ಭಾರತದಲ್ಲಿ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದನೆ: ಆಗಸ್ಟ್‌ನಲ್ಲಿ ಸಿಗಲಿದೆ ಚಾಲನೆ

ಕೊರೊನಾವೈರಸ್ ಸಾಂಕ್ರಾಮಿಕ ರೋಗವನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಪ್ರಸ್ತುತ ವ್ಯಾಕ್ಸಿನೇಷನ್ ಕೊರತೆಯನ್ನು ನೀಗಿಸಲು ಭಾರತ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ಸ್ಪುಟ್ನಿಕ್ ವಿ ಲಸಿಕೆ ತಯಾರಿಸಲು ರಷ್ಯಾ ಶೀಘ್ರದಲ್ಲೇ ಭಾರತಕ್ಕೆ ಅಗತ್ಯ ಪರವಾನಗಿಗಳನ್ನು ನೀಡಲಿದೆ.

ಹೀಗಾಗಿ ಸ್ಪುಟ್ನಿಕ್ ವಿ ಲಸಿಕೆ ತಯಾರಿಸಲು ಬೇಕಾದ ಸೂತ್ರವನ್ನು ಆಮದು ಮಾಡಿಕೊಳ್ಳಲಿದೆ. ಆಗಸ್ಟ್‌ನಿಂದ ಭಾರತದಲ್ಲಿ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದನೆ ಪ್ರಾರಂಭವಾಗುವ ನಿರೀಕ್ಷೆಯಿದೆ.

ಭಾರತದಲ್ಲಿ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದನೆ: ಆಗಸ್ಟ್‌ನಲ್ಲಿ ಚಾಲನೆ

ಈ ವಿಷಯವನ್ನು ರಷ್ಯಾದ ಭಾರತೀಯ ರಾಯಭಾರಿ ಡಿ ಬಾಲಾ ವೆಂಕಟೇಶ್ ವರ್ಮಾ ಬಹಿರಂಗಪಡಿಸಿದ್ದಾರೆ. ಅವರನ್ನು ಸೇಂಟ್ ಪೀಟರ್‌ಬರ್ಗ್ಸ್‌ನಲ್ಲಿ ಸ್ಥಳೀಯ ಮಾಧ್ಯಮ ಪ್ರತಿನಿಧಿಗಳು
ಕೇಳಿದ ಪ್ರಶ್ನೆಗಳಿಗೆ ಈ ಪ್ರಮುಖ ಅಂಶಗಳನ್ನು ತಿಳಿಸಿದ್ದಾರೆ.

''ವಿಶ್ವಾದ್ಯಂತ ಸರಬರಾಜು ಮಾಡುವ ಸ್ಪುಟ್ನಿಕ್ ವಿ ಲಸಿಕೆಯ ಶೇಕಡಾ 65 ರಿಂದ 70 ರಷ್ಟನ್ನು ಭಾರತದಲ್ಲಿಯೇ ತಯಾರಿಸಲಾಗುತ್ತದೆ. ರಷ್ಯಾ ಸರ್ಕಾರ ಈಗಾಗಲೇ ಈ ತಿಂಗಳ 1 ರಿಂದ 2,10,000 ಡೋಸ್ ಲಸಿಕೆಗಳನ್ನು ಎರಡು ಹಂತಗಳಲ್ಲಿ ಭಾರತಕ್ಕೆ ಕಳುಹಿಸಿದೆ. ಇನ್ನೂ ಮೂರು ಮಿಲಿಯನ್ ಡೋಸ್ ಲಸಿಕೆ ಶೀಘ್ರದಲ್ಲೇ ಭಾರತಕ್ಕೆ ತಲುಪಲಿದೆ'' ಎಂದು ಅವರು ಹೇಳಿದರು.

ಜೂನ್ ಕೊನೆಯ ವಾರದ ವೇಳೆಗೆ ಐದು ಲಕ್ಷ ಡೋಸೇಜ್‌ಗಳನ್ನು ಭಾರತಕ್ಕೆ ಕಳುಹಿಸುವ ಗುರಿಯನ್ನು ರಷ್ಯಾ ಸರ್ಕಾರ ಹೊಂದಿದೆ ಎಂದು ಅವರು ಹೇಳಿದರು. ಭಾರತದಿಂದ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದನೆಯು ಆಗಸ್ಟ್‌ನಿಂದ ಪ್ರಾರಂಭವಾಗಲಿದೆ. ಈ ಲಸಿಕೆಯನ್ನು ಹೈದರಾಬಾದ್‌ನ ಡಾ. ರೆಡ್ಡಿ ಲ್ಯಾಬ್ಸ್‌ನಲ್ಲಿ ತಯಾರಿಸಲಾಗುತ್ತದೆ ಎಂದು ತಿಳಿದುಬಂದಿದೆ. ಸ್ಪುಟ್ನಿಕ್ ವಿ ಲಸಿಕೆ ಬೆಲೆ 995.40 ರೂ. ನಷ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+