ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಗುರುವಾರ (ಫೆಬ್ರವರಿ 11, 2021) ಏರಿಕೆಯೊಂದಿಗೆ ದಿನಾಂತ್ಯದ ವ್ಯವಹಾರ ಮುಕ್ತಾಯವಾಗಿದೆ. ಸೆನ್ಸೆಕ್ಸ್ ಸೂಚ್ಯಂಕವು 223.13 ಪಾಯಿಂಟ್ ಹೆಚ್ಚಳವಾಗಿ, 51,531.52 ಪಾಯಿಂಟ್ಸ್ ಮತ್ತು ನಿಫ್ಟಿ 66.80 ಪಾಯಿಂಟ್ ಮೇಲೇರಿ, 15,173.30 ಪಾಯಿಂಟ್ ನೊಂದಿಗೆ ವಹಿವಾಟು ಚುಕ್ತಾ ಮಾಡಿದೆ.
ಈ ದಿನದ ವಹಿವಾಟಿನಲ್ಲಿ 1711 ಕಂಪೆನಿಯ ಷೇರುಗಳು ಏರಿಕೆಯಾದರೆ, 1229 ಕಂಪೆನಿಯ ಷೇರುಗಳು ಇಳಿಕೆ ಆಗಿವೆ. ಇನ್ನು 133 ಕಂಪೆನಿಯ ಷೇರುಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ವಾಹನ ಮತ್ತು ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳ ಷೇರುಗಳನ್ನು ಹೊರತುಪಡಿಸಿ ಉಳಿದ ವಲಯದ ಸೂಚ್ಯಂಕಗಳು ಏರಿಕೆಯಲ್ಲೇ ಮುಕ್ತಾಯಗೊಂಡಿವೆ.
ಬಿಎಸ್ ಇ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು 0.4ರಿಂದ 1 ಪರ್ಸೆಂಟ್ ಏರಿಕೆ ಕಂಡಿವೆ.
ನಿಫ್ಟಿಯಲ್ಲಿ ಏರಿಕೆ ಕಂಡ ಟಾಪ್ 5 ಷೇರುಗಳು ಮತ್ತು ಪರ್ಸೆಂಟ್
ಹಿಂಡಾಲ್ಕೋ 5.73%
ರಿಲಯನ್ಸ್ 4.12%
ಸನ್ ಫಾರ್ಮಾ 2.64%
ಅದಾನಿ ಪೋರ್ಟ್ಸ್ 2.60%
ಗೇಲ್ 2.13%

ನಿಫ್ಟಿಯಲ್ಲಿ ಇಳಿಕೆ ಕಂಡ ಟಾಪ್ 5 ಷೇರುಗಳು ಮತ್ತು ಪರ್ಸೆಂಟ್
ಐಷರ್ ಮೋಟಾರ್ಸ್ -2.87%
ಎನ್ ಟಿಪಿಸಿ -2.55%
ಟೈಟಾನ್ ಕಂಪೆನಿ -2.46%
ಲಾರ್ಸನ್ ಅಂಡ್ ಟೂಬ್ರೋ -1.44%
ಟಾಟಾ ಮೋಟಾರ್ಸ್ -1.19%


Click it and Unblock the Notifications