ಭಾರತೀಯ ಷೇರು ಮಾರುಕಟ್ಟೆಯ ಸ್ಟಾಕ್ ಎಕ್ಸ್ ಚೇಂಜ್ಗಳಾದ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ (BSE) ಮತ್ತು ನ್ಯಾಷನಲ್ ಸ್ಟಾಕ್ಎಕ್ಸ್ ಚೇಂಜ್ (NSE)ನ ಹೊಸ ವಷ೯ 2025ರ ವ್ಯಾಪಾರದ ವಹಿವಾಟುವಿನ ರಜೆದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. 2025 ರಲ್ಲಿ ಸ್ಟಾಕ್ ಮಾರುಕಟ್ಟೆಯು ಒಟ್ಟು 14 ದಿನಗಳವರೆಗೆ ಮುಚ್ಚಲ್ಪಟಿರುತ್ತದೆ. ಹಾಗಿದ್ರೆ ಷೇರು ಯಾವ ದಿನಗಳಲ್ಲಿ ಬಂದ್ ಆಗಿರುತ್ತವೆ ಇಲ್ಲಿದೆ ಸಂಪೂರ್ಣ ಪಟ್ಟಿ
ಹೌದು, ಭಾರತೀಯ ಷೇರು ಮಾರುಕಟ್ಟೆ ಸಾಮಾನ್ಯವಾಗಿ ವಾರಕ್ಕೆ 5 ದಿನ ವಹಿವಾಟು ನಡೆಸುತ್ತದೆ.ವ್ಯಾಪಾರಿಗಳು ತಮ್ಮ ವ್ಯಾಪಾರ ಚಟುವಟಿಕೆಗಳನ್ನು ಅದಕ್ಕೆ ಅನುಗುಣವಾಗಿ ಪ್ಲಾನ್ ಮಾಡಲು ಮಾರುಕಟ್ಟೆಯ ರಜಾದಿನಗಳು ಮುಖ್ಯವಾಗುತ್ತದೆ.

ಜನವರಿ:
ಭಾರತೀಯ ಷೇರು ಮಾರುಕಟ್ಟೆಯಲ್ಲಿ ಜನವರಿಯಲ್ಲಿ ಯಾವುದೇ ವಿಶೇಷ ವ್ಯಾಪಾರ ರಜಾದಿನಗಳಿಲ್ಲ. ಜನವರಿ 26 ರಂದು ನಡೆಯುವ ಗಣರಾಜ್ಯೋತ್ಸವದ ರಾಷ್ಟ್ರೀಯ ರಜಾದಿನವು ಭಾನುವಾರ ಬಂದಿರುವುದರಿಂದ ಷೇರು ಮಾರುಕಟ್ಟೆಗೆ ಯಾವುದೇ ವಿಶೇಷ ರಜಾದಿನಗಳು ಇರುವುದಿಲ್ಲ.
ಫೆಬ್ರವರಿ:
ಫೆಬ್ರವರಿ 26 ರಂದು ನಡೆಯುವ ಮಹಾಶಿವರಾತ್ರಿಯ ಆಚರಣೆಗೆ ಷೇರು ಮಾರುಕಟ್ಟೆ ಒಂದು ದಿನ ಬಂದ್ ಅಗಿರುತ್ತದೆ. ಈ ದಿನ ಷೇರು ಮಾರುಕಟ್ಟೆ ಒಂದು ವಿಶೇಷ ರಜೆಯನ್ನು ಹೊಂದಿರುತ್ತದೆ.ಇದು ವಾರಾಂತ್ಯದ ರಜಾದಿನಗಳನ್ನು ಹೊರತುಪಡಿಸಿ ರಜೆ ಇರುತ್ತದೆ.
ಮಾರ್ಚ್:
ಮಾರ್ಚ್ ತಿಂಗಳಲ್ಲಿ ಎರಡು ರಜಾದಿನಗಳಿವೆ. ಒಂದು ಮಾರ್ಚ್ 14 ರಂದು ಹೋಳಿ ಆಚರಣೆಗೆ, ಮತ್ತು ಎರಡನೆಯದು ಮಾರ್ಚ್ 31 ರ ರಂಜಾನ್ ಈದ್ ಹಬ್ಬಕ್ಕೆ ರಜೆ ಇರುತ್ತಾದೆ. ಈ ಎರಡು ದಿನ ಷೇರು ಮಾರುಕಟ್ಟೆ ಬಂದ್ ಆಗಿರುತ್ತದೆ.
ಏಪ್ರಿಲ್ :
FY26 ರ ಪ್ರಾರಂಭ ವಾಗಿರುವುದರಿಂದ ಏಪ್ರಿಲ್ 10 ರಂದು ಮಹಾವೀರ ಜಯಂತಿ, ಏಪ್ರಿಲ್ 14 ರಂದು ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ, ಏಪ್ರಿಲ್ 18ರಂದು ಶುಭ ಶುಕ್ರವಾರವಿರುವುದು ಷೇರು ಮಾರುಕಟ್ಟೆ ಮೂರುದಿನ ಬಂದ್ ಆಗಲಿದ್ದು,ಏಪ್ರಿಲ್ ತಿಂಗಳಲ್ಲಿ ಭಾರೀ ರಜೆ ದಿನಗಳು ಇವೆ.
ಮೇ :
ಬಿಎಸ್‌ಇ ಮತ್ತು ಎನ್‌ಎಸ್‌ಇ ಪ್ರಧಾನ ಕಛೇರಿ ಮುಂಬೈನಲ್ಲಿ ಇರುವುದರಿಂದ, ಮಹಾರಾಷ್ಟ್ರ ದಿನದ ಸಂದರ್ಭದ ಕಾರಣ ಮೇ 1 ರಂದು ಮಾರುಕಟ್ಟೆಯನ್ನು ಮುಚ್ಚಲಾಗುತ್ತದೆ.
ಜೂನ್ ಮತ್ತು ಜುಲೈ ತಿಂಗಳು
ಜೂನ್ ಮತ್ತು ಜುಲೈ ತಿಂಗಳಲ್ಲಿ ವ್ಯಾಪಾರಕ್ಕೆ ಯಾವುದೇ ವಿಶೇಷ ರಜಾದಿನಗಳಿಲ್ಲ. ಗಮನಾರ್ಹವಾಗಿ, ಷೇರು ಮಾರುಕಟ್ಟೆಯು ವಾರಾಂತ್ಯದಲ್ಲಿ ಮುಚ್ಚಲಾಗುವುದು.
ಆಗಸ್ಟ್:
ರಾಷ್ಟ್ರೀಯ ರಜಾ ದಿನವಾದ ಸ್ವಾತಂತ್ರ್ಯ ದಿನದ ಕಾರಣ ಆಗಸ್ಟ್ 15 ರಂದು ಮಾರುಕಟ್ಟೆಯನ್ನು ಮುಚ್ಚಲಾಗುತ್ತದೆ. ಇದೇ ತಿಂಗಳು ಗಣೇಶ ಚತುರ್ಥಿಗೆ ಆಗಸ್ಟ್ 27ರಂದು ಮಾರುಕಟ್ಟೆ ಬಂದ್ ಆಗಲಿದೆ.
ಸೆಪ್ಟೆಂಬರ್:
ಸೆಪ್ಟೆಂಬರ್ ತಿಂಗಳು ಮಾರುಕಟ್ಟೆಗೆ ಯಾವುದೇ ವಿಶೇಷ ರಜೆ ಇರುವುದಿಲ್ಲ.
ಅಕ್ಟೋಬರ್:
ರಾಷ್ಟ್ರೀಯ ರಜಾದಿನವಾದ ಮಹಾತ್ಮ ಗಾಂಧಿ ಜಯಂತಿಯ ಕಾರಣ ಅಕ್ಟೋಬರ್ 2 ರಂದು ವ್ಯಾಪಾರವನ್ನು ಮುಚ್ಚಲಾಗುತ್ತದೆ. ಅಲ್ಲದೆ, ದಸರಾವನ್ನು ಅಕ್ಟೋಬರ್ 2 ರಂದು ಆಚರಿಸಲಾಗುತ್ತದೆ. ಇದಲ್ಲದೆ, ದೀಪಾವಳಿ ಲಕ್ಷ್ಮೀ ಪೂಜೆಯ ಕಾರಣ ಅಕ್ಟೋಬರ್ 21 ರಂದು ಮಾರುಕಟ್ಟೆಯನ್ನು ಮುಚ್ಚಲಾಗುತ್ತದೆ ಆದರೆ ದಿನದಂದು ಅದರ 1 ಗಂಟೆಯ ಮುಹೂರ್ತದ ವಹಿವಾಟು ಇರುತ್ತದೆ. ಅಕ್ಟೋಬರ್ 22 ರಂದು ದೀಪಾವಳಿ ಬಲಿಪಾಡ್ಯಮಿಯಂದು ಮಾರುಕಟ್ಟೆಯನ್ನು ಮುಚ್ಚಲಾಗುತ್ತದೆ. ಈ ತಿಂಗಳಲ್ಲಿ ಹೆಚ್ಚು ದಿನಗಳ ಕಾಲ ಷೇರು ಮಾರುಕಟ್ಟೆ ರಜೆ ಇರುತ್ತದೆ.
ನವೆಂಬರ್ :
ಗುರುನಾನಕ್ ಜಯಂತಿಯ ಕಾರಣ ನವೆಂಬರ್ 5 ರಂದು ಕೇವಲ ಒಂದು ವಿಶೇಷ ರಜೆ ಇದೆ.
ಡಿಸೆಂಬರ್:
ಕ್ರಿಸ್ಮಸ್ ಆಚರಣೆಗಾಗಿ ಡಿಸೆಂಬರ್ 25 ರಂದು ಮಾರುಕಟ್ಟೆಯನ್ನು ಮುಚ್ಚಲಾಗುತ್ತದೆ. ಈ ವಿಶೇಷ ರಜಾದಿನಗಳಲ್ಲಿ, BSE ಮತ್ತು NSE ನಲ್ಲಿ F&O, ಈಕ್ವಿಟಿ, ಉತ್ಪನ್ನಗಳು, ಬಾಂಡ್‌ಗಳು ಮತ್ತು ಸರಕುಗಳ ವ್ಯಾಪಾರವನ್ನು ಮುಚ್ಚಲಾಗುತ್ತದೆ.
ಆಕ್ಸಿಸ್ ಸೆಕ್ಯುರಿಟೀಸ್ ಪ್ರಕಾರ, 2025 ಬೆಸ ಸಂಖ್ಯೆಯಲ್ಲಿ ಕೊನೆಗೊಳ್ಳುವ ವರ್ಷವಾಗಿದೆ.


Click it and Unblock the Notifications