ಈ ವರ್ಷದ ಮೊದಲ ಸೂರ್ಯಗ್ರಹಣ (Solar Eclipse 2026) ಈ ಬಾರಿ ಫೆಬ್ರವರಿ 17, 2026ನೇ ಮಂಗಳವಾರ ಸಂಭವಿಸಲಿದೆ. ಇದು ಕಂಕಣ ಸೂರ್ಯಗ್ರಹಣ ಎಂದೂ ಕರೆಯುತ್ತಾರೆ. ವಿಶ್ವದ ಹಲವೆಡೆ ಈ ಸೂರ್ಯಗ್ರಣ ಗೋಚರಿಸಲಿದ್ದು, "ರಿಂಗ್ ಆಫ್ ಫೈರ್" (Ring Of Fire) ರೀತಿಯಲ್ಲಿ ಕಾಣಿಸಲಿದೆ ಎಂದು ಹೇಳಲಾಗಿದೆ. ಭಾರತೀಯ ಕಾಲಮಾನದ ಪ್ರಕಾರ, ಈ ಬಾರಿಯ ಸೂರ್ಯಗ್ರಹಣ ಮಧ್ಯಾಹ್ನ 3:26 ಕ್ಕೆ ಆರಂಭವಾಗಿ ಸಂಜೆ 7:57 ಕ್ಕೆ ಮುಕ್ತಾಯಗೊಳ್ಳುತ್ತದೆ. ಈ ಮೂಲಕ 4 ಗಂಟೆಗಿಂತಲೂ ಹೆಚ್ಚು ಕಾಲ ಸೂರ್ಯಗ್ರಹಣ ನಡೆಯಲಿದೆ ಎಂದು ಹೇಳಲಾಗಿದೆ.

ಏನಿದು ಮೊದಲ ಸೂರ್ಯಗ್ರಹಣ?
ಫೆಬ್ರವರಿ 17 ರಂದು ಗೋಚರಿಸುವ ಸೂರ್ಯಗ್ರಹಣದಲ್ಲಿ ಚಂದ್ರ ಸೂರ್ಯನನ್ನು ಸಂಪೂರ್ಣವಾಗಿ ಆವರಿಸಿಕೊಳ್ಳದೇ, ಸೂರ್ಯನ ಮಧ್ಯಭಾಗವನ್ನು ಮರೆಮಾಚಿ, ಸುತ್ತಲೂ ಬೆಳಕಿನ ಉಂಗುರಾಕಾರದಲ್ಲಿ ಗೋಚರಿಸುವಂತೆ ಮಾಡುತ್ತದೆ. ಇದು ಅತ್ಯಂತ ಅದ್ಭುತ, ವಿರಳ ಖಗೋಳ ದೃಶ್ಯವಾಗಿದೆ.
ಗ್ರಹಣದ ಮುಖ್ಯ ವಿವರ:
ದಿನಾಂಕ: ಫೆಬ್ರವರಿ 12, 2026 (ಮಂಗಳವಾರ)
ಪ್ರಕಾರ: ಕಂಕಣ ಸೂರ್ಯಗ್ರಹಣ
ಸೂರ್ಯನ ಮೇಲೆ ಚಂದ್ರನ ಪ್ರಭಾವ: ಅಂದರೆ ಸೂರ್ಯನನ್ನು ಸುಮಾರು 92-96% ಭಾಗವನ್ನು ಮುಚ್ಚುತ್ತದೆ.
ಎಲ್ಲಿ ಗೋಚರಿಸುತ್ತದೆ?
ಇನ್ನು ಈ ಬಾರಿ ಸೂರ್ಯಗ್ರಹಣ ಮುಖ್ಯವಾಗಿ ಅಂಟಾರ್ಕ್ಟಿಕಾ (Antarctica) ಖಂಡದಲ್ಲಿ ಮಾತ್ರ ಸಂಪೂರ್ಣವಾಗಿ ಗೋಚರಿಸಲಿದೆ ಎಂದು ವರದಿಯಾಗಿದೆ. ಇದು ಅಂಟಾರ್ಕ್ಟಿಕಾದ ಪಶ್ಚಿಮ ಭಾಗದಲ್ಲಿ ಹಾದುಹೋಗಲಿದ್ದು, ಆದ್ದರಿಂದ ದಕ್ಷಿಣ ಮಹಾಸಾಗರದ ಭಾಗಗಳಲ್ಲಿ ಮಾತ್ರ ಗೋಚರಿಸಲಿದೆ. ಅಲ್ಲದೇ ಇದು ಭಾರೀ ದೂರದ ಪ್ರದೇಶವಾಗಿರುವುದರಿಂದ, ಬಹುತೇಕ ಜನರು ಇದನ್ನು ನೇರವಾಗಿ ನೋಡಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.
ಭಾಗಶಃ ಈ ಗ್ರಹಣವು ದಕ್ಷಿಣ ಅಮೆರಿಕಾದ ದಕ್ಷಿಣ ತುದಿಯಲ್ಲಿ (ಅರ್ಜೆಂಟಿನಾ ಮತ್ತು ಚಿಲಿ), ದಕ್ಷಿಣ ಆಫ್ರಿಕಾ (ದಕ್ಷಿಣ ಆಫ್ರಿಕಾ, ಮೊಜಾಂಬಿಕ್, ಮಡಗಾಸ್ಕರ್) ಮತ್ತು ಅಟ್ಲಾಂಟಿಕ್, ಫೆಸಿಫಿಕ್ ಭಾಗಗಳಲ್ಲಿ ಮಾತ್ರ ಕಾಣಬಹುದು ಎನ್ನಲಾಗಿದೆ.
ಭಾರತದಲ್ಲಿ ಗೋಚರಿಸುತ್ತಾ ಸೂರ್ಯಗ್ರಹಣ?
ಇಲ್ಲ, ಭಾರತದಲ್ಲಿ ಈ ಬಾರಿ ಸೂರ್ಯ ಗ್ರಹಣ ಗೋಚರಿಸುವುದಿಲ್ಲ ಎಂದು ವರದಿಯಾಗಿದೆ. ಆದ್ದರಿಂದ ಈ ಅದ್ಭುತ ದೃಶ್ಯವನ್ನು ಭಾರತೀಯರಿಗೆ ನೇರವಾಗಿ ನೋಡಲು ಸಾಧ್ಯವಿಲ್ಲ. ಏಕೆಂದರೆ ಗೃಹಣ ದಕ್ಷಿಣ ಗೋಳಾರ್ಧದಲ್ಲಿ ಸಂಭವಿಸುತ್ತದೆ. ಆದರೆ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ NASA ಈ ಗ್ರಹಣದ ದೃಶ್ಯವನ್ನು ನೇರಪ್ರಸಾರ ಮಾಡುವ ಸಾಧ್ಯತೆ ಇದೆ.
ವೀಕ್ಷಕರಿಗೆ ಸಲಹೆ:
ಇನ್ನು ಚಂದ್ರ ಗ್ರಹಣವಾಗಲಿ, ಸೂರ್ಯಗ್ರಹಣವಾಗಲಿ, ನೇರವಾಗಿ ಕಣ್ಣಿನಿಂದ ನೋಡಬಾರದು. ಅದಕ್ಕಾಗಿ ವಿಶೇಷ ISO ಸರ್ಟಿಫೈಡ್ ಸೂರ್ಯಗ್ರಹಣ ನೋಡುವಂತಹ ಗ್ಲಾಸ್‌ಗಳು ಅಥವಾ ಫಿಲ್ಟರ್‌ಗಳನ್ನು ಬಳಸಿ ಮಾತ್ರ ವೀಕ್ಷಿಸಬೇಕು. ನೇರವಾಗಿ ನೋಡಿದರೆ ಕಣ್ಣಿನ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ.
ಇನ್ನು ಈ ಅದ್ಭುತ ದೃಶ್ಯವನ್ನು NASA, TimeandDate.com ಅಥವಾ ಇತರ ಖಗೋಳ ವಿಜ್ಞಾನ ವೆಬ್‌ಸೈಟ್‌ಗಳ ಲೈವ್ ಸ್ಟ್ರೀಮಿಂಗ್ ಮಾಡುವ ಸಾಧ್ಯತೆ ಇರುತ್ತದೆ. ಆ ರೀತಿಯೂ ನೋಡಬಹುದಾಗಿದೆ.


Click it and Unblock the Notifications