ಚೀನಾದಲ್ಲಿ ವೈರಸ್ ಹರಡುವಿಕೆಯ ವದಿಗಳ ಮಧ್ಯೆ ಕರ್ನಾಟಕದಲ್ಲಿ HMPV ಎರಡು ಪ್ರಕರಣಗಳು ದಾಖಲಾಗಿದ್ದು ಷೇಟು ಮಾರುಕಟ್ಟೆಯಲ್ಲಿ ಭೀತಿಯನ್ನು ಉಂಟುಮಾಡಿದೆ. ಹೀಗಾಗಿ ಭಾರತದ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ ಕಂಡಿದೆ. ವಾರದ ಮೊದಲ ದಿವೇ ಉತ್ತಮ ವಹಿವಾಟು ಕಂಡುಬಂದಿದ್ದು, ಮಾರುಕಟ್ಟೆಯ ಪ್ರಮುಖ ಸೂಚ್ಯಾಂಕ ಶೇಕಡಾ 1-1ಕ್ಕಿಂತ ಹೆಚ್ಚು ಕುಿತವನ್ನ ಕಂಡಿದೆ. ಸೆನ್ಸೆಕ್ಸ್ 1,200 ಅಂಕ ಕಸಿದಿದೆ ಮತ್ತು ನಿಫ್ಟಿ 1.4% ರಷ್ಟು ಕಡಿಮೆಯಾಗಿದೆ.
ಪಿಎಸ್‌ಯು ಬ್ಯಾಂಕ್‌ಗಳು, ರಿಯಲ್ ಎಸ್ಟೇಟ್, ತೈಲ ಮತ್ತು ಅನಿಲ ಸೇರಿದಂತೆ ವ್ಯಾಪಕವಾದ ಮಾರಾಟದ ಪ್ರಮುಖ ವಲಯಗಳು ಹಾಗೆ ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌ನಂತಹ ಪ್ರಮುಖ ಕಂಪನಿಗಳು ಸಹ ಗಮನಾರ್ಹ ಕುಸಿತವನ್ನು ಕಂಡಿವೆ.

ಸೆನ್ಸೆಕ್ಸ್ 78000ಕ್ಕೆ ತಲುಪಿದೆ
ಮಾರುಕಟ್ಟೆಯ ಚಂಚಲತೆಯನ್ನು ಅಳತೆ ಮಾಡುವ ಇಂಡಿಯಾ VIX ಸೂಚ್ಯಂಕವು 13% ರಷ್ಟು ಏರಿಕೆಯಾಗಿದೆ. ಇದು ಸಣ್ಣ-ಕ್ಯಾಪ್ ಮತ್ತು ಮಧ್ಯಮ ಷೇರುಗಳಲ್ಲಿ ವ್ಯಾಪಕ ಮಾರಾಟವನ್ನು ಪ್ರತಿಬಿಂಬಿಸುತ್ತದೆ. HDFC ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌ನಂತಹ ಹೆವಿವೇಯ್ಟ್‌ಗಳು ಕೆಂಪು ಬಣ್ಣದಲ್ಲಿ ವಹಿವಾಟು ನಡೆಸುತ್ತಿವೆ. ಇದರಿಂದಾಗಿ ಸೆನ್ಸೆಕ್ಸ್ 78,065 ಅಂಕಗಳ ಕನಿಷ್ಠ ಮಟ್ಟಕ್ಕೆ ಮತ್ತು ನಿಫ್ಟಿ 23,600 ಅಂಕಗಳ ಸಮೀಪ ತಲುಪಿದೆ.
ರಿಯಲ್ ಎಸ್ಟೇಟ್, ಮೆಟಲ್, ಪಿಎಸ್‌ಯು ಬ್ಯಾಂಕ್, ತೈಲ ಮತ್ತು ಅನಿಲ ವಲಯಗಳಲ್ಲಿ ದೊಡ್ಡ ಕುಸಿತವಾಗಿದೆ. ಇದರಲ್ಲಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಷೇರುಗಳು 7% ರಷ್ಟು ಕುಸಿದಿದ್ದು, HPCL, BPCL, ಬ್ಯಾಂಕ್ ಆಫ್ ಬರೋಡಾ, ಟಾಟಾ ಸ್ಟೀಲ್, ಅದಾನಿ ಎನರ್ಜಿ ಸಲ್ಯೂಷನ್ಸ್ ಮತ್ತು PNB ಆರಂಭಿಕ ವಹಿವಾಟಿನಲ್ಲಿ 4% ರಿಂದ 5% ರಷ್ಟು ಕುಸಿದಿದೆ. ಅದೇ ರೀತಿ, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್‌ನಂತಹ ದೊಡ್ಡ ಷೇರುಗಳು ಸಹ ಮಾರುಕಟ್ಟೆಯಲ್ಲಿ ಒತ್ತಡವನ್ನು ಸೃಷ್ಟಿ ಮಾಡಿವೆ.
ಷೇರು ಮಾರುಕಟ್ಟೆಯಲ್ಲಿ ಕುಸಿತಕ್ಕೆ ಕಾರಣವೇನು?
ಭಾರತದಲ್ಲಿ HMPVಯ ಪ್ರಕರಣಗಳು ದಾಖಲಾಗುತ್ತಿದ್ದಂತೆ, ಇದು ಸುದ್ದಿ ಹೂಡಿಕೆದಾರರ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಏಕೆಂದರೆ ಗಳಿಕೆಯ ನವೀಕರಣಗಳು ಮತ್ತು ಮೂರನೇ ತ್ರೈಮಾಸಿಕ ಫಲಿತಾಂಶಗಳ ನಿರೀಕ್ಷೆಗಳ ಮೇಲೆ ಅವರು ತಮ್ಮ ಗಮನವನ್ನ ಕೇಂದ್ರೀಕರಿಸಿದ್ದಾರೆ. ಇದಲ್ಲದೆ, ಟ್ರಂಪ್ ಅಧ್ಯಕ್ಷರಾಗುವುದಕ್ಕೆ ಸಂಬಂಧಿಸಿದ ಭೌಗೋಳಿಕ-ರಾಜಕೀಯ ಘಟನೆಗಳು ಮತ್ತು ಘಟನೆಗಳ ಮೇಲೆ ನಿಕಟವಾದ ವೀಕ್ಷಣೆ ಇದೆ.
ಬೆಂಗಳೂರಿನಲ್ಲಿ HMPVಯ ಮೊದಲ ಪ್ರಕರಣ
ಬೆಂಗಳೂರಿನಲ್ಲಿ ಮೊದಲ HMPVಯ ಪ್ರಕರಣ ದಾಖಲಾಗಿದ್ದು, ಬೆಂಗಲೂರಿನ ಎರಡು ತಿಂಗಳ ಮಗುವಿನಲ್ಲಿ ಈ ವೈರಸ್ ಪತ್ತೆಯಾಗಿದೆ. ಯಾವುದೇ ಪ್ರಯಾಣದ ಇತಿಹಾಸವಿಲ್ಲದಿದ್ದರೂ ಕೂಡ ಮಗುವಿನಲ್ಲಿ ವೈರಸ್ ಪತ್ತೆಯಾಗಿದೆ. ಸಧ್ಯ ಈ ಮಗು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಅಲ್ಲದೆ ಮಗುವಿನ ಈಗ ಸಧ್ಯದ ಪರಿಸ್ಥಿತಿಯನ್ನ ಕಂಡು ಆರೋಗ್ಯ ಸಚಿವಾಲಯ ಭಯಪಡುವ ಅಗತ್ಯ ಇಲ್ಲ ಎಂದು ತಿಳಿಸಿದೆ. ಇನ್ನು ಭಾರತವು ವಿವಿಧ ಚಾನೆಲ್‌ಗಳ ಮೂಲಕ ಜಾಗತಿಕ HMPV ಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ.
ಸಚಿವಾಲಯವು HMPV ಪ್ರಕರಣಗಳಿಗೆ ಲ್ಯಾಬ್ ಪರೀಕ್ಷೆಯನ್ನು ಹೆಚ್ಚಿಸಲು ಮುಂದಾಗಿದೆ. ಇದರ ಜೊತೆಗೆ ವರ್ಷವೆಲ್ಲಾ HMPV ಟ್ರೆಂಡ್‌ಗಳನ್ನು ಪರಿಶೀಲನೆ ಮಾಡಲು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR)ಗೆ ವಹಿಸಿದೆ. ಅಲ್ಲದೆ, ವಿಶ್ವ ಆರೋಗ್ಯ ಸಂಸ್ಥೆ (WHO) ಕೂಡ ಈ ಕುರಿತು ಸಾಕಷ್ಟು ಕ್ಮಗಳನ್ನ ತೆಗೆದುಕೊಳ್ಳಲು ಮುಂದಾಗಿದೆ.
ಇನ್ನು HMPV ಈಗಾಗಲೇ ಭಾರತ ಸೇರಿದಂತೆ ಜಾಗತಿಕವಾಗಿ ಚಲಾವಣೆಯಲ್ಲಿದೆ ಹಾಗೆ HMPV ಯೊಂದಿಗೆ ಸಂಬಂಧಿಸಿದ ಉಸಿರಾಟದ ಕಾಯಿಲೆಗಳು ವಿವಿಧ ದೇಶಗಳಲ್ಲಿ ವರದಿಯಾಗಿವೆ ಎಂದು ತಿಳಿದುಬಂದಿದೆ .


Click it and Unblock the Notifications