For Quick Alerts
ALLOW NOTIFICATIONS  
For Daily Alerts

ಭಾರತದ ಏಳು ಮೌಲ್ಯಯುತ ಕಂಪೆನಿಗಳ 59,259.58 ಕೋಟಿ ರು. ಐದು ದಿನದಲ್ಲಿ ಉಡೀಸ್

|

ಭಾರತದ ಹತ್ತು ಮೌಲ್ಯಯುತ ಕಂಪೆನಿಗಳ ಪೈಕಿ ಏಳರ ಮಾರುಕಟ್ಟೆ ಮೌಲ್ಯವು 59,259.58 ಕೋಟಿ ರುಪಾಯಿ ಕಳೆದ ವಾರ (ಸೆಪ್ಟೆಂಬರ್ 14ರಿಂದ 18ರ ಮಧ್ಯೆ ಐದು ದಿನದಲ್ಲಿ) ಕೊಚ್ಚಿಹೋಗಿದೆ. ಹಿಂದೂಸ್ತಾನ್ ಯುನಿಲಿವರ್, ಎಚ್ ಡಿಎಫ್ ಸಿ ಬ್ಯಾಂಕ್ ಹಾಗೂ ಕೊಟಕ್ ಮಹೀಂದ್ರಾ ಬ್ಯಾಂಕ್ ಕಂಪೆನಿಗಳು ಅತಿ ದೊಡ್ಡ ನಷ್ಟ ಕಂಡಿವೆ.

 

ಹಿಂದೂಸ್ತಾನ್ ಯುನಿಲಿವರ್, ಎಚ್ ಡಿಎಫ್ ಸಿ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಎಚ್ ಡಿಎಫ್ ಸಿ, ಐಟಿಸಿ ಹಾಗೂ ಐಸಿಐಸಿಐ ಬ್ಯಾಂಕ್ ನಷ್ಟ ಕಂಡಿವೆ. ಟಿಸಿಎಸ್, ಇನ್ಫೋಸಿಸ್ ಹಾಗೂ ಭಾರ್ತಿ ಏರ್ ಟೆಲ್ ಕಂಪೆನಿಯ ಮಾರುಕಟ್ಟೆ ಮೌಲ್ಯದಲ್ಲಿ ಏರಿಕೆ ಆಗಿದೆ.

 

ಯಾವ ಕಂಪೆನಿ ಮಾರುಕಟ್ಟೆ ಮೌಲ್ಯ ಎಷ್ಟು ನಷ್ಟವಾಗಿದೆ ಎಂಬ ವಿವರ ಹೀಗಿದೆ:
ಎಚ್ ಯುಎಲ್ 14,320.54 ಕೋಟಿ

ಎಚ್ ಡಿಎಫ್ ಸಿ ಬ್ಯಾಂಕ್ 11,611.6 ಕೋಟಿ

ಕೊಟಕ್ ಮಹೀಂದ್ರಾ ಬ್ಯಾಂಕ್ 10,205.11 ಕೋಟಿ

ರಿಲಯನ್ಸ್ 9,027.32 ಕೋಟಿ

ಎಚ್ ಡಿಎಫ್ ಸಿ 8,144.93 ಕೋಟಿ

ಐಟಿಸಿ 5,783.23 ಕೋಟಿ

ಐಸಿಐಸಿಐ ಬ್ಯಾಂಕ್ 166.85 ಕೋಟಿ

7 ಮೌಲ್ಯಯುತ ಕಂಪೆನಿಗಳ 59,259.58 ಕೋಟಿ ರು. 5 ದಿನದಲ್ಲಿ ಉಡೀಸ್

ಇನ್ನು ಟಿಸಿಎಸ್ ಮಾರುಕಟ್ಟೆ ಬಂಡವಾಳ ಮೌಲ್ಯ 28,912.12 ಕೋಟಿ, ಇನ್ಫೋಸಿಸ್ 24,342.45 ಕೋಟಿ ಹಾಗೂ ಭಾರ್ತಿ ಏರ್ ಟೆಲ್ 2,755.05 ಕೋಟಿ ಹೆಚ್ಚಳವಾಗಿದೆ.

English summary

Stock Market News: 7 Out Of 10 India's Most Valued Company Lost Market Value Of 59259 Crore

India's most valued 7 companies market valuation down by 59,259 crore between September 14 to 18, 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X