ಬೆಂಗಳೂರು: ಜನರ ನೆಚ್ಚಿನ ಬಣ್ಣಗಳ ಹಬ್ಬ ಹೋಳಿ, ಹೊಸ ವರ್ಷದ ಆರಂಭ ಸೂಚಿಸುವ ಯುಗಾದಿ ಹಬ್ಬಕ್ಕೆ (Holi-Ugadi) ದಿನಗಣನೆ ಶುರುವಾಗಿದೆ. ಈ ಸಂದರ್ಭದಲ್ಲಿ ಹೆಚ್ಚಿನವರು ದೂರದ ಊರಿನಲ್ಲಿ ನೆಲೆಸಿರುವವರು ತಮ್ಮೂರುಗಳಿಗೆ ಹೋಗುವ ಪ್ಲಾನ್ ಮಾಡಿರುತ್ತಾರೆ. ಅಲ್ಲದೇ ಹೆಚ್ಚಿನವರು ರಜೆ ಹಾಕಿ ಟ್ರಿಪ್ ಪ್ಲಾನ್ ಮಾಡುತ್ತಾರೆ. ಈ ಸಂದರ್ಭದಲ್ಲಿ ಬಸ್ ನಿಲ್ದಾಣಗಳು, ರೈಲ್ವೇ ಸ್ಟೇಷನ್‌ಗಳು ಜನಜಂಗುಳಿಯಿಂದ ತುಂಬಿ ತುಳುಕುತ್ತಿರುತ್ತದೆ. ಇದೀಗ ಹೋಳಿ, ಯುಗಾದಿ ಹಬ್ಬಗಳಿಗೆ ಊರಿಗೆ ಹೋಗುವವರ ಜನದಟ್ಟಣೆಯನ್ನು ನಿಭಾಯಿಸುವ ಉದ್ದೇಶದಿಂದ ದಕ್ಷಿಣ ಪಶ್ಚಿಮ ರೈಲ್ವೇ (SWR) ವಿಶೇಷ ರೈಲುಗಳನ್ನು ಘೋಷಣೆ ಮಾಡಿದೆ.

ಹೌದು, ಮಾರ್ಚ್ 4 ರಂದು ಹೋಳಿ ಹಬ್ಬಕ್ಕಾಗಿ ಮತ್ತು ಮಾರ್ಚ್ 19 ರಂದು ಯುಗಾದಿ ಹಬ್ಬದ ಆಚರಣೆ ಹಿನ್ನೆಲೆ, ಈ ಸಮಯದಲ್ಲಿ ಉತ್ತರ ಭಾರತ ಮತ್ತು ಇತರ ನಗರಗಳಿಗೆ ಹೋಗುವವರಿಗೆ ಅನುಕೂಲವಾಗಲು ದಕ್ಷಿಣ ಪಶ್ಚಿಮ ರೈಲ್ವೇ ಇಲಾಖೆ ವಿಶೇಷ ರೈಲುಗಳನ್ನು ಘೋಷಣೆ ಮಾಡಿದೆ.
ಹುಬ್ಬಳ್ಳಿಯಿಂದ ಮುಜಫ್ಫರ್‌ಪುರಕ್ಕೆ ನೇರ ಎಕ್ಸ್‌ಪ್ರೆಸ್ ರೈಲು!
ರೈಲ್ವೇ ಇಲಾಖೆ ಹುಬ್ಬಳ್ಳಿಯಿಂದ ಬಿಹಾರದ ಮುಜಫರ್‌ಪುರಕ್ಕೆ ವಿಶೇಷ ರೈಲನ್ನು ಘೋಷಣೆ ಮಾಡಿದೆ. ಈ ರೈಲು ಹೋಳಿ ಮತ್ತು ಯುಗಾದಿ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣ ಮಾಡುವವರಿಗಾಗಿ ಅನುಕೂಲವಾಗಲಿದೆ. ಈ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 07315 (ಹುಬ್ಬಳ್ಳಿ-ಮುಜಫರ್‌ಪುರ) ಪ್ರತೀ ಬುಧವಾರ ಸಂಜೆ 5:20 ಕ್ಕೆ ಹುಬ್ಬಳ್ಳಿಯಲ್ಲಿ ಹೊರಡಲಿದೆ. ಅದು ಮಾರ್ಚ್ 4 ರಿಂದ ಏಪ್ರಿಲ್ 1 ರವರೆಗೆ ಓಡಾಡುತ್ತದೆ.
ವಾಪಾಸ್ ಬರುವ ರೈಲು ಸಂಖ್ಯೆ 07316 ಆಗಿದ್ದು (ಮುಜಫರ್‌ಪುರ-ಹುಬ್ಬಳ್ಳಿ) ಮಾರ್ಚ್ 7 ರಿಂದ ಏಪ್ರಿಲ್ 4 ರವರೆಗೆ ಪ್ರಯಾಣಿಸಲಿದೆ. ಇದು ಐದು ಟ್ರಿಪ್‌ಗಳನ್ನು ಹೊಂದಿರುತ್ತದೆ.
ವಿಶೇಷ ರೈಲಿನ, ಹಲವು ವಿಶೇಷತೆ!
ಇನ್ನು ಈ ವಿಶೇಷ ರೈಲು 23 ಕೋಚ್‌ಗಳನ್ನು ಹೊಂದಿದ್ದು, ಎಸಿ, ಸ್ಲೀಪರ್ ಮತ್ತು ಜನರಲ್ ಕ್ಲಾಸ್‌ಗಳನ್ನು ಹೊಂದಿದೆ. ಅಲ್ಲದೇ ಇದು ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶದ ಮುಖ್ಯ ನಗರಗಳನ್ನು ಹಾದುಹೋಗಲಿದೆ.
ಈ ರೈಲಿನ ಪ್ರಮುಖ ನಿಲುಗಡೆ ಸ್ಥಳಗಳು:
ಧಾರವಾಡ, ಬೆಳಗಾವಿ, ಮಿರಾಜ್, ಪುಣೆ, ಜಬಲ್‌ಪುರ್, ಇಟಾರ್ಸಿ, ಸಟ್ನಾ, ಮಣ್ಣಿ ಅಲಹಾಬಾದ್, ಗಾಜಿಪುರ್ ಸಿಟಿ, ವಾರಣಾಸಿ, ಹೀಗೆ ಹಲವು ನಿಲ್ದಾಣಗಳನ್ನು ದಾಟಲಿದೆ.
ಭಾರತೀಯ ರೈಲ್ವೇಯಿಂದ ಮಹತ್ವದ ನಿರ್ಧಾರ!
ಹೋಳಿ ಸಂದರ್ಭದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೇ ದೇಶದಾದ್ಯಂತ 1,244 ವಿಶೇಷ ರೈಲುಗಳನ್ನು ನೀಡಲಿದ್ದು, ಫೆಬ್ರವರಿ 25 ರಿಂದ ಮಾರ್ಚ್ 18 ರವರೆಗೆ ಇದು ಕಾರ್ಯಚರಣೆ ನಡೆಸಲಿದೆ. ವಿಶೇಷವಾಗಿ ಹುಬ್ಬಳ್ಳಿಯಂದ ಬೆಂಗಳೂರು, ಮುಂಬೈ, ಹೈದರಾಬಾದ್, ಪುಣೆಗೆ ಈ ವಿಶೇಷ ನೇರ ರೈಲುಗಳನ್ನು ನೀಡಲಾಗಿದೆ.
ರೈಲ್ವೇ ಇಲಾಖೆಯ ಹೆಚ್ಚಿನ ಮಾಹಿತಿಗಾಗಿ IRCTC ವೆಬ್‌ಸೈಟ್ ಅಥವಾ ಆಪ್ ಮೂಲಕ ಪಡೆಯಬಹುದು. ಅಲ್ಲದೇ ಇದೇ ವೆಬ್‌ಸೈಟ್‌ನಲ್ಲಿ ಟಿಕೆಟ್ ಬುಕ್ ಮಾಡಬಹುದು. ಹಬ್ಬದ ಸಂದರ್ಭಗಳಲ್ಲಿ ರೈಲ್ವೇ ಸ್ಟೇಷನ್‌ಗಳಲ್ಲಿ ಟಿಕೆಟ್ ಬುಕ್ ಮಾಡುವುದರ ಬದಲಿಗೆ, ವೆಬ್‌ಸೈಟ್, ಆಪ್ ಮೂಲಕ ಬುಕ್ ಮಾಡಿದರೆ ಒಳ್ಳೆಯದು. ಇದರಿಂದ ದಟ್ಟಣೆಯೂ ತಪ್ಪುತ್ತದೆ.


Click it and Unblock the Notifications