ಭಾರತೀಯ ಷೇರು ಮಾರುಕಟ್ಟೆಯು ಇಂದಿನ ಸೆಷನ್‌ನಲ್ಲಿ ಸಾಕಷ್ಟು ಏರಿಳಿತದ ಬಳಿಕ ನಷ್ಟದಲ್ಲಿ ಮುಚ್ಚಿದೆ. ಹೌದು, ಇಂದು ಹಿಂದಿನ ಸೆಷನ್‌ನ ಗಳಿಕೆಯಿಂದ ಕಂಬ್ಯಾಂಕ್ ಮಾಡಿದ ಷೇರುಪೇಟೆ ಕೊನೆಗೆ ರೆಡ್ ಮಾರ್ಕ್‌ನಲ್ಲಿ ಮುಚ್ಚಿತು.ಹಾಗಿದ್ರೆ ಇಂದಿನ ಷೇರಿನಲ್ಲಿ ಸೆನ್ಸೆಕ್ಸ್ ನಿಫ್ಟಿ ಸೂಂಚಕವು ಎಷ್ಟು ಇಳಿಕೆ ಕಂಡಿದೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಹೌದು ಇದೇ ವಾರದಲ್ಲಿ ಯುಎಸ್ ಫೆಡರಲ್ ರಿಸರ್ವ್ ಸಭೆ ನಡೆಯಲಿದ್ದು,ಡಿಸೆಂಬರ್ 18ರಂದು ಬಡ್ಡಿ ದರ ಪ್ರಕಟಗೊಳ್ಳುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಸಾಕಷ್ಟು ಎಚ್ಚರಿಕೆಯನ್ನು ವಹಿಸುತ್ತಿದ್ದಾರೆ. ಇಂದಿನ ಷೇರುಗಳ ವಹಿವಾಟಿನಲ್ಲಿ ಫಾರ್ಮಾ ಮತ್ತು ಪಿಎಸ್‌ಯು ಸ್ಟಾಕ್‌ಗಳು ಏರಿಕೆಯನ್ನು ಸಾಧಿಸಿವೆ. ಆದ್ರೆ ಐಟಿ ಮತ್ತು ಫೈನಾನ್ಷಿಯಲ್ ಸ್ಟಾಕ್‌ಗಳಲ್ಲಿ ಮಾರಾಟ ಕಂಡುಬಂದಿದೆ. ದಿನದ ಕೊನೆಯಲ್ಲಿ ಸೆನ್ಸೆಕ್ಸ್ 384.55 ಅಂಕಗಳು ಅಥವಾ 0.47 ಅಂಕಗಳಲ್ಲಿ ಕುಸಿದು 81,748.57 ಮಾರ್ಕ್‌ನಲ್ಲಿ ಮುಚ್ಚಿದೆ.

ನಿಫ್ಟಿ ಸೂಚ್ಯಂಕವು 100.5 ಅಂಕಗಳಿಗೆ ಇಳಿಕೆಗೊಂಡು 24,668.25 ಮಾರ್ಕ್‌ನಲ್ಲಿ ಕೊನೆಗೊಂಡಿದೆ. ಸಾಕಷ್ಟು ಏರಿಳಿತಗಳ ನಡುವೆ ಭಾರತೀಯ ಷೇರು ಮಾರುಕಟ್ಟೆಯು ಫ್ಲ್ಯಾಟ್ ಆಗಿ ತೆರೆದುಕೊಂಡಿತು.ಫೆಡರಲ್ ರಿಸರ್ವ್ ಬಡ್ಡಿ ದರಗಳು ಹೂಡಿಕೆದಾರನ್ನು ಗಮನ ಸಳೆದವು.
ಯಾವೆಲ್ಲಾ ಷೇರುಗಳು ಏರಿಕೆ ಕಂಡಿವೆ?
ಭಾರತೀಯ ಷೇರುಪೇಟೆಯಲ್ಲಿ ಇಂದು ಟೈಟಾನ್ ಕಂಪನಿ, ಟಿಸಿಎಸ್, ಹಿಂಟಾಲ್ಕೊ ಇಂಡಸ್ಟ್ರೀಸ್, ಅದಾನಿ ಪೋರ್ಟ್ಸ್, ಬಿಪಿಸಿಎಲ್ ಟಾಪ್ ಲೂಸರ್ಸ್ ಆಗಿವೆ. ಇದೇ ವೇಳೆಯಲ್ಲಿ ಡಾ. ರೆಡ್ಡಿ ಲ್ಯಾಬ್ಸ್, ಇಂಡಸ್‌ಇಂಡ್ ಬ್ಯಾಂಕ್, ಬಜಾಜ್ ಫೈನಾನ್ಸ್, ಪವರ್ ಗ್ರಿಡ್ ಮತ್ತು ಎಚ್‌ಡಿಎಫ್‌ಸಿ ಲೈಫ್ ನ ಷೇರುಗಲು ಏರಿಕೆ ಕಂಡಿದೆ.
ಬಿಎಸ್‌ಇ ಮಿಡ್ ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಸೋಮವಾರ 0.5 ಪರ್ಸೆಂಟ್‌ನಷ್ಟು ಇಳಿಕೆಗೆ ಸಾಕ್ಷಿಯಾಗಿದ್ದು, ಔಟ್‌ಪರ್ಫಾಮೆನ್ಸ್‌ನಿಂದ ಕೂಡಿವೆ. ವಲಯವಾರು ಸೂಚ್ಯಂಕವನ್ನು ನೋಡುವುದಾದರೆ ನಿಫ್ಟಿ ಸೂಚ್ಯಂಕ 3 ಪರ್ಸೆಂಟ್, ಮೀಡಿಯಾ ಸೂಚ್ಯಂಕವು 1.5 ಪರ್ಸೆಂಟ್ ಮತ್ತು ಪಿಎಸ್‌ಯು ಬ್ಯಾಂಕ್ ಸೂಚ್ಯಂಕವು 0.5 ಪರ್ಸೆಂಟ್ ಏರಿಕೆಗೊಂಡಿವೆ. ಆದ್ರೆ ಇದೇ ವೇಳೆಯಲ್ಲಿ ಐಟಿ, ಮೆಟಲ್, ಆಯಿಲ್ ಮತ್ತು ಗ್ಯಾಸ್ 0.5 ರಿಂದ 1 ಪರ್ಸೆಂಟ್ ಕುಸಿತ ಕಂಡಿವೆ.
ಬಿಎಸ್‌ಇನಲ್ಲಿ ಇಂದು 300ಕ್ಕೂ ಹೆಚ್ಚು ಸ್ಟಾಕ್‌ಗಳು 52 ವಾರಗಳ ಗರಿಷ್ಠ ಮಟ್ಟದಲ್ಲಿ ವಹಿವಾಟು ನಡೆಸಿದ್ದೇವೆ. ಅವುಗಳಲ್ಲಿ ಒಬೆರಾಯ್ ರಿಯಾಲ್ಟಿ, ಕೇನ್ಸ್ ಟೆಕ್ನಾಲಜೀಸ್, ಡಿಕ್ಸಾನ್ ಟೆಕ್ನಾಲಜೀಸ್, 360 ಒನ್ ವಾರ್ಮ್, ಅಫ್ಲೇ ಇಂಡಿಯಾ, ಲಾಯ್ಡ್ ಮೆಟಲ್ಸ್, ಪೇಟಿಎಂ, ಇಂಡಿಯನ್ ಹೋಟೆಲ್ಸ್, ಇನ್ಫೋ ಎಡ್ಜ್, ಎಚ್‌ಬಿಎಲ್ ಪವರ್, ಕೆಪಿಆರ್ ಮಿಲ್ಸ್, ಪೇಜ್ ಇಂಡಸ್ಟ್ರೀಸ್, ರಾಮ್ಕೊ ಇಂಡಸ್ಟ್ರೀಸ್, ಎಲ್‌ಟಿಐ ಮೈಂಡ್ ಟ್ರೀ ಸೇರಿದಂತೆ ಸುಮಾರು 300 ಸ್ಟಾಕ್‌ಗಳು 52 ವಾರಗಳ ಗರಿಷ್ಠ ಮಟ್ಟವನ್ನು ತಲಪಿದೆ.
ಡಿಸೆಂಬರ್ 19 ರಂದು ಯುಎಸ್ ಫೆಡರಲ್ ರಿಸರ್ವ್ ನಿರ್ಧಾರವು ಭಾರತೀಯ ಮಾರುಕಟ್ಟೆಗಳಿಗೆ ನಿರ್ದಿಷ್ಟವಾಗಿ ಬ್ಯಾಂಕಿಂಗ್ ಮತ್ತು ರಿಯಾಲ್ಟಿಯಂತಹ ದರ ಸೂಕ್ಷ್ಮ ವಲಯಗಳಲ್ಲಿ ಮೂಲಸೌಕರ್ಯ ಮತ್ತು ಮಿಡ್‌ಕ್ಯಾಪ್ ಸ್ಟಾಕ್‌ಗಳಲ್ಲಿ ನಡೆಯುತ್ತಿರುವ ಸ್ಟಾಕ್ ನಿರ್ದಿಷ್ಟ ಬೆಳವಣಿಗೆಗಳು ಹತ್ತಿರದ ಅವಧಿಯಲ್ಲಿ ಹೂಡಿಕೆದಾರರ ಆಸಕ್ತಿಯನ್ನು ಹೆಚ್ಚಿಸುವ ನಿರೀಕ್ಷೆಯಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಷೇರು ಮಾರುಕಟ್ಟೆ ಹೂಡಿಕೆದಾರರೇ, ಈ ವಾರ ಎಚ್ಚರ ತಪ್ಪಿದರೆ ನಷ್ಟ!

ಷೇರು ಮಾರುಕಟ್ಟೆ ಏರಿಳಿತ: ಇಂದಿನ ಹೂಡಿಕೆದಾರರ ಆತಂಕವೇನು?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ನಿಫ್ಟಿ 24,000 ದಾಟಿದೆ: ಸೋಮವಾರದ ಲಾಭಕ್ಕೆ ಈ ಷೇರುಗಳೇ ದಾರಿ!

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರಿಗೆ ಭರ್ಜರಿ ಲಾಭ ಸಿಗುತ್ತಾ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications