಮೋಲ್ಡ್ (AMOLED) ಡಿಸ್ಪ್ಲೇಯನ್ನು ಪಡೆಯಬಹುದು. ಇದು 2800 x 1260 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಹೊಂದಿರಲಿದೆ.
ಭಾರತದಲ್ಲಿ, ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರ್ಯಾಗನ್ 8 ಜನೆರಷನ್ 2 ಪ್ರೊಸೆಸರ್‌ನೊಂದಿಗೆ ಬಿಡುಗಡೆ ಆಗುತ್ತಿದೆ. ಇತ್ತೀಚೆಗೆ ಈ ಪ್ರೊಸೆಸರ್‌ನೊಂದಿಗೆ OnePlus 12R ಅನ್ನು ಬಿಡುಗಡೆ ಮಾಡಲಾಗಿದೆ.

ಫೋನ್ 12GB RAM ಮತ್ತು 256GB ವರೆಗಿನ ಇಂಟರ್‌ನಲ್ ಸ್ಟೋರೇಜ್‌ನ್ನು ಹೊಂದಿರಲಿದೆ. ಇದನ್ನು ಮೈಕ್ರೋ SD ಕಾರ್ಡ್ ಮೂಲಕ 1TB ವರೆಗೆ ವಿಸ್ತರಿಸಬಹುದು.
ಈ ಸ್ಮಾರ್ಟ್‌ಫೋನ್‌ನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಇರಲಿದೆ. ಇದು OIS ಜೊತೆಗೆ 50ಮೆಗಾ ಫಿಕ್ಸಲ್ (MP) ಪ್ರೈಮರಿ ಕ್ಯಾಮೆರಾವನ್ನು ಹೊಂದಿರುತ್ತದೆ. 8MP ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಹೊಂದಿರುತ್ತದೆ. ಇದು ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 16MP ಕ್ಯಾಮೆರಾವನ್ನು ಹೊಂದಿರಲಿದೆ.
ಐಕ್ಯುಓ ನ ಈ ಫೋನ್ 5160 mAh ಬ್ಯಾಟರಿ ಮತ್ತು 120 W ಫಾಸ್ಟ್ ಚಾರ್ಜಿಂಗ್ ಹೊಂದಿದೆ ಎಂದು ತಿಳಿದು ಬಂದಿದೆ. ಇದು Android 14 ಅನ್ನು ಹೊಂದಿದೆ.
ಮುಂಬರುವ ಕೆಲವು ತಿಂಗಳುಗಳಲ್ಲಿ iQOO Z8 ಸರಣಿಯ ಫೋನ್‌ಗಳನ್ನು ಸಹ ಪರಿಚಯಿಸಬಹುದು.
ಹಣ ಎಷ್ಟು?
ಐಕ್ಯುಓ ನಿಯೋ ನೈನ್ ಪ್ರೋ ಫೀಚರ್ ನ ಬೆಲೆಯು ಸೋರಿಕೆಯಾದ ಮಾಹಿತಿಯ ಪ್ರಕಾರ 34,999 ಎಂದು ತಿಳಿದು ಬಂದಿದೆ. ಇದರ ಮೇಲೆ ರೂ 3,000 ವರೆಗಿನ ಕ್ಯಾಶ್‌ಬ್ಯಾಕ್ ಕೊಡುಗೆ ಲಭ್ಯವಿರುತ್ತದೆ.
12GB RAM + 256GB ಇಂಟರ್‌ನಲ್ ಸ್ಟೋರೇಜ್ ಹೊಂದಿರುವ ಫೋನ್ ರೂ 40,000 ರೂ. ಗೆ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್ ಎರಡು ಬಣ್ಣದ ಆಯ್ಕೆಗಳಲ್ಲಿ ಇದ್ದು, ಕಾಂಕರರ್ ಬ್ಲಾಕ್ ಮತ್ತು ಡ್ಯುಯಲ್ ಟೋನ್ ಫಿಯರಿ ರೆಡ್.


Click it and Unblock the Notifications