2024-25ನೇ ಸಾಲಿನ ಕರ್ನಾಟಕ SSLC ಮಕ್ಕಳ ಫಲಿತಾಂಶ ಹೊಸ ಬಿದ್ದಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಅಧಿಕೃತವಾಗಿ ಫಲಿತಾಂಶ ಪ್ರಕಟಿಸಿದ್ದಾರೆ. ಈ ಬಾರಿ ರಾಜ್ಯದ ಒಟ್ಟು ಫಲಿತಾಂಶ ಶೇಕಡಾ 62.34ರಷ್ಟಿದೆ. ಕಳೆದ ವರ್ಷಕ್ಕಿಂತ ಸ್ವಲ್ಪ ಕಡಿಮೆಯಾದರೂ, ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳ ವಿದ್ಯಾರ್ಥಿಗಳು ಮತ್ತೊಮ್ಮೆ ತಮ್ಮ ಉತ್ತಮ ಸಾಧನೆಯ ಮೂಲಕ ಗಮನಸೆಳೆದಿದ್ದಾರೆ.

ದಕ್ಷಿಣ ಕನ್ನಡವೇ ಮೇಲುಗೈ..91.12% ಫಲಿತಾಂಶ:
ಈ ಬಾರಿಯೂ SSLC ಪರೀಕ್ಷಾ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯೇ ಮೇಲುಗೈ ಸಾಧಿಸಿದೆ. ಈ ಬಾರಿ 91.12% ಫಲಿತಾಂಶ ಪಡೆದುಕೊಳ್ಳುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಉಡುಪಿ ಜಿಲ್ಲೆ ಶೇಕಡಾ 89.96ರೊಂದಿಗೆ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಉತ್ತರ ಕನ್ನಡ (83.19%), ಶಿವಮೊಗ್ಗ (82.29%) ಹಾಗೂ ಕೊಡಗು (82.21%) ಕ್ರಮವಾಗಿ ಮೂರನೇ, ನಾಲ್ಕನೇ ಮತ್ತು ಐದನೇ ಸ್ಥಾನಗಳನ್ನೂ ಪಡೆದುಕೊಂಡಿವೆ.
22 ವಿದ್ಯಾರ್ಥಿಗಳಿಗೆ ಫುಲ್ ಮಾರ್ಕ್ಸ್:
ಈ ಬಾರಿ 22 ವಿದ್ಯಾರ್ಥಿಗಳು 625ರಲ್ಲಿ 625 ಅಂಕಗಳನ್ನು ಪಡೆದು ಶೇ.100 ಫಲಿತಾಂಶ ಸಾಧಿಸಿದ್ದಾರೆ. ಹಿಂದಿನ ವರ್ಷ ಈ ಸಾಧನೆ ಕೇವಲ ಒಬ್ಬ ವಿದ್ಯಾರ್ಥಿಯ ಪಾಲಾಗಿದ್ದರೆ, ಈ ಬಾರಿ ಸಾಧನೆ ಮಾಡಿದವರ ಸಂಖ್ಯೆ ಏರಿಕೆಯಾಗಿದೆ. ಇದಲ್ಲದೆ, 327 ವಿದ್ಯಾರ್ಥಿಗಳು 620ಕ್ಕಿಂತ ಹೆಚ್ಚಾದ ಅಂಕಗಳನ್ನು ಪಡೆದು ಉತ್ತಮ ಶ್ರೇಣಿಗೆ ತಲುಪಿದ್ದಾರೆ.
ಬಾಲಕಿಯರೇ ಮೇಲುಗೈ:
ಬಾಲಕಿಯರು ಮತ್ತೆ ತಮ್ಮ ಸಾಧನೆಯ ಮೂಲಕ ಮೆರೆದಿದ್ದಾರೆ. ಈ ಬಾರಿ ಹೆಣ್ಣು ಮಕ್ಕಳ ಉತ್ತೀರ್ಣ ಪ್ರಮಾಣ ಶೇಕಡಾ 74ರಷ್ಟಿದ್ದು, ಗಂಡು ಮಕ್ಕಳದು ಕೇವಲ ಶೇಕಡಾ 58.07. ವಿದ್ಯಾಭ್ಯಾಸದಲ್ಲಿ ಬಾಲಕಿಯರ ಶ್ರೇಷ್ಠತೆಯು ಈ ಫಲಿತಾಂಶದಿಂದ ಮತ್ತೊಮ್ಮೆ ದೃಢವಾಗಿದೆ.
ಕಲಬುರಗಿ ಮತ್ತೆ ಕೊನೆಯ ಸ್ಥಾನದಲ್ಲಿ:
ಇನ್ನೊಂದೆಡೆ, ಕಲಬುರಗಿ ಜಿಲ್ಲೆ ಇತರ ಜಿಲ್ಲೆಯೊಂದಿಗೆ ಹೋಲಿಸಿದರೆ ತುಂಬಾ ಕಡಿಮೆ ಫಲಿತಾಂಶ ದಾಖಲಿಸಿದೆ. ಶೇಕಡಾ 42.43ರ ಫಲಿತಾಂಶದೊಂದಿಗೆ ಈ ಜಿಲ್ಲೆ ರಾಜ್ಯದ ಕೊನೆಯ ಸ್ಥಾನಕ್ಕೆ ಸರಿದಿದೆ.
ಫಲಿತಾಂಶ ಪ್ರಕಟಗೊಂಡ ನಂತರ ವಿದ್ಯಾರ್ಥಿಗಳು ತಮ್ಮ ಮುಂದಿನ ಶಿಕ್ಷಣದ ಬಗ್ಗೆ ತೀರ್ಮಾನಿಸಲು ತೊಡಗಿದ್ದಾರೆ. ಪಿಯುಸಿ ಪ್ರಥಮ ವರ್ಷದ ಪ್ರವೇಶಕ್ಕೆ ತಯಾರಿ ಆರಂಭಗೊಂಡಿದ್ದು, ಹೆಚ್ಚು ಅಂಕ ಪಡೆದವರು ವಿಜ್ಞಾನ, ವಾಣಿಜ್ಯ, ಕಲೆ ಇತ್ಯಾದಿ ಶಾಖೆಗಳಿಗೆ ಮೆರೆ ಹಾಕುತ್ತಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, "ಈ ಬಾರಿಯ ಫಲಿತಾಂಶ ಶೇಕಡಾ 62.34 ಆಗಿದ್ದು, ಕೋವಿಡ್ ನಂತರದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಹೋರಾಡಿ ಸಾಧಿಸಿರುವುದೊಂದು ಶ್ಲಾಘನೀಯ ಸಂಗತಿ" ಎಂದು ಹೇಳಿದ್ದಾರೆ.
ಈ ವರ್ಷದ ಎಸ್ಸೆಸ್ಸೆಲ್ಸಿ ಫಲಿತಾಂಶವು ರಾಜ್ಯದ ಶೈಕ್ಷಣಿಕ ವ್ಯವಸ್ಥೆಯ ಸ್ಥಿತಿಗತಿಗಳಿಗೆ ಸ್ಪಷ್ಟ ದರ್ಪಣವಾಗಿದೆ. ದಕ್ಷಿಣ ಕನ್ನಡ (91.12%) ಮತ್ತು ಉಡುಪಿ (89.96%) ಜಿಲ್ಲೆಗಳು ತಮ್ಮ ಉನ್ನತ ಶೈಕ್ಷಣಿಕ ಮೂಲ್ಯಗಳನ್ನು ಮತ್ತೊಮ್ಮೆ ಸ್ಥಾಪಿಸಿವೆ. ಉತ್ತರ ಕನ್ನಡ (83.19%), ಶಿವಮೊಗ್ಗ (82.29%) ಮತ್ತು ಕೊಡಗು (82.21%) ಜಿಲ್ಲೆಗಳ ಸಾಧನೆಯು ಮಲೆನಾಡಿನ ಶೈಕ್ಷಣಿಕ ಶಕ್ತಿ ಹಾಗೂ ಗಂಭೀರತೆಯನ್ನು ತೋರಿಸುತ್ತದೆ.
ಆದರೆ ಇನ್ನು ಕೆಲ ಜಿಲ್ಲೆಗಳು, ವಿಶೇಷವಾಗಿ ಕಲಬುರ್ಗಿ (42.43%), ಯಾದಗಿರಿ (44.34%) ಮತ್ತು ವಿಜಯಪುರ (46.70%) ಜಿಲ್ಲೆಯು ಪದೇಪದೇ ತಳಮಟ್ಟದಲ್ಲಿ ಉಳಿಯುತ್ತಿವೆ ಎಂಬುದು ಕಳವಳಕಾರಿ ವಿಚಾರ. ಈ ಪ್ರದೇಶಗಳಲ್ಲಿ ಶೈಕ್ಷಣಿಕ ಮೂಲಸೌಕರ್ಯ, ಶಿಕ್ಷಕರ ಕೊರತೆ ಮತ್ತು ಪೋಷಕರ ಅರಿವು ಇತ್ಯಾದಿ ಅಂಶಗಳು ಪ್ರಭಾವ ಬೀರುತ್ತಿವೆ ಎಂಬ ಆಲೋಚನೆ ಇದ್ದರೂ, ಸರ್ಕಾರ ಹಾಗೂ ಸ್ಥಳೀಯ ಆಡಳಿತಗಳು ಈ ಬಗ್ಗೆಯೂ ತಕ್ಷಣ ಕ್ರಮ ಕೈಗೊಳ್ಳಬೇಕಿದೆ.
ಈ ಬಾರಿ 22 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸಿರುವುದು ನಿಜಕ್ಕೂ ಶ್ಲಾಘನೀಯ. ಜೊತೆಗೆ, 327 ಮಂದಿ ವಿದ್ಯಾರ್ಥಿಗಳು 620ಕ್ಕೂ ಹೆಚ್ಚು ಅಂಕ ಗಳಿಸಿರುವುದು ಗುಣಮಟ್ಟದ ಶಿಕ್ಷಣದ ಫಲವಾಗಿ ಪರಿಗಣಿಸಬಹುದು. ಬಾಲಕಿಯರು (74%) ಬಾಲಕರಿಗಿಂತ (58.07%) ಹೆಚ್ಚಾಗಿ ತೇರ್ಗಡೆಯಾದ ಹಿನ್ನೆಲೆ, ಅವರು ಶಿಕ್ಷಣ ಕ್ಷೇತ್ರದಲ್ಲಿ ತಾವು ಎಷ್ಟು ಮುನ್ನಡೆದಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ.


Click it and Unblock the Notifications