ಇನ್ನೇನು ಕೆಲವೇ ದಿನಗಳಲ್ಲಿ ಕ್ರೈಸ್ತರ ಕ್ರಿಸ್ಮಸ್ ಹಬ್ಬ ಮತ್ತು ನಂತರ ಹೊಸ ವರ್ಷ (New Year) ಬರಲಿದೆ. 2025 ಕಳೆದು 2026ಕ್ಕೆ ಕಾಲಿಡುವ ವಸಂತ ಕಾಲ ಬಂದಾಯ್ತು. ಹಬ್ಬ, ಹೊಸ ವರ್ಷದ ಸಂರ್ಭದಲ್ಲಿ ಬಹುತೇಕರು ತಮ್ಮ ತಮ್ಮ ಊರಿಗೆ ಹೋಗುವ, ಟೂರ್ ಪ್ಲಾನ್ ಮಾಡುತ್ತಿರುತ್ತಾರೆ. ಇದೀಗ ಅಂಥವರಿಗಾಗಿ ರೈಲ್ವೇ ಇಲಾಖೆ (Indian Railways) ಗುಡ್ ನ್ಯೂಸ್ ನೀಡಿದೆ. ಹೌದು, ಕರ್ನಾಟಕದ ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೇ ಮಹತ್ವದ ನಿರ್ಧಾರ ಕೈಗೊಂಡಿದೆ. ಬೆಂಗಳೂರಿನಿಂದ ಉತ್ತರ ಕರ್ನಾಟಕದ (Bengaluru-North Karnataka) ಕಡೆ ಟ್ರಾವೆಲ್ ಪ್ಲಾನ್ ಮಾಡಿರುವವರಿಗೆ ಇದು ಸಹಕಾರಿಯಾಗಲಿದೆ.

ನೈಋತ್ಯ ರೈಲ್ವೇ, ಹುಬ್ಬಳ್ಳಿ ಮತ್ತು ಯಶವಂತಪುರ ಸಂಪರ್ಕಿಸುವ ವಿಶೇಷ ರೈಲು ಸೇವೆಯನ್ನು ಡಿಸೆಂಬರ್ 24ರ ರಂದು ನೀಡುತ್ತಿದೆ. ಆ ಪ್ರಕಾರ, ರೈಲು ಸಂಖ್ಯೆ 07379 ಮಧ್ಯಾಹ್ನ 12ಕ್ಕೆ ಹುಬ್ಬಳ್ಳಿಯಿಂದ ಹೊರಟು ಹಾವೇರಿ, ಹರಿಹರ, ದಾವಣಗೆರೆ, ಅರಸೀಕೆರೆ ಮತ್ತು ತುಮಕೂರು ಮೂಲಕ ರಾತ್ರಿ 8:30 ಕ್ಕೆ ಬೆಂಗಳೂರು ಯಶವಂತಪುರ ರೈಲ್ವೇ ನಿಲ್ದಾಣವನ್ನು ತಲುಪುತ್ತದೆ. ಇನ್ನು ರೈಲು ಸಂಖ್ಯೆ 06277 ರಾತ್ರಿ 9:50 ಕ್ಕೆ ಯಶವಂತಪುರದಿಂದ ಹೊರಟು ತುಮಕೂರು, ಅರಸೀಕೆರೆ, ದಾವಣಗೆರೆ, ಹರಿಹರ, ಬಾದಾಮಿ, ಬಾಗಲಕೋಟೆ ಮತ್ತು ಆಲಮಟ್ಟಿ ಮೂಲಕ ಬೆಳಿಗ್ಗೆ 9ಕ್ಕೆ ವಿಜಯಪುರ ತಲುಪುತ್ತದೆ.
ಬೀದರ್‌ಗೆ ಹೊಸ ರೈಲು!
ಬೆಂಗಳೂರು ಟು ಬೀದರ್ ಹೋಲಿಸಿದ್ರೆ ತುಂಬಾನೇ ದೂರ ಇದೆ. ಬರೋಬ್ಬರಿ 700 ಕಿಲೋಮೀಟರ್ ದೂರ ಇದೆ. ಆದರೆ ಇದೀಗ ಈ ಪ್ರಯಾಣವನ್ನು ಸುಗಮಗೊಳಿಸಲು ಭಾರತೀಯ ರೈಲ್ವೇ ಇಲಾಖೆ ವಿಶೇಷ ರೈಲನ್ನು ತಂದಿದೆ. ಕ್ರಿಸ್ಮಸ್ ಪ್ರಯುಕ್ತ ಬೆಂಗಳೂರು ಕಂಟೋನ್ಮೆಂಟ್ ಬೀದರ್-ವಯಾ ಕಲಬುರಗಿ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚರಿಸಲಿದೆ ಎಂದು ರೈಲ್ವೇ ಇಲಾಖೆ ಹೇಳಿದೆ.
ಬೆಂಗಳೂರು ಟು ಬೀದರ್ ವಿಶೇಷ ರೈಲು:
ಇನ್ನು ವಿಶೇಷ ರೈಲಿನ ಬಗ್ಗೆ ಪ್ರಕಟಣೆ ಬಿಡುಗಡೆ ಮಾಡಿದ್ದು, ಬೆಂಗಳೂರು ಕಂಟೋನ್ಮೆಂಟ್‌ನಿಂದ ಬೀದರ್ ವಿಶೇಷ ಎಕ್ಸ್ ಪ್ರೆಸ್ ರೈಲು (06291) ಡಿಸೆಂಬರ್ 24 ರಂದು ರಾತ್ರಿ 9:15 ಕ್ಕೆ ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣದಿಂದ ಹೊರಟು, ಮರುದಿನ 11:30 ಕ್ಕೆ ಬೀದರ್ ರೀಚ್ ಆಗುತ್ತದೆ.
2 ದಿನ ಸಂಚರಿಸುವ ವಿಶೇಷ ರೈಲು:
ಬೀದರ್‌ನಿಂದ ಬೆಂಗಳೂರು ಕಂಟೋನ್ಮೆಂಟ್‌ಗೆ ಸಚಿಸುವ ಈ ವಿಶೇಷ ರೈಲು (06292) ಡಿಸೆಂಬರ್ 25 ರಂದು ಮಧ್ಯಾಹ್ನ 1:00 ಕ್ಕೆ ಬೀದರ್ ನಿಲ್ದಾಣದಿಂದ ಹೊರಟು, ಮರುದಿನ ಬೆಳಿಗ್ಗೆ 4:00 ಕ್ಕೆ ಬೆಂಗಳೂರು ಕಂಟೋನ್ಮೆಂಟ್‌ಗೆ ತಲುಪಲಿದೆ ಎಂದು ಹೇಳಲಾಗಿದೆ.ಇನ್ನು ಈ ರೈಲು ಯಲಹಂಕ, ಹಿಂದೂಪುರ, ಧರ್ಮವರಂ, ಅನಂತಪುರ, ಗುಂತಕಲ್, ಆದೋನಿ, ಮಂದರಾಳಂ ರಸ್ತೆ, ರಾಯಚೂರು, ಕೃಷ್ಣ, ಯಾದಗಿರಿ, ವಾಡಿ, ಶಹಾಬಾದ್, ಕಲಬುರಗಿ, ಹುಮನಾಬಾದ್ ರೈಲು ನಿಲ್ದಾಣದಲ್ಲಿ ಸಂಪರ್ಕ ಸಾಧಿಸಲಿದೆ. ಈಗಾಗಲೇ ಎರಡು ಕಡೆಗೂ ಬುಕಿಂಗ್ ವ್ಯವಸ್ಥೆ ಆರಂಭವಾಗಿದ್ದು, ಅಗತ್ಯವಿದ್ದರು ಇದನ್ನು ಬಳಸಬಹುದು.


Click it and Unblock the Notifications