ಭಾರತದ ಷೇರು ಮಾರುಕಟ್ಟೆ ಇಂದು ಭಾರೀ ಕುಸಿತ ಕಂಡಿವೆ.ಸೆನ್ಸೆಕ್ಸ್, ನಿಫ್ಟಿ ಸೇರಿದಂತೆ ಬಿಎಸ್ಇ ಮತ್ತು ಎನ್ಎಸ್ಇಯ ಬಹುತೇಕ ಎಲ್ಲಾ ಸೂಚ್ಯಂಕಗಳು ಕೆಂಪು ಬಣ್ಣದೊಂದಿಗೆ ಇಂದು ಮಾರುಕಟ್ಟೆ ಮುಚ್ಚಿದ್ದೇವೆ. ಹಾಗಿದ್ರೆ ಇಂದಿನ ಷೇರು ಮಾರುಕಟ್ಟೆಯ ಷೇರುಗಳು ಕುಸಿತಕ್ಕೆ ಪ್ರಮುಖ ಕಾರಣವೇನು? ಇಲ್ಲಿದೆ ಹೆಚ್ಚಿನ ಮಾಹಿತಿ
ಇಂದಿನ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೊಡಿದಾರರಿಗೆ ನಡುಕ ಹುಟ್ಟಿಸಿದೆ.ಹೌದು, ಇಂದಿನ ಸೆಷನ್ ನಲ್ಲಿ ಬಿಎಸ್ಇ ಸೆನ್ಸೆಕ್ಸ್ 1,064 ಅಂಕಗಳಷ್ಟು ಕುಸಿತ ಕಂಡು 80,684 ಅಂಕಗಳ ಮಟ್ಟ ಮುಟ್ಟಿದೆ. ಸೆನ್ಸೆಕ್ಸ್ ಮಾತ್ರವಲ್ಲ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನ ಎಲ್ಲಾ ಸೂಚ್ಯಂಕಗಳೂ ಇಳಿಕೆ ಕಂಡಿವೆ. ಟೆಲಿಕಾಂ ಸೆಕ್ಟರ್ನ ಇಂಡೆಕ್ಸ್ ಶೇ. 2ಕ್ಕಿಂತಲೂ ಹೆಚ್ಚು ಕುಸಿತ ಕಂಡಿದೆ.

ಇನ್ನೂ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ ಪ್ರಧಾನ ಇಂಡೆಕ್ಸ್ ಆದ ನಿಫ್ಟಿ50 ಇಂದು 332 ಅಂಕಗಳನ್ನು ಕೈಬಿಟ್ಟಿದೆ. ಇತರ ಎಲ್ಲಾ ಸೂಚ್ಯಂಕಗಳೂ ಕೂಡ ನಷ್ಟ ಕಂಡಿವೆ.
ಭಾರತೀಯ ಷೇರುಪೇಟೆ ಕುಸಿತಕ್ಕೆ ಪ್ರಮುಖ ಕಾರಣಗಳು
ನಾಳೆ ಅಮೆರಿಕದ ಫೆಡರಲ್ ರಿಸರ್ವ್ ಸಂಸ್ಥೆ ಸಭೆ
ಅಮೆರಿಕದ ಫೆಡರಲ್ ರಿಸರ್ವ್ ಸಂಸ್ಥೆ ನಾಳೆ ಬುಧವಾರ ಬಡ್ಡಿ ಕಡಿಮೆ ಮಾಡಬಹುದು ಅಥವಾ ಬೇಡವೋ ಎಂಬ ನಿರ್ಧಾರವನ್ನು ಕೈಗೊಳ್ಳಲಿದೆ.ಇದರಿಂದ ಮಾರುಕಟ್ಟೆಯಲ್ಲಿ ಶೇ. 0.25ರಷ್ಟು ಬಡ್ಡಿ ಇಳಿಕೆ ಆಗಬಹುದು ಎಂಬ ಯೋಜನೆಯಲ್ಲಿ ಹೊಡಿಕೆದಾರರು ಇದ್ದಾರೆ. ಅಂದಾಜು ಇಲ್ಲದಿಂದರಿಂದ ಷೇರು ಮಾರುಕಟ್ಟೆ ಇಂದು ಕುಸಿತ ಕಂಡಿರಬಹುದು.
ಡಾಲರ್ ಮೌಲ್ಯ ಹೆಚ್ಚಳ
ದೇಶೀಯ ಷೇರು ಮಾರುಕಟ್ಟೆಯಲ್ಲಿ ಇಂದು ಜಾಗತಿಕ ದುರ್ಬಲ ಸೂಚನೆಗಳಿಂದಾಗಿ ಕುಸಿತಕ್ಕೆ ಕಾರಣವಾಯಿತು. ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಕುಸಿದಿತ್ತು. ಜೊತೆಗೆ ಬ್ಯಾಂಕಾಂಕ್ ಷೇರುಗಳು ಕುಸಿದಿದ್ದು, ಯುಎಸ್ ಫೆಡರಲ್ ರಿಸರ್ವ್ ನಿರ್ಧಾರದ ಮೇಲೆ ಹೂಡಿಕೆದಾರರು ಫೋಕಸ್ ಆಗಿದ್ದಾರೆ.
ಯುಎಸ್ ಡಾಲರ್ ಬಲಗೊಂಡಷ್ಟು ಹೂಡಿಕೆದಾರರಿಗೆ ರಿಸ್ಕ್ ಆಗಿದೆ. ಅದ್ರಲ್ಲೂ ಬಲವಾದ ಡಾಲರ್ ಮತ್ತು ಬಾಂಡ್ ಇಳುವರಿ ಉದಯೋನ್ಮುಕ ಮಾರುಕಟ್ಟೆಗಳಾದ ಭಾರತದಂತಹ ರಾಷ್ಟ್ರಗಳಿಂದ ವಿದೇಶಿ ಬಂಡವಾಳ ಹೊರಹರಿವು ಹೆಚ್ಚಾಗುವಂತೆ ಪ್ರೇರೇಪಿಸಿದೆ.ಅದು ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿರಬಹುದು.
ಹಣದುಬ್ಬರ ಏರಿಕೆ
ಯುಎಸ್ ಗ್ರಾಹಕ ಬೆಲೆ ಸೂಚ್ಯಂಕ (CPI) ಹಣದುಬ್ಬರುವ ಕಳೆದ 7 ತಿಂಗಳಿನಲ್ಲಿಯೇ ತೀಕ್ಷ್ಣವಾದ ಏರಿಕೆಯನ್ನು ದಾಖಲಿಸಿದೆ. ಹಣದುಬ್ಬರದ ಏರಿಕೆಯು ನೀತಿ ನಿರೂಪಕರಿಗೆ, ಫೆಡರಲ್ ರಿಸರ್ವ್‌ಗೆ ಪ್ರಮುಖ ಸವಾಲಾಗಿದೆ. ಯುಎಸ್ ಗ್ರಾಹಕ ಬೆಲೆ ಸೂಚ್ಯಂಕ (CPI) ನವೆಂಬರ್‌ನಲ್ಲಿ 2.7 ಪರ್ಸೆಂಟ್‌ಗೆ ಏರಿಕೆಯಾಗಿದೆ. ಇದರಿಂದಲ್ಲೂ ಇಂದು ಷೇರು ಮಾರುಕಟ್ಟೆ ಕುಸಿತ ಕಂಡಿರಬಹುದು.
ವಿದೇಶಿ ಬಂಡವಾಳ
ಭಾರತೀಯ ಷೇರು ಮಾಡುಕಟ್ಟೆ ಈಕ್ವಿಟಿಯಲ್ಲಿ ಕಳೆದ ಎರಡು ತಿಂಗಳಿನಲ್ಲಿ ಭಾರೀ ಮಾರಾಟ ಕಂಡುಬಂದಿದೆ. ಮಾರಾಟದ ಬಳಿಕ ನವೆಂಬರ್ ತಿಂಗಳಿನಲ್ಲಿ ಕೆಲವು ವಹಿವಾಟುಗಳಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು(ಎಫ್‌ಐಐ) ಈಕ್ವಿಟಿಗಳನ್ನು ಖರೀದಿಗೆ ಮುಂದಾಗಿದ್ದರು. ಆದರೆ ಈಗ ಅವರು ಮತ್ತೊಮ್ಮೆ ಭಾರತೀಯ ಷೇರು ಮಾರುಕಟ್ಟೆಯಿಂದ ಬರಲು ಶುರು ಮಾಡಿದ್ದಾರೆ. ಭಾರತೀಯ ಷೇರುಪೇಟೆಯಲ್ಲಿ ಕಳೆದ ಎರಡು ದಿನಗಳ ಸೆಷನ್‌ನಲ್ಲಿ ಎಫ್‌ಐಐ ಸುಮಾರು 4,500 ಕೋಟಿ ರೂಪಾಯಿ ಮೌಲ್ಯದ ಷೇರುಗಲನ್ನು ಮಾರಾಟ ಮಾಡಿದ್ದಾರೆ. ಡಿಸೆಂಬರ್ ಮೊದಲಾರ್ಧದಲ್ಲಿ ವಿದೇಶೀ ಹೂಡಿಕೆದಾರರಿಂದ ಹೆಚ್ಚಿನ ಬಂಡವಾಳ ಹರಿದುಬಂದಿತ್ತು. ನಿನ್ನೆಯಿಂದ ಎಫ್ಐಐಗಳು ಭಾರತೀಯ ಈಕ್ವಿಟಿಗಳಿಂದ ಹೂಡಿಕೆ ಹೊರತೆಗೆದಿದ್ದೇ ಹೆಚ್ಚು. ಇದು ಸಹ ಇಂದಿನ ಷೇರು ಕುಸಿತಕ್ಕೆ ಕಾರಣವಾಗಿರಬಹುದು.
ಇಂದು ರಿಲಾಯನ್ಸ್ ಇಂಡಸ್ಟ್ರೀಸ್, ಏರ್ಟೆಲ್, ನೆಸ್ಲೆ, ಎಲ್ ಅಂಡ್ ಟಿ, ಬಜಾಜ್ ಫಿನ್ಸರ್ವ್, ಎಚ್ಡಿಎಫ್ಸಿ ಬ್ಯಾಂಕ್, ಟೈಟಾನ್ ಮೊದಲಾದ ದೊಡ್ಡ ದೊಡ್ಡ ಸ್ಟಾಕುಗಳು ಭಾರೀ ಪ್ರಮಾಣದಲ್ಲಿ ಮಾರಾಟ ಕಂಡಿವೆ. ಇದರಿಂದ ಭಾರತೀಯ ಷೇರು ಮಾರುಕಟ್ಟೆ ಕುಸಿತ ಕಾಣಲು ಕಾರಣವಾಗಿರವಹುದು.


Click it and Unblock the Notifications