ಬೆಂಗಳೂರು, ಆಗಸ್ಟ್ 22: ಬೆಂಗಳೂರು ಮೂಲದ ಶ್ರೀರಾಮ್ ಪ್ರಾಪರ್ಟೀಸ್ ಲಿಮಿಟೆಡ್ ಕಳೆದ ಎರಡು ದಶಕಗಳಿಂದ ರಿಯಲ್ ಎಸ್ಟೇಟ್ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದು, ಇದು ತನ್ನ ಗುರಿಯನ್ನು ಮುಖ್ಯವಾಗಿ ಮಧ್ಯಮ-ಮಾರುಕಟ್ಟೆ ಮತ್ತು ಕೈಗೆಟುಕುವ ವಸತಿ ವಿಭಾಗಗಳ ಮೇಲೆ ಕೇಂದ್ರೀಕರಿಸಿದೆ.
ಇದು ಚಿಲ್ಲರೆ ಹಣಕಾಸು ಸೇವೆಗಳು ಮತ್ತು ಹಲವಾರು ಇತರ ಉದ್ಯಮಗಳಲ್ಲಿ ನಾಲ್ಕು ದಶಕಗಳ ಅನುಭವವನ್ನು ಹೊಂದಿರುವ ಶ್ರೀರಾಮ್ ಪ್ರಾಪರ್ಟೀಸ್ ಲಿಮಿಟೆಡ್ ತನ್ನ ಆದಾಯವನ್ನು ಮೂರು ಪಟ್ಟು ಹೆಚ್ಚಿಸುವ ಮತ್ತು ತನ್ನ ಕೆಳಸ್ತರದ ಉದ್ಯಮ ವ್ಯವಹಾರ ನಾಲ್ಕು ಪಟ್ಟು ಹೆಚ್ಚಿಸುವ ಮಹತ್ವಾಕಾಂಕ್ಷೆಯೊಂದಿಗೆ, 2000 ಕೋಟಿ ರೂ. ಹೂಡಿಕೆ ಯೋಜನೆಯನ್ನು ಹೊರತಂದಿದೆ. ಇದರಲ್ಲಿ SPL ಭಾಗಶಃ ಹೂಡಿಕೆ ಮಾಡುವ ಜೊತೆಗೆ ಇತರ ಪಾಲುದಾರಿಕೆ ಪಡೆಯುವ ಕಾರ್ಯತಂತ್ರದ ಸಾಧ್ಯತೆ ಇದೆ. ಇದರಲ್ಲಿ 1,000 ಕೋಟಿ ರೂ.ಗಳನ್ನು ಬೆಂಗಳೂರಿನಲ್ಲಿ ಭೂಮಿ ಖರೀದಿಸಲು ಹೂಡಿಕೆ ಮಾಡಲಾಗುತ್ತದೆ.

ಈ ಬಗ್ಗೆ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಗ್ರೂಪ್ ಸಿಇಒ ಗೋಪಾಲಕೃಷ್ಣನ್ ಜೆ, ಆರ್ಥಿಕ ವರ್ಷದ೨೦27 ರ ವೇಳೆಗೆ ಕಂಪನಿಯ ಮಾರಾಟದ ಗುರಿ 5,000 ಕೋಟಿ ರೂ., ಅದರ ಆದಾಯ ರೂ. 3,000 ಕೋಟಿ ಮತ್ತು ಲಾಭ ರೂ. 250 ಕೋಟಿ ಗುರಿ ತಲುಪುವ ಆಶಯ ವ್ಯಕ್ತಪಡಿಸಿದರು.
ಇದೇ ನಿಟ್ಟಿನಲ್ಲಿ ದೂರಾದೃಷ್ಟಿಯನ್ನು ಹೊಂದಿರುವ ಶ್ರೀರಾಮ ಪ್ರಾಪರ್ಟೀಸ್ ಲಿಮಿಟೆಡ್ ಕಂಪನಿಯು 500 ಕೋಟಿ ರೂ. ಹೂಡಿಕೆ ಮಾಡುವುದರೊಂದಿಗೆ, ಜಂಟಿ ಅಭಿವೃದ್ಧಿ ಒಪ್ಪಂದಗಳು (ಜೆಡಿಎ) ಮತ್ತು ಇತರ ಜಂಟಿ ಉದ್ಯಮಗಳಂತಹ ಪಾಲುದಾರಿಕೆಯ ಮೂಲಕ ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಿದ್ದತೆ ಮಾಡಿಕೊಂಡಿದೆ.
ಒಟ್ಟಾರೆಯಾಗಿ, ಕಂಪನಿಯು ಬೆಂಗಳೂರು, ಚೆನ್ನೈ ಮತ್ತು ಪುಣೆಯಾದ್ಯಂತ 20 ಮಿಲಿಯನ್ ಚದರ ಅಡಿ (ಎಂಎಸ್‌ಎಫ್) ರಿಯಲ್ ಎಸ್ಟೇಟ್ ಮಾರಾಟ ಮಾಡಲು ಪ್ರಯತ್ನಿಸುತ್ತಿದೆ. ಇದರಲ್ಲಿ 8-9 ಎಂಎಸ್‌ಎಫ್ ಬೆಂಗಳೂರಿನಲ್ಲಿರಲಿದೆ.
ಶ್ರೀರಾಮ್ ಪ್ರಾಪರ್ಟೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುರಳಿ ಮಲಯಪ್ಪನ್, "ವಸತಿ ಬೇಡಿಕೆ ಮತ್ತು ಡೆವಲಪರ್‌ಗಳ ಬಲವರ್ಧನೆಯಿಂದಾಗಿ ನಮ್ಮ ಮುಂದಿರುವ ಅವಕಾಶ ಅದ್ಭುತವಾಗಿದೆ ಎಂದು ನಾವು ನಂಬುತ್ತೇವೆ. ನಾವು ನಮ್ಮ ಕಾರ್ಯಾಚರಣೆಯ 25 ನೇ ವರ್ಷಕ್ಕೆ ಪ್ರವೇಶಿಸುತ್ತಿರುವಾಗ ಹೊಚ್ಚಹೊಸ ಗುರುತು (SPLNxT) ಯೊಂದಿಗೆ ಮಿಷನ್ ಅನ್ನು ಪ್ರಾರಂಭಿಸುತ್ತಿದ್ದೇವೆ. ಇದಲ್ಲದೇ ನಾವು SPL ಅನ್ನು ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ ನಮ್ಮ ಪ್ರಮುಖ ಮಾರುಕಟ್ಟೆಗಳಾದ್ಯಂತ ಪ್ರಬಲ ಶಕ್ತಿಯಾಗಿ ರೂಪಿಸಲಿದ್ದೇವೆ" ಎಂದು ಹೇಳಿದ್ದಾರೆ.
ರಾಮ್ ಪ್ರಾಪರ್ಟೀಸ್ ಮಧ್ಯಮ-ಮಾರುಕಟ್ಟೆ ಮತ್ತು ಮಧ್ಯಮ-ಪ್ರೀಮಿಯಂ ಯೋಜನೆಗಳ ಮೇಲೆ ಕೇಂದ್ರೀಕರಿಸಲು 'SPLNxT' ಹೆಸರಿನಲ್ಲಿ ಹೊಸ ಬ್ರ್ಯಾಂಡ್ ಗುರುತನ್ನು ಬುಧವಾರ ಅನಾವರಣಗೊಳಿಸಿದೆ. ಇದು ಮಧ್ಯಮ ಆದಾಯ ವರ್ಗದಲ್ಲಿ ₹ 50 ಲಕ್ಷದಿಂದ ₹ 1.25 ಕೋಟಿ ಬೆಲೆಯ ಮನೆಗಳನ್ನು ಮತ್ತು ಮಧ್ಯಮ ಪ್ರೀಮಿಯಂ ಶ್ರೇಣಿಯ ಮನೆಗಳ ಅಡಿಯಲ್ಲಿ ₹ 1.25 ಕೋಟಿಗಿಂತ ಹೆಚ್ಚಿನ ಬೆಲೆಯ ಮನೆಗಳನ್ನು ಮಾರಾಟ ಮಾಡುತ್ತದೆ.
ಶ್ರೀರಾಮ್ ಪ್ರಾಪರ್ಟೀಸ್ ಬಗ್ಗೆ:
ಶ್ರೀರಾಮ್ ಪ್ರಾಪರ್ಟೀಸ್ ಶ್ರೀರಾಮ್ ಗ್ರೂಪ್‌ನ ಒಂದು ಭಾಗವಾಗಿದೆ. ಇದು ದಕ್ಷಿಣ ಭಾರತದ ಪ್ರಮುಖ ವಸತಿ ರಿಯಲ್ ಎಸ್ಟೇಟ್ ಅಭಿವೃದ್ಧಿ ಕಂಪನಿಗಳಲ್ಲಿ ಒಂದಾಗಿದೆ, ಪ್ರಾಥಮಿಕವಾಗಿ ಮಧ್ಯಮ-ಮಾರುಕಟ್ಟೆ ಮತ್ತು ಕೈಗೆಟುಕುವ ವಸತಿ ವರ್ಗಗಳ ಮೇಲೆ ತನ್ನ ಗುರಿಯನ್ನು ಕೇಂದ್ರೀಕರಿಸಿದೆ. 2000 ರಲ್ಲಿ ಬೆಂಗಳೂರಿನಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು ಮತ್ತು ನಂತರ ದಕ್ಷಿಣ ಭಾರತದ ಇತರ ನಗರಗಳಾದ, ಚೆನ್ನೈ, ಕೊಯಮತ್ತೂರು ಮತ್ತು ವಿಶಾಖಪಟ್ಟಣಂಗಳಿಗೆ ತಮ್ಮಉದ್ಯಮವನ್ನು ವಿಸ್ತರಿಸಿದ್ದಾರೆ. ಜೊತೆಗೆ, ಅವರು ಪೂರ್ವ ಭಾರತದ ಕೋಲ್ಕತ್ತಾದಲ್ಲಿ ಕಾರ್ಯಚಟುವಟಿಕೆ ಹೊಂದಿದ್ದಾರೆ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಚಿನ್ನದ ಬೆಲೆ ಇಳಿಕೆ: ಖರೀದಿಗೆ ಇದೇ ಸುವರ್ಣಾವಕಾಶವೇ?



Click it and Unblock the Notifications