ಸಾಮಾನ್ಯವಾಗಿ ಯಾವುದೇ ಹಬ್ಬ (Festival) ಬರಲಿ ಅಥವಾ ಆಚರಣೆಗಳಿರಲಿ ಈ ಸಂದರ್ಭದಲ್ಲಿ ಭಾರತೀಯ ರೈಲ್ವೇ ಇಲಾಖೆ ಕೆಲವು ರಾಜ್ಯಗಳಿಗೆ ಹೆಚ್ಚುವರಿ ಸೇವೆ ನೀಡಲು ತೀರ್ಮಾನಿಸುತ್ತದೆ. ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಭಾರತೀಯ ರೈಲ್ವೇ (Indian Railways) ಕೂಡಾ ನಿರಂತರ ಕಾರ್ಯ ನಿರ್ವಹಿಸುತ್ತಿರುತ್ತದೆ. ಇದೀಗ ರೈಲ್ವೇ ಪ್ರಯಾಣಿಕರಿಗೆ ಗುಡ್ ನ್ಯೂಸ್ ಒಂದಿದೆ. ಇನ್ನೇನು ಮಕರ ಸಂಕ್ರಾಂತಿ, ಹೋಳಿ, ಗಣರಾಜ್ಯೋತ್ಸವ ಹಬ್ಬ ಬರುತ್ತಿದೆ. ಈ ಬೆನ್ನಲ್ಲೇ ರೈಲ್ವೇ ಇಲಾಖೆ ಬಂಪರ್ ಸುದ್ದಿಯೊಂದನ್ನು ನೀಡಿದೆ.

ಮಕರ ಸಂಕ್ರಾಂತಿ ಮತ್ತು ಹೋಳಿ ಹಬ್ಬದ ಪ್ರಯುಕ್ತ ರೈಲ್ವೇ ಇಲಾಖನೆ ಪ್ರಯಾಣಿಕರಿಗೆ ಗಿಫ್ಟ್ ನೀಡಿದೆ. ವಾರಾಂತ್ಯದಲ್ಲಿ ರೈಲುಗಳ ಬೇಡಿಕೆ ಹೆಚ್ಚಾಗಿದ್ದರಿಂದ ಸ್ಪಂದಿಸಿ, ರೈಲ್ವೇಯು ಕಲಬುರಗಿ-ಬೆಂಗಳೂರು ಕಂಟೋನ್ಮೆಂಟ್ ವಾರಾಂತ್ಯದ ವಿಶೇಷ ರೈಲು (Kalaburagi-Bengaluru Special Train) ಸೇವೆಗಳನ್ನು ಹೆಚ್ಚುವರಿ 16 ಟ್ರಿಪ್‌ಗಳಿಗೆ ವಿಸ್ತರಿಸಿದೆ. ಡಿಸೆಂಬರ್ 2025ರವರೆಗೆ ನಿಗದಿಯಾಗಿದ್ದ ಈ ಸೇವೆಗಳು ಈಗ ಫೆಬ್ರವರಿ ಅಂತ್ಯದಿಂದ ಮಾರ್ಚ್ 2026ರ ಆರಂಭದವರೆಗೆ ಮುಂದುವರಿಯಲಿವೆ ಎಂದು ಹೇಳಲಾಗಿದೆ.
ಯಾವೆಲ್ಲಾ ರೈಲುಗಳು?
ರೈಲು ಸಂಖ್ಯೆ 06207 (ಬೆಂಗಳೂರು ಕಂಟೋನ್ಮೆಂಟ್-ಕಲಬುರಗಿ ವಾರದ ವಿಶೇಷ ರೈಲುಗಳು) ಜನವರಿ 3 ರಿಂದ ಫೆಬ್ರವರಿ 28ರವರೆಗೆ ಪ್ರತಿ ಶನಿವಾರ 8 ಹೆಚ್ಚುವರಿ ಟ್ರಿಪ್‌ಗಳಲ್ಲಿ ಸಂಚರಿಸಲಿದೆ ಎಂದು ಹೇಳಲಾಗಿದೆ. ಹಾಗೆಯೇ, ರೈಲು ಸಂಖ್ಯೆ 06208 (ಕಲಬುರಗಿ-ಬೆಂಗಳೂರು ಕಂಟೋನ್ಮೆಂಟ್ ವಾರದ ವಿಶೇಷ) ಜನವರಿ 4 ರಿಂದ ಮಾರ್ಚ್ 1ರವರೆಗೆ ಪ್ರತಿ ಭಾನುವಾರ 8 ಟ್ರಿಪ್‌ಗಳ ಮೂಲಕ ಕಾರ್ಯನಿರ್ವಹಿಸಲಿದೆ.
ಇನ್ನು ಈ ವಿಶೇಷ ರೈಲುಗಳ ಬೋಗಿಗಳ ಸಂಯೋಜನೆ ಅಥವಾ ನಿಲುಗಡೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಮಧ್ಯ ರೈಲ್ವೆಯ ಸೋಲಾಪುರ ವಿಭಾಗದ ಕಲಬುರಗಿ ಮತ್ತು ಶಹಾಬಾದ್ ನಿಲ್ದಾಣಗಳಲ್ಲಿ ಇವು ನಿಲುಗಡೆ ನೀಡಲಿವೆ.
ವಿಶೇಷ ಶುಲ್ಕಗಳಲ್ಲಿ ಸಂಚರಿಸುವ ಈ ರೈಲುಗಳಿಗೆ ಕಂಪ್ಯೂಟರ್ ಆಧಾರಿತ ಮೀಸಲಾತಿ ಕೇಂದ್ರಗಳು ಮತ್ತು IRCTC ವೆಬ್‌ಸೈಟ್ ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡುವ ಅವಕಾಶ ನೀಡಲಾಗಿದೆ. ಕಾಯ್ದಿರಿಸದ ಬೋಗಿಗಳಿಗೆ ಟಿಕೆಟ್‌ಗಳನ್ನು ನಿಲ್ದಾಣದ ಕೌಂಟರ್‌ಗಳು ಹಾಗೂ UTS ಮೊಬೈಲ್ ಆಪ್ ಮೂಲಕ ಬುಕ್ ಮಾಡಬಹುದು. ಅಲ್ಲದೇ ಟಿಕೆಟ್ ಮಾಡದೇ, ಪ್ರಯಾಣ ಮಾಡುವುದು ಒಳ್ಳೆಯದಲ್ಲ ಎಂದು ತಿಳಿಸಲಾಗಿದೆ.
ಇನ್ನು ವಿವರವಾದ ರೈಲು ವೇಳಾಪಟ್ಟಿ ಹಾಗೂ ಇತರೆ ಮಾಹಿತಿಗಳಿಗೆ ಪ್ರಯಾಣಿಕರು ಭಾರತೀಯ ರೈಲ್ವೆ ವಿಚಾರಣಾ ಪೋರ್ಟಲ್ ಅಥವಾ RailOne ಮತ್ತು NTES ಮೊಬೈಲ್ ಅಪ್ಲಿಕೇಶನ್‌ಗಳನ್ನು ಬಳಸಬಹುದು.
ಜನರ ಅನುಕೂಲಕ್ಕಾಗಿ ಹೊಸ ವ್ಯವಸ್ಥೆ!
ಮಕರ ಸಂಕ್ರಾಂತಿ, ಗಣರಾಜ್ಯೋತ್ಸವ ಬಂದಾಗ ಹೆಚ್ಚಿನವರು ರಜಾ ಅವಧಿಯಲ್ಲಿ ಊರಿಗೆ ಹೋಗುತ್ತಾರೆ. ಅದೇ ಸಂದರ್ಭದಲ್ಲಿ ಬಸ್ ನಿಲ್ದಾಣಗಳು, ರೈಲ್ವೇ ಸ್ಟೇಷನ್‌ಗಳು ಜನದಟ್ಟಣೆಯಿಂದ ತುಂಬಿ ತುಳುಕುತ್ತಿರುತ್ತದೆ. ಆದ್ರೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿ ಇದೀಗ ರೈಲ್ವೇ ಇಲಾಖೆ ಈ ನಿರ್ಧಾರ ಕೈಗೊಂಡಿದೆ. ಮಾರ್ಚ್ ಅಂತ್ಯದವರೆಗೂ ಈ ಸೇವೆ ಕಾರ್ಯನಿರ್ವಹಿಸುವುದರಿಂದ ಬೆಂಗಳೂರಿನಿಂದ ಕಲಬುರ್ಗಿ ಹೋಗುವವರು ಆರಾಮದಾಯಕ ರೈಲು ಪ್ರಯಾಣವನ್ನು ಮಾಡಬಹುದು.


Click it and Unblock the Notifications