ವರ್ಷದ ಕೊನೆಯ ದಿನ ಕಹಿ. ಮೊದಲ ದಿನವೇ ಸಿಹಿ! ಹೌದು, ಭಾರತೀಯ ಷೇರು ಮಾರುಕಟ್ಟೆ (Stock Market) ವರ್ಷಾಂತ್ಯದ ಕೊನೆಯ ದಿನವನ್ನು ಕುಸಿತದೊಂದಿಗೆ ಅಂತ್ಯ ಮಾಡಿತ್ತು. ಆದರೆ, ಇಂದು ಷೇರು ಪೇಟೆ ಏರಿಕೆಯೊಂದಿಗೆ ಹೊಸ ವರ್ಷದ ಮೊದಲ ದಿನವನ್ನು ಶುಭಾರಂಭ ಮಾಡಿದೆ. ಇದು ಶುಭ ಸುದ್ದಿಯೇ ಸರಿ!
ಹೌದು, ಅಲ್ಪ ಪ್ರಮಾಣದ ಏರಿಕೆಯ ಮೂಲಕ ಭಾರತೀಯ ಷೇರು ಮಾರುಕಟ್ಟೆ ಹೊಸ ವರ್ಷದ ಮೊದಲ ದಿನದ ವಹಿವಾಟು ಅಂತ್ಯಗೊಳಿಸಿದ್ದು, ಭಾರತೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗ್ರೀನ್ ನಲ್ಲಿ ಇಂದಿನ ವಹಿವಾಟುವಿನ ವ್ಯಾಪಾರವನ್ನು ಮುಚ್ಚಿದೆ.

ಇಂದಿನ ವ್ಯಾಪಾರದ ವಾಹಿವಾಟುನಲ್ಲಿ ಭಾರತೀಯ ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಶೇ.0.47ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಶೇ.0.41ರಷ್ಟು ಏರಿಕೆ ದಾಖಲಿಸಿದೆ. ಸೆನ್ಸೆಕ್ಸ್ ಇಂದು 368.40 ಅಂಕಗಳ ಏರಿಕೆಯೊಂದಿಗೆ 78,507.41 ಅಂಕಗಳಿಗೆ ಏರಿದ್ದರೆ, ನಿಫ್ಟಿ 98.10 ಅಂಕಗಳ ಏರಿಕೆಯೊಂದಿಗೆ 23,742.90 ಅಂಕಗಳಿಗೆ ಏರಿಕೆಯಾಗಿ ದಿನದ ವಾಹಿವಾಟು ನಡೆಸಿದೆ
ಇಂದಿನ ಯಾವ ಷೇರಿಗೆ ಲಾಭ?
ಇಂದಿನ ಷೇರು ಪೇಟೆಯ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್, ಎಲ್ & ಟಿ, ರಿಲಯನ್ಸ್ ಇಂಡಸ್ಟ್ರೀಸ್, ಮತ್ತು ಮಹೀಂದ್ರಾ & ಮಹೀಂದ್ರಾ, ಮಾರುತಿ ಸುಜುಕಿ, ಪವರ್ ಮೆಕ್, ಸಂಸ್ಥೆಯ ಷೇರುಗಳು ಹೆಚ್ಚಿನ ಲಾಭವನ್ನು ಪಡೆದುಕೊಂಡಿವೆ.
ಯಾವೆಲ್ಲಾ ಷೇರುಗಳಿಗೆ ನಷ್ಟ?
ಭಾರತೀಯ ಇಂದಿನ ಷೇರುಪೇಟೆಯಲ್ಲಿ, ಬಜಾಜ್ ಆಟೋ, ಪೇಟಿಎಂ, ಈಸಿ ಟ್ರಿಪ್, ಸಂಸ್ಥೆಯ ಷೇರುಗಳು ಇಂದಿನ ವ್ಯಾಪಾರದ ವಾಹಿವಾಟುವಿನಲ್ಲಿ ನಷ್ಟ ಅನುಭವಿಸಿವೆ.
2024ರಲ್ಲಿ ಶೇ.9ರಷ್ಟು ಏರಿಕೆ ಕಂಡ ಸೆನ್ಸೆಕ್ಸ್
ಭಾರತೀಯ ಷೇರುಪೇಟೆಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಕಳೆದ ಒಂದು ವರ್ಷದಲ್ಲಿ ಸರಾಸರಿ 9ರಷ್ಟು ಏರಿಕೆ ಕಂಡಿವೆ. ಅಂದರೆ 2024ರಲ್ಲಿ ಸೆನ್ಸೆಕ್ಸ್ ಶೇ.8.18 ರಷ್ಟು ಹಾಗೂ ನಿಫ್ಟಿ 8.76 ಏರಿಕೆಯನ್ನು ವಹಿವಾಟುವಿನಲ್ಲಿ ಕಂಡಿವೆ. 2024ರ ಸೆಪ್ಟೆಂಬರ್ 27 ರಂದು ಸೆನ್ಸೆಕ್ಸ್ ದಾಖಲೆಯ ಗರಿಷ್ಠ ಮಟ್ಟ 85,978ಕ್ಕೆ ತಲುಪಿತ್ತು. ಅದೇ ದಿನ ನಿಫ್ಟಿ ಕೂಡ 26,277 ರ ಗರಿಷ್ಠ ಮಟ್ಟವನ್ನು ತಲುಪಿ ದಾಖಲೆಯನ್ನು ಬರೆಯಿತು. ಇದಾದ ಬಳಿಕ ಮಾರುಕಟ್ಟೆಯೂ ಕುಸಿತದತ್ತ ಮುಖಮಾಡಿತು.
2024ರ ಜನವರಿ 1ರಂದು ಸೆನ್ಸೆಕ್ಸ್ 72,271.94 ಅಂಕಗಳೊಂದಿಗೆ ವರ್ಷದ ವಹಿವಾಟು ಆರಂಭಿಸಿತ್ತು. ಇದೀಗ 5,898.75 ಅಂಕಗಳು ಅಂದರೆ ಶೇ.8.16 ರಷ್ಟು ಏರಿಕೆಯೊಂದಿಗೆ 2025ಕ್ಕೆ ಕಾಲಿಟ್ಟಿದೆ. ಅಂತೆಯೇ ನಿಫ್ಟಿ ಕೂಡ 2024ರ ಜನವರಿ 1ರಂದು 21, 741.90 ಅಂಕಗಳೊಂದಿಗೆ 2024ರ ವರ್ಷದ ವಹಿವಾಟು ಆರಂಭಿಸಿತ್ತು. ಇದೀಗ 1,913.4 ಅಂಕಗಳ ಏರಿಕೆಯೊಂದಿಗೆ ಶೇ.8.80ರಷ್ಟು ಏರಿಕೆಯೊಂದಿಗೆ ಹೊಸ ವರ್ಷಕ್ಕೆ ಕಾಲಿಟ್ಟಿದೆ. ಪ್ರಸ್ತುತ ಸೆನ್ಸೆಕ್ಸ್ 78,139.01 ಅಂಕಗಳು ಮತ್ತು ನಿಫ್ಟಿ 23,644.80 ಅಂಕಗಳಲ್ಲಿ ವಹಿವಾಟು ನಡೆಸುತ್ತಿವೆ.
2024ರಲ್ಲಿ ಭಾರತೀಯ ಷೇರುಪೇಟೆ ಕುಸಿತಕ್ಕೆ ಇರುವ ಪ್ರಮುಖ ಕಾರಣಗಳು
ಯುಎಸ್ ಫೆಡರಲ್ ರಿಸರ್ವ್ ಬಡ್ಡಿ ದರದಿಂದ ಷೇರು ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿದೆ. ಅಮೆರಿಕಾದ ಕೇಂದ್ರ ಬ್ಯಾಂಕ್ ಯುಎಸ್ ಫೆಡರಲ್ ರಿಸರ್ವ್ ಬಡ್ಡಿ ದರವನ್ನು 25 ಬೇಸಿಸ್ ಪಾಯಿಂಟ್ ತಗ್ಗಿಸಿದ್ದು, ಸತತ ಮೂರನೇ ಬಾರಿಗೆ ಬಡ್ಡಿ ದರ ಇಳಿಕೆ ಮಾಡಿದೆ. ಡಿಸೆಂಬರ್ 18 ರಂದು ಮುಕ್ತಾಯಗೊಂಡ ಫೆಡರಲ್ ರಿಸರ್ವ್ ಸಭೆಯಲ್ಲಿ ಯುಎಸ್ ಫೆಡ್ 4.25 ರಿಂದ 4.50 ಪರ್ಸೆಂಟ್ ರಲ್ಲಿ ಇರಿಸಲಾಗಿದೆ. ಇದರಿಂದ ಫೆಡ್ ಬಡ್ಡಿ ದರ ಕಡಿತದ ಮೇಲೆ 2025ರಲ್ಲಿ ಎರಡು ಬಾರಿ ಬಡ್ಡಿ ದರ ಕಡಿತದ ಮುನ್ಸೂಚನೆ ಕೊಟ್ಟಿದ್ದರ ಪರಿಣಾಮವಾಗಿ ಭಾರತೀಯ ಮಾರುಕಟ್ಟೆಗಳು ಸತತವಾಗಿ ಇಳಿಕೆ ಕಾಣುತ್ತಿವೆ ಎಂದೇ ಹೇಳಬಹುದು.


Click it and Unblock the Notifications