ಮತ್ತೊಂದು ಬರೆ! ಇಂದಿನಿಂದ ಸೋಮನಹಳ್ಳಿ ಟೋಲ್ ಪ್ಲಾಜಾ ಆರಂಭ ಹೌದು,ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 948ರಲ್ಲಿ ಸೋಮನಹಳ್ಳಿ ಟೋಲ್ ಪ್ಲಾಜಾ ಇಂದು (ಮೇ 9)ರಂದು ಆರಂಭವಾಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನೆ ಮಾಹಿತಿಯನ್ನು ತಿಳಿಸಿದೆ.
ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳಲ್ಲಿ ಎರಡು ಹೊಸ ಟೋಲ್‌ಗಳು ಇಂದಿನಿಂದ ಆರಂಭವಾಗುತ್ತೇವೆ. ಈಗಾಗಲೇ ಬೆಂಗಳೂರು ಮತ್ತು ಅದರ ಸುತ್ತಮುತ್ತಲಿನ ಪ್ರಮುಖ ರಸ್ತೆಗಳ ಮೇಲೆ ಹಲವು ಟೋಲ್ ಗೇಟ್‌ಗಳು ಇವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹಾಗೂ ರಾಜ್ಯ ಸರ್ಕಾರಗಳ ಸಂಯುಕ್ತ ಸಹಕಾರದಿಂದ ಈ ಟೋಲ್‌ಗಳನ್ನು ನಿರ್ವಹಿಸಲಾಗುತ್ತದೆ. ಟೋಲ್ ಶುಲ್ಕವನ್ನು ಸಂಗ್ರಹಿಸುವ ಉದ್ದೇಶ, ರಸ್ತೆ ನಿರ್ವಹಣೆ, ಅಗತ್ಯ ತುರ್ತು ಸೇವೆಗಳಳು ಹಾಗೂ ಮುಂಬರುವ ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಹಣ ಸಂಗ್ರಹಿಸುವದಕ್ಕಗಿ ಶುಲ್ಕವನ್ನು ವಸೂಲಿ ಮಾಡುತ್ತಾರೆ.

ಬೆಂಗಳೂರು-ಮೈಸೂರು ಹೆದ್ದಾರಿ (ರಾಷ್ಟ್ರೀಯ ಹೆದ್ದಾರಿ 275),ಬೆಂಗಳೂರು-ಪುಣೆ ಹೆದ್ದಾರಿ(ನ್ಯಾಷನಲ್ ಹೈವೇ 48, ಹಿಂದಿನ NH4,)ಬೆಂಗಳೂರು- ತುಮಕೂರು, ದೇವನಹಳ್ಳಿ (ಕೆಂಪೇಗೌಡ ವಿಮಾನ ನಿಲ್ದಾಣದ ಮಾರ್ಗ)ಹೊಸಕೋಟೆ ಮಾರ್ಗ, ಫಾಸ್ಟ್ಯಾಗ್ (FASTag) ಬಳಕೆಯು ಈಗಲೂ ಕಡ್ಡಾಯವಾಗಿದ್ದು, ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯೊಂದಿಗೆ ತೆರಿಗೆ ವಸೂಲಿ ನಡೆಯುತ್ತಿದೆ.
ಮಾಹಿತಿ ಪ್ರಕಾರ ಬಿಆರ್‌ಟಿ ಹುಲಿ ಮೀಸಲು ಗಡಿಯ ಸಮೀಪದಿಂದ ಬೆಂಗಳೂರು ವಿಭಾಗದ ಹೊಸ ಟೋಲ್ ಗೇಟ್ ಅನ್ನು ಬೆಂಗಳೂರು ದಕ್ಷಿಣ ತಾಲ್ಲೂಕಿನ ಸೋಮನಹಳ್ಳಿ ಗ್ರಾಮದ ಬಳಿಯಲ್ಲಿ ಸ್ಥಾಪಿಸಲಾಗುತ್ತದೆ. ಈ ರಾಷ್ಟ್ರೀಯ ಹೆದ್ದಾರಿ ಅಥವಾ ರಾಜ್ಯ ಹೆದ್ದಾರಿ ಮೇಲಿನ ನಿರ್ವಹಣಾ ವೆಚ್ಚ ಪೂರೈಸುವುದು.ವಾಹನಗಳ ಸಂಚಾರವನ್ನು ನಿಯಂತ್ರಿಸುವುದು ಹಾಗೂ ರಸ್ತೆ ಗುಣಮಟ್ಟವನ್ನು ಕಾಪಡುತ್ತದೆ. ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಹತ್ತಿರ ಇರುವ ಕಾರಣದಿಂದಾಗಿ ಪರಿಸರ ಸಂರಕ್ಷಣೆಯ ಚಿಂತನೆಗಳನ್ನೂ ಒಳಗೊಂಡಿರಬಹದು.
ಸೋಮನಹಳ್ಳಿ ಪ್ರದೇಶದ ಮಹತ್ವ:
- ಇದು ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುವ ಪ್ರಮುಖ ಮಾರ್ಗಗಳಲ್ಲಿ ಒಂದು.
- ಇತ್ತೀಚಿನ ವರ್ಷಗಳಲ್ಲಿ ವಾಹನ ಸಂಚಾರದ ಪ್ರಮಾಣವೂ ಗಣನೀಯವಾಗಿ ಹೆಚ್ಚಾಗಿದೆ.
- ಇಲ್ಲಿ ಆರಂಭವಾದರೆ, ಸ್ಥಳೀಯರ ಮೇಲೆ ಮತ್ತು ದಿನಬಳಕೆಯ ವಾಹನ ಸಂಚಾರದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಸರ್ಕಾರ ಸ್ಥಳೀಯರಿಗಾಗಿ ಮೀಸಲುಗಳನ್ನೋ ಅಥವಾ ರಿಯಾಯಿತಿಯ ಯೋಜನೆಗಳನ್ನೋ ಘೋಷಿಸಬಹುದಾದ ಸಾಧ್ಯತೆ ಇದೆ.
- ಕೇಂದ್ರ ಸರ್ಕಾರ ಹೇಳಿರುವ ಪ್ರಕಾರ ಸುಂಕ ವಸೂಲಾತಿ 20 ಕಿ.ಮೀ. ವ್ಯಾಪ್ತಿಯೊಳಗೆ ವಾಸಿಸುವ ಎಲ್ಲ ವಾಣಿಜೇತರ ವಾಹನಗಳಿಗೆ 350ಕ್ಕೆ ತಿಂಗಳ ಪಾಸ್ ನೀಡಲಾಗುವುದು ಎಂದು ತಿಳಿಸಿದೆ.
- ವಾಣಿಜೇತರ ವಾಹನಗಳು (Non-commercial vehicles): ಟೋಲ್ ಗೇಟ್‌ನ 20 ಕಿ.ಮೀ ವ್ಯಾಪ್ತಿಯೊಳಗೆ ವಾಸಿಸುವವರಿಗೆ 350ರ ತಿಂಗಳ ಪಾಸ್ ನೀಡಲಾಗುತ್ತದೆ.
- ಈ ಪಾಸ್ ಮೂಲಕ ಆವರು ತಿಂಗಳೊಳಗೆ ಅನೇಕ ಬಾರಿ ಸಂಚರಿಸಬಹುದು (ಸಾಮಾನ್ಯವಾಗಿ ನಿಯಮಿತ ಸಂಖ್ಯೆಯಲ್ಲಿ, ಉದಾಹರಣೆಗೆ 50 ಬಾರಿ).
- ಜಿಲ್ಲೆಯೊಳಗಿನ ನೋಂದಣಿ ಹೊಂದಿರುವ ವಾಹನಗಳು: ಇವುಗಳಿಗೆ ಕೆಲವೊಂದು ರಿಯಾಯಿತಿ ಶುಲ್ಕವಿದೆ.
- ಈ ಪಾಸ್ ಸೌಲಭ್ಯವು ನಿತ್ಯ ಈ ರಸ್ತೆಯನ್ನು ಬಳಸುವ ಸ್ಥಳೀಯರ ಮತ್ತು ಉದ್ಯೋಗಕ್ಕೆ ನಿತ್ಯ ಸಂಚರಿಸುವವರಿಗೆ ಅನುಕೂಲವಾಗಲಿದೆ.
ಸೋಮನಹಳ್ಳಿ ಟೋಲ್ ಶುಲ್ಕ ವಿವರಗಳು
ಸೋಮನಹಳ್ಳಿ ಟೋಲ್ ಗೇಟ್‌ನಲ್ಲಿ ಕಾರು, ಜೀಪು, ವ್ಯಾನ್ ಹಾಗೂ ಲಘು ವಾಹನಕ್ಕೆ ಒಂದು ಬಾರಿಯ ಏಕಮುಖ ಸಂಚಾರಕ್ಕೆ 85 ರೂ ಹಾಗೂ ಅದೇ ದಿನ ಮರು ವಾಪಸ್ ಆಗಲು 130 ನಿಗದಿಯನ್ನು ಮಾಡಲಾಗಿದೆ. ತಿಂಗಳ ಪಾಸ್‌ಗೆ 2855 ರೂ ನಿಗದಿಯನ್ನು ಮಾಡಲಾಗಿದೆ. ಇನ್ನೂ ಜಿಲ್ಲೆಯಲ್ಲಿ ಸಂಚರಿಸಲು ನೊಂದಣಿಗೊಂಡಿರುವ ವಾಣಿಜ್ಯ ವಾಹನಗಳಿಗೆ 45 ರೂ.ಗಳನ್ನು ನಿಗದಿ ಮಾಡಲಾಗಿದೆ.
ಮಿನಿ ಬಸ್,ಎಲ್‌ಸಿವಿ,.ಎಲ್‌ಜಿವಿ ವಾಹನಕ್ಕೆ ಒಂದು ಬಾರಿಗೆ 140 ರೂಪಾಯಿಗಳು ಹಾಗೂ ಅದೇ ದಿನ ವಾಪಸ್‌ಬರಲು 205 ರೂ.ಗಳನ್ನು ನಿಗದಿ ಮಾಡಲಾಗಿದೆ. ತಿಂಗಳ ಪಾಸ್‌ಗಳಿಗೆ ಈಬಾಹನದ ಮೇಲೆ 4610 ರೂ ನಿಗದಿಪಡಿಸಲಾಗಿದೆ. ಜಿಲ್ಲೆಯಲ್ಲಿ ಸಂಚರಿಸಲು ನೊಂದಣಿಗೊಂಡಿರುವ ವಾಣಿಜ್ಯ ವಾಹನಗಳಿಗೆ 70ರೂ ನಿಗದಿ ಮಾಡಲಾಗಿದೆ. ಬಸ್ ಹಾಗೂ ಟ್ರಕ್ ವಾಹನಕ್ಕೆ ಒಂದು ಬಾರಿಗೆ 290 ರೂ ಹಾಗೂ ಅದೇ ದಿನ ವಾಪಸ್
ಆಗಲು 435 ರೂ ನಿಗದಿ ಮಾಡಲಾಗಿದೆ. ಮಾಸಿಕ ಪಾಸ್‌ಗೆ 9660 ರೂ ನಿಗದಿಪಡಿಸಲಾಗಿದೆ. ಜಿಲ್ಲೆಯಲ್ಲಿ ಸಂಚರಿಸಲು ನೊಂದಣಿಗೊಂಡಿರುವ ವಾಣಿಜ್ಯ ವಾಹನಗಳಿಗೆ 145 ರೂಪಾಯಿಗಳನ್ನು ನಿಗದಿ ಮಾಡಲಾಗಿದೆ.


Click it and Unblock the Notifications