ಸೋನಿ ಗ್ರೂಪ್ ಕಾರ್ಪ್ ತನ್ನ ಭಾರತ ಘಟಕ ಮತ್ತು ಝೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್ ನಡುವಿನ ಬಹು ನಿರೀಕ್ಷಿತ ವಿಲೀನವನ್ನು ರದ್ದುಗೊಳಿಸಲು ಸಜ್ಜಾಗುತ್ತಿದೆ ಎಂದು ವರದಿಯಾಗಿದೆ. ಇದು ಸುಮಾರು 10 ಬಿಲಿಯನ್ ಡಾಲರ್‌ನ ಮೀಡಿಯಾ ಹೌಸ್ ರಚಿಸುವ ಒಪ್ಪಂದವಾಗಿದೆ.
ವಿಲೀನಗೊಂಡ ಘಟಕದ ನಾಯಕತ್ವದ ಬಗೆಗಿನ ವಿವಾದವು ಇದೆ. ಆದರೆ ಈ ವಿವಾದವು ಇನ್ನು ಕೂಡಾ ಬಗೆಹರಿದಿಲ್ಲ. ಈ ನಡುವೆ ಜಪಾನಿನ ಸಂಘಟಿತ ಸಂಸ್ಥೆಯು ಈ ಒಪ್ಪಂದವನ್ನು ಮುಕ್ತಾಯ ಮಾಡುವ ಯೋಚನೆಯನ್ನು ಮಾಡುತ್ತಿದೆ ಬ್ಲೂಮ್‌ಬರ್ಗ್ ವರದಿ ಬಹಿರಂಗಪಡಿಸಿದರು.

ಝೀನ ಸಿಇಒ, ಸಂಸ್ಥಾಪಕರ ಮಗನೂ ಆಗಿರುಯವ ಪುನಿತ್ ಗೋಯೆಂಕಾ ಈ ಒಪ್ಪಂದದ ಬೆನ್ನೆಲುಬಾಗಿದ್ದಾರೆ. 2021 ರ ಒಪ್ಪಂದದ ಪ್ರಕಾರ ಹೊಸ ಕಂಪನಿಯನ್ನು ಮುನ್ನಡೆಸಲು ಆರಂಭದಲ್ಲಿ ಯೋಜಿಸಲಾಗಿತ್ತು. ಈಗ ನಡೆಯುತ್ತಿರುವ ನಿಯಂತ್ರಕ ತನಿಖೆಯ ನಡುವೆ ಗೋಯೆಂಕಾ ಘಟಕವನ್ನು ಮುನ್ನಡೆಸಲು ಸೋನಿ ಬಯಸುವುದಿಲ್ಲ.
ಸೋನಿ ಒಪ್ಪಂದವನ್ನು ಕೊನೆ ಮಾಡಲು ಜನವರಿ 20 ರ ವಿಸ್ತೃತ ಗಡುವಿನ ಮೊದಲು ಮುಕ್ತಾಯದ ಸೂಚನೆಯನ್ನು ಸಲ್ಲಿಸಲು ಉದ್ದೇಶಿಸಿದೆ ಎಂದು ಬ್ಲೂಮ್‌ಬರ್ಗ್ ಮೂಲಗಳು ಸೂಚಿಸುತ್ತದೆ. ವಿಲೀನಕ್ಕೆ ಅಗತ್ಯವಾದ ಷರತ್ತುಗಳನ್ನು ಸಮರ್ಥನೆಯಾಗಿ ಉಲ್ಲೇಖಿಸಿಲಾಗಿದೆ. ಮುಂಬರುವ ಗಡುವಿನ ಹೊರತಾಗಿಯೂ, ಎರಡು ಸಂಸ್ಥೆಗಳ ನಡುವೆಯೂ ಚರ್ಚೆ ಇನ್ನೂ ಮುಗಿದಿಲ್ಲ.
ಪುನಿತ್ ಗೋಯೆಂಕಾ ಈ ಸುದ್ದಿಯನ್ನು ಸಂಪೂರ್ಣವಾಗಿ ಒಪ್ಪಿಕೊಂಡಿಲ್ಲ. ಆರಂಭದಲ್ಲಿ ಒಪ್ಪಿಕೊಂಡಂತೆ ವಿಲೀನ ಘಟಕವನ್ನು ಮುನ್ನಡೆಸುವ ಬಯಕೆಯಲ್ಲಿ ದೃಢವಾಗಿ ನಿಂತಿದ್ದಾರೆ ಎಂದು ವರದಿಯಾಗಿದೆ. ಕಳೆದ ಕೆಲವು ವಾರಗಳಲ್ಲಿ ನಡೆದ ವಿಸ್ತೃತ ಸಭೆಗಳ ಬಳಿಕವೂ ಒಮ್ಮತಕ್ಕೆ ಬರಲು ವಿಫಲವಾಗಿದೆ. ಸದ್ಯಕ್ಕೆ, ಸೋನಿ ಅಥವಾ ಝೀ ಅಧಿಕೃತವಾಗಿ ಈ ಸುದ್ದಿ ಬಗ್ಗೆ ಪ್ರತಿಕ್ರಿಯಿಸಿಲ್ಲ.
ಆದರೆ ಮಧ್ಯಸ್ಥಗಾರರು ಮತ್ತು ಉದ್ಯಮ ವೀಕ್ಷಕರು 10 ಬಿಲಿಯನ್ ಡಾಲರ್‌ನ ಮಾಧ್ಯಮ ವಿಲೀನದ ಅಂತಿಮ ತೀರ್ಪಿಗಾಗಿ ಕಾಯುತ್ತಿದ್ದಾರೆ. ಈ ಕೊನೆಯ ನಿಮಿಷದ ನಾಯಕತ್ವದ ಗೊಂದಲದಿಂದಾಗಿ ಒಪ್ಪಂದವು ಮುರಿದು ಬೀಳುವಂತಿದೆ. ಈ ನಡುವೆ ಬಿಲಿಯನೇರ್ ಮುಕೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಮಾಧ್ಯಮ ಮಹತ್ವಾಕಾಂಕ್ಷೆಗಳನ್ನು ಬಲಪಡಿಸಲು ವಾಲ್ಟ್ ಡಿಸ್ನಿ ಕಂಪನಿಯ ಭಾರತ ಘಟಕದೊಂದಿಗೆ ವಿಲೀನದ ಮಾತುಕತೆ ಮಾಡುತ್ತಿದೆ.


Click it and Unblock the Notifications