ದೇಶೀಯ ಷೇರು ಮಾರುಕಟ್ಟೆಯು ಸತತ ಐದನೇ ದಿನದಿಂದಲೇ ಕುಸಿತ ಕಾಣತ್ತಲೇ ಇದೆ. ಇಂದು ಷೇರು ಮಾರುಕಟ್ಟೆಯ ಸ್ಟಾಕ್ ಎಕ್ಸ್‌ಚೇಂಜ್ ಆದ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಸೆನ್ಸೆಕ್ಸ್ 1018 ಅಂಕಗಳು ಕುಸಿತಗೊಂಡಿದ್ದು, ನಿಫ್ಟಿ ಸೂಚ್ಯಂಕವು 309 ಅಂಕಗಳ ಇಳಿಕೆಯನ್ನು ಕಂಡಿದೆ.
ಹೌದು,ಇಂದಿನ ಷೇರು ಮಾರುಕಟ್ಟೆಯ ದಿನದ ವಹಿವಾಟುವಿನ ಅಂತ್ಯಕ್ಕೆ ಸೆನ್ಸೆಕ್ಸ್ 1018.20 ಅಂಕಗಳು ಇಳಿಕೆಗೊಂಡು 76,293.60 ಮಾರ್ಕ್‌ನಲ್ಲಿ ಮಾರುಕಟ್ಟೆ ಮುಚ್ಚಿದೆ. ನಿಫ್ಟಿ ಸೂಚ್ಯಂಕವು 309.80 ಅಂಕಗಳಲ್ಲಿ ಕೊನೆಗೊಂಡು 23,071.80 ಮಾರ್ಕ್‌ನಲ್ಲಿ ಅಂತ್ಯಗೊಂಡಿದೆ. ಹಾಗಿದ್ರೆ ಇಂದು ಯಾವೆಲ್ಲಾ ಷೇರುಗಳು ಕುಸಿತವನ್ನು ಕಂಡವು ಯಾರಿಗೆ ನಷ್ಟ ಯಾರಿಗೆ ಲಾಭ? ಷೇರುಮಾರಕಟ್ಟೆ ಕುಸಿತ ಕಾಣಲು ಇರುವ ಕಾರಣಗಳೇನು ಎಂಬ ಹೆಚ್ಚಿನ ಮಾಹಿತಿ ಈ ಲೇಖನದಲ್ಲಿ ತಿಳಿಯೋಣ ಬನ್ನಿ....

ಇಂದಿನ ಷೇರುಪೇಟೆಯಲ್ಲಿ 516 ಷೇರುಗಳು ಏರಿಕೆಗೊಂಡಿದ್ದು, 3330 ಷೇರುಗಳು ಕುಸಿದಿವೆ ಮತ್ತು 92 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ.
ವಿದೇಶಿ ಬಂಡವಾಳ
ಭಾರೀ ಪ್ರಮಾಣದಲ್ಲಿ ವಿದೇಶಿ ಬಂಡವಾಳ ಹೊರಹರಿವು ಭಾರತೀಯ ಷೇರುಪೇಟೆಯಲ್ಲಿ ಕಂಡು ಬರುತ್ತಿದೆ. ಕಳೆದ ವರ್ಷ ಅಕ್ಟೋಬರ್‌ನಿಂದ ಭಾರೀ ಮಾರಾಟಕ್ಕೆ ಸಾಕ್ಷಿಯಾಗಿದ್ದು, ನಿರಂತರವಾಗಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಈಕ್ವಿಟಿ ಮಾರುತ್ತಿದ್ದಾರೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಬರೋಬ್ಬರಿ 12,643 ಕೋಟಿ ರೂಪಾಯಿ ಮೌಲ್ಯದ ಈಕ್ವಿಟಿ ಮಾರಾಟ ಮಾಡಿದ್ದಾರೆ. ಅಕ್ಟೋಬರ್‌ನಿಂದ ಈಚೆಗೆ ಭಾರತೀಯ ಈಕ್ವಿಟಿ ಮಾರುಕಟ್ಟೆಯಲ್ಲಿ 2.75 ಲಕ್ಷ ಕೋಟಿ ರೂಪಾಯಿ ಮಾರಾಟ ಕಂಡುಬಂದಿದೆ. ಇದು ಸಹ ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿರಬಹುದು.
ಡಾಲರ್ ಎದುರು ರೂಪಾಯಿ ಮೌಲ್ಯ ದುರ್ಬಲವಾಗುತ್ತಿದೆ
ಯುಎಸ್ ಡಾಲರ್ ಎದುರು ಭಾರತೀಯ ರೂಪಾಯಿ ಇಂದು ಸಹ ಕುಸಿತ ಕಂಡಿದೆ. ರೂಪಾಯಿ ದುರ್ಬಲಗೊಂಡಿರುವುದು ಸಹ ವಿದೇಶಿ ಹೂಡಿಕೆದಾರರ ಬಂಡವಾಳಕ್ಕೆ ಹೆಚ್ಚಿನ ಪ್ರೇರಣೆಯನ್ನು ನೀಡುತ್ತಿದ್ಧಾರೆ ಇಂದು ಸಹ ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಬಹುದು.
ಟ್ರಂಪ್ ತೆರಿಗೆ ಯುದ್ಧ
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ವಾರದ ಶುಕ್ರವಾರ ತೆರಿಗೆ ಏರಿಕೆ ಹೇಳಿಕೆಯು ಹೂಡಿಕೆದಾರರು ಹೂಡಿಕೆ ಮಾಡಲು ಹಿಂದೇಟು ಆಗುತ್ತಿದ್ದಾರೆ.ಇದರಿಂದಲ್ಲೂ ಸಹ ಮಾರುಕಟ್ಟೆ ಕುಸಿತ ಕಂಡಿರಬಹುದು.
ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಅವರ ಪ್ರಕಾರ, ಅಮೆರಿಕದ ವ್ಯಾಪಾರ ನೀತಿಗಳು ಮತ್ತು ಸುಂಕಗಳ ಸುತ್ತಲಿನ ನಡೆಯುತ್ತಿರುವ ಅನಿಶ್ಚಿತತೆ, ದೇಶೀಯ ಆರ್ಥಿಕ ಬೆಳವಣಿಗೆ ಕುಸಿತ ಮತ್ತು ಎಫ್‌ಐಐಗಳ ನಿರಂತರ ಮಾರಾಟವು ಮಾರುಕಟ್ಟೆ ಕುಗ್ಗಿಸುತ್ತಿದೆ ಎಂದು ಹೇಳಿದ್ದಾರೆ.
ಯಾವೆಲ್ಲಾ ಷೇರುಗಳು ಇಂದು ಕುಸಿತ ಕಂಡವು?
ಭಾತರೀಯ ಷೇರುಪೇಟೆಯಲ್ಲಿ ನಿಫ್ಟಿ ಸೂಚ್ಯಂಕ ಅಪೊಲೊ ಹಾಸ್ಪಿಟಲ್ಸ್, ಈಚರ್ ಮೋಟಾರ್ಸ್, ಶ್ರೀರಾಮ್ ಫೈನಾನ್ಸ್, ಕೋಲ್ ಇಂಡಿಯಾ, ಭಾರತ್ ಎಲೆಕ್ಟ್ರಾನಿಕ್ಸ್, ಟಾಪ್ ಲೂಸರ್‌ಗಳು, ಅದಾನಿ ಎಂಟರ್ ಪ್ರೈಸಸ್, ಟ್ರೆಂಟ್, ಭಾರ್ತಿ ಏರ್‌ಟೆಲ್, ಗ್ರೇಸಿಯಂ ಇಂಡಸ್ಟ್ರೀಸ್ ಟಾಪ್ ಗೇನರ್‌ಗಳಾಗಿವೆ.ಇಂದು ಬಹುತೇಕ ಎಲ್ಲಾ ವಲಯಗಳು ರೆಡ್ ಮಾರ್ಕ್‌ನಲ್ಲಿ ಮಾರಕಟ್ಟೆ ಮುಚ್ಚಿದ್ದವು.
ಆಟೋ, ಕನ್ಸೂಮರ್ ಡ್ಯೂರೇಬಲ್ಸ್, ಕ್ಯಾಪಿಟಲ್ ಗೂಡ್ಸ್, ಆಯಿಲ್ ಮತ್ತು ಗ್ಯಾಸ್, ಎನರ್ಜಿ, ಎಫ್‌ಎಂಸಿಜಿ, ಹೆಲ್ತ್‌ಕೇರ್, ಪವರ್, ಪಿಎಸ್‌ಯು, ರಿಯಾಲ್ಟಿ ಸೂಚ್ಯಂಕವು 2 ರಿಂದ 3 ಪರ್ಸೆಂಟ್ ಕುಸಿದಿದೆ. ನಿಫ್ಟಿ ಮಿಡ್‌ಕ್ಯಾಪ್ ಸೂಚ್ಯಂಕವು 3 ಪರ್ಸೆಂಟ್ ಇಳಿಕೆಯಾಗಿವೆ. ಇನ್ನೂ ಸ್ಮಾಲ್‌ಕ್ಯಾಪ್ ಸೂಚ್ಯಂಕದಲ್ಲಿ ಶೇ.3.5 ನಷ್ಟವನ್ನು ಅನುಭವಿಸಿದ್ದವೆ.
ನಾಯರ್ ಪ್ರಕಾರ ಷೇರು ಮರುಕಟ್ಟೆಯಲ್ಲಿ ಹೆಚ್ಚಿನ ಮೌಲ್ಯಮಾಪನಗಳಿಂದಾಗಿ ಮಧ್ಯಮ ಮತ್ತು ಸಣ್ಣ-ಕ್ಯಾಪ್ ಷೇರುಗಳು ಗಮನಾರ್ಹ ಕುಸಿತವನ್ನು ಅನುಭವಿಸಿದವು ಎಂದು ಅವರು ಹೇಳಿದ್ದಾರೆ.
ಆರ್‌ಬಿಐನ ಹಸ್ತಕ್ಷೇಪವು ನಿನ್ನೆಯ ದಾಖಲೆಯ ಕನಿಷ್ಠ ಮಟ್ಟದಿಂದ ರೂಪಾಯಿಗೆ ಸ್ವಲ್ಪ ಚೇತರಿಕೆ ನೀಡಿದ್ದರೂ ಮಾರುಕಟ್ಟೆ ಕುಸಿತವನ್ನು ಕಂಡಿದೆ.
More From GoodReturns

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಷೇರು ಮಾರುಕಟ್ಟೆ ಇಂದು ಭರ್ಜರಿ ಏರಿಕೆ: ಹೂಡಿಕೆದಾರರಿಗೆ ಬಂಪರ್ ಲಾಭ?

ಆರ್ಬಿಐ ನಿರ್ಧಾರದ ಮುನ್ನ ನಿಮ್ಮ ಹಣ ಸುರಕ್ಷಿತವೇ?

ಷೇರು ಮಾರುಕಟ್ಟೆ ಕುಸಿತದ ಭೀತಿ: ಹೂಡಿಕೆದಾರರೇ ಎಚ್ಚರವಿರಲಿ!

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!



Click it and Unblock the Notifications